– ಬೆಲೆ ಎಷ್ಟು ಗೊತ್ತಾ, ಏನಿದೆ ವಿಶೇಷತೆ?- ಇಲ್ಲಿದೆ ಮಾಹಿತಿ
ಬೆಂಗಳೂರು: ಸ್ಯಾಮ್‍ಸಂಗ್ ಪ್ರೀಮಿಯಂ ಸ್ಮಾರ್ಟ್‍ಫೋನ್ ಗ್ಯಾಲಕ್ಸಿ ಎಸ್ 10 ಲೈಟ್‍ನ 512 ಜಿಬಿ ಆಂತರಿಕ ಮೆಮೊರಿಯ ಮೊಬೈಲ್ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಸಿದ್ಧವಾಗಿದೆ.
ಈ ಹೊಸ ಮೊಬೈಲ್‍ನ ಬೆಲೆ 44,999 ರೂ. ಆಗಿದ್ದು, ಪ್ರಿಸ್ಮ್ ವೈಟ್, ಪ್ರಿಸ್ಮ್ ಬ್ಲ್ಯಾಕ್ ಮತ್ತು ಪ್ರಿಸ್ಮ್ ಬ್ಲೂ ಕಲರ್‍ನಲ್ಲಿ ಲಭ್ಯವಿದೆ. ಚಿಲ್ಲರೆ ಅಂಗಡಿ, ಸ್ಯಾಮ್‍ಸಂಗ್ ಒಪೇರಾ ಹೌಸ್, ಅಧಿಕೃತ ವೆಬ್‍ಸೈಟ್ ಸೇರಿದಂತೆ ಪ್ರಮುಖ ಆನ್‍ಲೈನ್ ಪೋರ್ಟಲ್‍ಗಳಿಂದ ಮೊಬೈಲ್ ಅನ್ನು ಖರೀದಿಸಬಹುದಾಗಿದೆ.
Advertisement
Advertisement
ಹಳೆಯ ಫೋನ್‍ಗಳ ವಿನಿಮಯದಲ್ಲಿ 5 ಸಾವಿರ ರೂಪಾಯಿಗಳ ಕ್ಯಾಶ್ ಬ್ಯಾಕ್ ಸಹ ನೀಡಲಾಗುತ್ತಿದೆ. ಹಿಂದಿನ ಗ್ಯಾಲಕ್ಸಿ ಎಸ್ 10 ಲೈಟ್ ಕೇವಲ 8 ಜಿಬಿ ರ‍್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಮೆಮೊರಿಯ ಮಾತ್ರ ಲಭ್ಯವಿತ್ತು. ಮಾರ್ಚ್ 1ರಿಂದ ಫೋನ್ ಮಾರಾಟ ಪ್ರಾರಂಭವಾಗಲಿದೆ.
Advertisement
ವಿಶೇಷತೆ ಏನು?:
ಈ ಮೊಬೈಲಿಗೆ ಹಿಂದುಗಡೆ ಟ್ರಿಪಲ್ ಕ್ಯಾಮೆರಾ ನೀಡಲಾಗಿದೆ. ಇದು 48 ಮೆಗಾಪಿಕ್ಸೆಲ್ ಸ್ಟಡಿ ಒಐಎಸ್ ಕ್ಯಾಮೆರಾ ಆಗಿದ್ದು, 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಹಾಗೂ 5 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಹೊಂದಿದೆ. ಜೊತೆಗೆ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 10 ಲೈಟ್ ಒಳಗೊಂಡಿದೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ಇದು ಸೂಪರ್-ಸ್ಟಡಿ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ವೈಶಿಷ್ಟ್ಯವನ್ನು ಹೊಂದಿದೆ. ಪ್ರಯಾಣದಲ್ಲಿರುವಾಗ ವಿಡಿಯೋ ಮಾಡಿದರೆ ಮಸುಕಾಗುವುದಿಲ್ಲ.
Advertisement
ಡಿಸ್ಪ್ಲೇ ಗಾತ್ರ- 6.7 ಇಂಚು (ಪೂರ್ಣ ಎಚ್‍ಡಿ ಪ್ಲಸ್, ಸೂಪರ್ ಅಮೋಲೆಡ್ ಪ್ಲಸ್, ಇನ್ಫಿನಿಟಿ-ಒ)
ಸಿಮ್- ಡ್ಯುಯಲ್ ನ್ಯಾನೋ ಸಿಮ್
ಓಎಸ್- ಆಂಡ್ರಾಯ್ಡ್ 10
ಪ್ರೊಸೆಸರ್ – ಕ್ವಾಲ್ಕಾಮ್ ಪ್ರೊಸೆಸರ್ ಆಕ್ಟಾ 855 ಕೋರ್
ರ‍್ಯಾಮ್- 8 ಜಿಬಿ
ಸ್ಟೋರೆಜ್ ಮೆಮೊರಿ- 128 ಜಿಬಿ/ 512 ಜಿಬಿ
ಸ್ಟೋರೆಜ್ ವಿಸ್ತರಣಾ ಮೆಮೊರಿ – 1 ಟಿಬಿ (ಮೈಕ್ರೊ ಎಸ್‍ಡಿ ಕಾರ್ಡ್)
ಹಿಂಬದಿಯ ಕ್ಯಾಮೆರಾ- 48 ಎಂಪಿ +12 ಎಂಪಿ (ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್) +5 ಎಂಪಿ (ಮ್ಯಾಕ್ರೋ ಲೆನ್ಸ್) ಫ್ರಂಟ್ ಕ್ಯಾಮೆರಾ
ಮುಂಭಾಗದ ಕ್ಯಾಮೆರಾ- 32 ಮೆಗಾಪಿಕ್ಸೆಲ್
ಚಾರ್ಜರ್- 25 ವ್ಯಾಟ್
ಬ್ಯಾಟರಿ- 4500 ವ್ಯಾಟ್
ಲಾಕ್- ಡಿಸ್ಪ್ಲೇ ಮೇಲೆ ಫಿಂಗಪ್ರಿಂಟ್ ಲಾಕ್
ತೂಕ- 186 ಗ್ರಾಂ