ನವದೆಹಲಿ: ಸ್ಯಾಮ್‍ಸಂಗ್ ತನ್ನ ನೂತನ ಹೈ ಎಂಡ್ ಮಾದರಿಯ ಗೆಲಾಕ್ಸಿ ನೋಟ್ 9 ಸ್ಮಾರ್ಟ್ ಫೋನನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.
ನೂತನ ಗೆಲಾಕ್ಸಿ ನೋಟ್ 9 ಸ್ಮಾರ್ಟ್ ಫೋನ್ ಸೆಲ್ಫಿಗಾಗಿ 8ಎಂಪಿ ಸ್ಮಾರ್ಟ್ ಟೋನ್ ಹೆಚ್‍ಡಿಆರ್ ಕ್ಯಾಮೆರಾ ಹೊಂದಿದ್ದು, ಹಿಂದುಗಡೆ 12ಎಂಪಿ+12ಎಂಪಿ ಹೊಂದಿರುವ ಡ್ಯುಯಲ್ ಕ್ಯಾಮೆರಾ ಹೊಂದಿದೆ. ತಾಮ್ರ, ನೇರಳೆ, ಸಮುದ್ರ ನೀಲಿ, ಕಪ್ಪು ಬಣ್ಣದಲ್ಲಿ ಈ ಫೋನ್ ಲಭ್ಯವಿದೆ.
Advertisement
Advertisement
ಬೆಲೆಎಷ್ಟು?
6ಜಿಬಿ RAM/128 ಜಿಬಿ ಆಂತರಿಕ ಮೆಮೊರಿ ಮಾದರಿಗೆ 67,900 ರೂ. ಆಗಿದ್ದು, 8ಜಿಬಿ RAM/512 ಜಿಬಿ ಆಂತರಿಕ ಮೆಮೊರಿ ಮಾದರಿಗೆ 84,900 ರೂ. ನಿಗದಿಯಾಗಿದೆ. ಆನ್‍ಲೈನ್ ಹಾಗೂ ಆಫ್‍ಲೈನ್ ಮಾರುಕಟ್ಟೆಗಳೆರಡರಲ್ಲೂ ನೂತನ ಸ್ಯಾಮಸಂಗ್ ಗೆಲಾಕ್ಸಿ ನೋಟ್ 9 ಸ್ಮಾರ್ಟ್ ಫೋನ್ ಖರೀದಿಗೆ ಸಿಗಲಿದೆ.
Advertisement
Advertisement
ಸ್ಯಾಮಸಂಗ್ ಗೆಲಾಕ್ಸಿ ನೋಟ್ 9ಫೋನಿನ ಗುಣ ವೈಶಿಷ್ಟ್ಯಗಳು:
ಬಾಡಿ ಮತ್ತು ಡಿಸ್ಪ್ಲೇ: 161.9 x 76.4 x 8.8 ಮಿ.ಮೀ., 201 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ), 6.4 ಇಂಚಿನ ಸೂಪರ್ ಅಮೊಲೆಡ್ ಇನ್ಫಿನಿಟಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(1440×2960 ಪಿಕ್ಸೆಲ್, 18.5:9 ಅನುಪಾತ 516ಪಿಪಿಐ)
ಪ್ಲಾಟ್‍ಫಾರಂ ಮತ್ತು ಮೆಮೊರಿ:
ಆಂಡ್ರಾಯ್ಡ್ 8.1 (ಓರಿಯೋ), ಎಕ್ಸಿನೋಸ್ 9810 ಅಕ್ಟಾ ಕೋರ್ ಪ್ರೊಸೆಸರ್ 2.8 ಗೀಗಾಹಟ್ರ್ಸ್ ಸ್ಪೀಡ್, ಅಡ್ರಿನೋ 630 ಗ್ರಾಫಿಕ್ ಪ್ರೊಸೆಸರ್ ಹೊಂದಿದ್ದು, 6ಜಿಬಿ RAM/128 ಜಿಬಿ ಆಂತರಿಕ ಮೆಮೊರಿ ಹಾಗೂ 8ಜಿಬಿ RAM/512 ಜಿಬಿ ಆಂತರಿಕ ಮೆಮೊರಿಯನ್ನು ಹೊಂದಿದ್ದು, ಯಾವುದೇ ವಿಸ್ತರಣಾ ಸಾಮರ್ಥ್ಯ ಇಲ್ಲ.
ಕ್ಯಾಮೆರಾ ಹಾಗೂ ಇತರೆ ಫೀಚರ್ ಗಳು:
ಮುಂಭಾಗ 8ಎಂಪಿ, ಆಟೋ ಎಚ್‍ಡಿಆರ್ ಕ್ಯಾಮೆರಾ ಹೊಂದಿದ್ದು, ಹಿಂಭಾಗ 12ಎಂಪಿ+12ಎಂಪಿ ಆಟೋಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್ ಸೌಲಭ್ಯ ಹೊಂದಿದೆ. ಜೊತೆಗೆ ಫಿಂಗರ್ ಪ್ರಿಂಟ್ ಸೆನ್ಸರ್, ಐರಿಸ್ ಸೆನ್ಸರ್ ಹೊಂದಿದೆ. 4,000 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು ಜೊತೆಗೆ ಫಾಸ್ಟ್ ಚಾರ್ಜಿಂಗ್(ಕ್ವಿಕ್ ಚಾರ್ಜ್ 2.0) ಸೌಲಭ್ಯವನ್ನು ಹೊಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews