ನವದೆಹಲಿ: ಭಾರತದ ಪ್ರತಿಷ್ಠಿತ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆ ಸ್ಯಾಮ್‍ಸಂಗ್ ತನ್ನ ಜೆ7 ಡ್ಯುಯೋಸ್ ಹಾಗೂ ಜೆ6 ಮಾದರಿಯ ಸ್ಮಾರ್ಟ್ ಫೋನ್‍ಗಳಲ್ಲಿ ಬೆಲೆಯನ್ನು ಇಳಿಕೆ ಮಾಡಿದೆ.
ಏಪ್ರಿಲ್‍ನಲ್ಲಿ ಬಿಡುಗಡೆಯಾದ ಸಂದರ್ಭದಲ್ಲಿ ಜೆ7 ಡ್ಯುಯೋಸ್‍ನ ಮುಖಬೆಲೆ 16,990 ರೂ. ಆಗಿದ್ದರೆ ಪ್ರಸ್ತುತ ಈಗ 13,990 ರೂಪಾಯಿ ಆಗಿದೆ. ಜೆ6 ಸ್ಮಾರ್ಟ್ ಫೋನ್ ಮೇ ತಿಂಗಳಿನಲ್ಲಿ 14,990 ರೂ. ಬೆಲೆಯಲ್ಲಿ ಬಿಡುಗಡೆಯಾಗಿತ್ತು. ಈಗ ಈ ಫೋನ್ 12,990 ರೂ.ಗೆ ಲಭ್ಯವಿದೆ.
Advertisement
Advertisement
ಸ್ಯಾಮ್‍ಸಂಗ್ ಜೆ7 ಡ್ಯುಯೋಸ್ 4ಜಿಬಿ RAM/32 ಜಿಬಿ ಆತಂರಿಕ ಮೊಮೊರಿ ಹೊಂದಿರುವ ಸ್ಮಾರ್ಟ್ ಫೋನ್ ಚಿನ್ನ, ನೀಲಿ ಹಾಗೂ ಕಪ್ಪು ಬಣ್ಣಗಳಲ್ಲಿ ಲಭ್ಯವಿದ್ದು ಬೆಲೆ 13,990 ರೂ. ಆಗಿದೆ. ಜೆ6 3ಜಿ RAM/32 ಜಿಬಿ ಆಂತರಿಕ ಮೊಮೊರಿ ಹೊಂದಿದ್ದು, ಚಿನ್ನ, ನೀಲಿ ಹಾಗೂ ಕಪ್ಪು ಬಣ್ಣಗಳಲ್ಲಿ ಲಭ್ಯವಿದ್ದು ಬೆಲೆ 12,990 ರೂ. ಆಗಿದೆ.
Advertisement
ಸ್ಯಾಮ್‍ಸಂಗ್ ಜೆ7 ಡ್ಯುಯೋಸ್ ಸ್ಮಾರ್ಟ್ ಫೋನಿನ ಗುಣ ವೈಶಿಷ್ಟ್ಯಗಳು:
ಬಾಡಿ ಮತ್ತು ಡಿಸ್ಪ್ಲೇ: 153.5 x 77.2 x 8.2 ಮಿ.ಮೀ. ಗಾತ್ರ, 174 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ) ವಿತ್ ಮೆಮೊರಿ ಕಾರ್ಡ್ ಸ್ಲಾಟ್ ಸೌಲಭ್ಯ, 5.5 ಇಂಚಿನ ಸೂಪರ್ ಅಮೊಲೆಡ್ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(720X1280 ಪಿಕ್ಸೆಲ್, 16:9 ಅನುಪಾತ, 267ಪಿಪಿಐ)
Advertisement
ಪ್ಲಾಟ್ ಫಾರಂ ಮತ್ತು ಮೆಮೊರಿ:
ಆಂಡ್ರಾಯ್ಡ್ 8.0 (ಓರಿಯೋ), ಎಕ್ಸಿನೋಸ್ 7885 ಅಕ್ಟಾ ಕೋರ್ ಪ್ರೊಸೆಸರ್, 2.2 ಗೀಗಾಹಟ್ರ್ಸ್ ಸ್ಪೀಡ್, 4ಜಿಬಿ RAM/32 ಜಿಬಿ ಆಂತರಿಕ ಮೆಮೊರಿ ಹೊಂದಿದ್ದು, 256 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ ಹೊಂದಿದೆ.
ಕ್ಯಾಮೆರಾ ಹಾಗೂ ಇತರೆ ಫೀಚರ್ ಗಳು:
ಮುಂಭಾಗ 8ಎಂಪಿ ಎಚ್‍ಡಿ ಕ್ಯಾಮೆರಾ, ಹಿಂಭಾಗ 13+5ಎಂಪಿ ಡ್ಯುಯಲ್ ಕ್ಯಾಮೆರಾ ಹೊಂದಿದ್ದು, ಆಟೋ ಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಆಟೋ ಫೋಕಸ್ ಹಾಗೂ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್ ಹೊಂದಿದ್ದು, ಫಿಂಗರ್ ಪ್ರಿಂಟ್ ಸೆನ್ಸರ್, 3,000 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ ಸೌಲಭ್ಯವನ್ನು ಹೊಂದಿದೆ.
ಸ್ಯಾಮ್‍ಸಂಗ್ ಜೆ6 ಸ್ಮಾರ್ಟ್ ಫೋನಿನ ಗುಣ ವೈಶಿಷ್ಟ್ಯಗಳು:
ಬಾಡಿ ಮತ್ತು ಡಿಸ್ಪ್ಲೇ: 149.3 x 70.2 x 8.2 ಮಿ.ಮೀ. ಗಾತ್ರ, 154 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ) ವಿತ್ ಮೆಮೊರಿ ಕಾರ್ಡ್ ಸ್ಲಾಟ್ ಸೌಲಭ್ಯ, 5.6 ಇಂಚಿನ ಸೂಪರ್ ಅಮೊಲೆಡ್ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(720X1480 ಪಿಕ್ಸೆಲ್, 18.5:9 ಅನುಪಾತ, 293ಪಿಪಿಐ)
ಪ್ಲಾಟ್ ಫಾರಂ ಮತ್ತು ಮೆಮೊರಿ:
ಆಂಡ್ರಾಯ್ಡ್ 8.0 (ಓರಿಯೋ), ಎಕ್ಸಿನೋಸ್ 7870 ಅಕ್ಟಾ ಕೋರ್ ಪ್ರೊಸೆಸರ್, 1.6 ಗೀಗಾಹಟ್ರ್ಸ್ ಸ್ಪೀಡ್, 3ಜಿಬಿ RAM/32 ಜಿಬಿ ಆಂತರಿಕ ಮೆಮೊರಿ ಹೊಂದಿದ್ದು, 256 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ ಹೊಂದಿದೆ.
ಕ್ಯಾಮೆರಾ ಹಾಗೂ ಇತರೆ ಫೀಚರ್ ಗಳು:
ಮುಂಭಾಗ 8ಎಂಪಿ ಎಚ್‍ಡಿ ಕ್ಯಾಮೆರಾ, ಹಿಂಭಾಗ 13ಎಂಪಿ ಆಟೋ ಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಆಟೋ ಫೋಕಸ್ ಹಾಗೂ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್ ಹೊಂದಿದ್ದು, ಕಾರ್ನಿಂಗ್ ಗೊರಿಲ್ಲಾ ಸ್ಕ್ರೀನ್ ಪ್ರೊಟೆಕ್ಷನ್, ಫಿಂಗರ್ ಪ್ರಿಂಟ್ ಸೆನ್ಸರ್, 3,000 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ ಸೌಲಭ್ಯವನ್ನು ಹೊಂದಿದೆ.
https://www.youtube.com/watch?v=480_MSd16NA