International
ಸ್ಯಾಮ್ ಸಂಗ್ ಗ್ರೂಪ್ ಮುಖ್ಯಸ್ಥನಿಗೆ 5 ವರ್ಷ ಜೈಲು ಶಿಕ್ಷೆ!

ಸಿಯೋಲ್: ಲಂಚ ಪ್ರಕರಣದಲ್ಲಿ ಸಿಲುಕಿದ್ದ ಜನಪ್ರಿಯ ಮೊಬೈಲ್ ಕಂಪನಿ ಸ್ಯಾಮ್‍ಸಂಗ್ ಗ್ರೂಪ್‍ನ ಮುಖ್ಯಸ್ಥ ಜೇ ವೈಲಿ ಅವರಿಗೆ ಕೋರ್ಟ್ ಐದು ವರ್ಷಗಳ ಜೈಲು ಶಿಕ್ಷೆಯನ್ನು ಪ್ರಕಟಿಸಿದೆ.
ಸ್ಯಾಮ್ ಸಂಗ್ ಕಂಪನಿಯೊಂದಿಗೆ ದೋಸ್ತಿ ಹೊಂದಿರುವ ದಕ್ಷಿಣ ಕೊರಿಯಾದ ಪದಚ್ಯುತ ಅಧ್ಯಕ್ಷೆಯಾದ ಪಾರ್ಕ್ ಗುಯೆನ್ ಹೈಗೆ 40 ದಶಲಕ್ಷ ಡಾಲರ್ ಲಂಚ ನೀಡಿದ ಆರೋಪದಡಿ ಫೆಬ್ರವರಿ ತಿಂಗಳಲ್ಲಿ ಲೀ ಬಂಧಿತರಾಗಿದ್ದರು. ಆರು ತಿಂಗಳ ಸುದೀರ್ಘ ವಿಚಾರಣೆಯ ಬಳಿಕ ಜೇ ವೈಲೀ ಅವರು ತಪ್ಪಿತಸ್ಥರು ಎಂದು ಹೇಳಿರುವ ನ್ಯಾಯಾಲಯ ಹೇಳಿದೆ.
49 ವರ್ಷದ ಜೈ ವೈ ಲೀಯನ್ನು ಕೈಕೋಳದೊಂದಿಗೆ ಜಸ್ಟೀಸ್ ಮಿನಿಸ್ಟ್ರಿ ಬಸ್ ನಲ್ಲಿ ಸಿಯೋಲ್ ಸೆಂಟ್ರಲ್ ಜಿಲ್ಲಾ ನ್ಯಾಯಾಲಯಕ್ಕೆ ಕರೆತಂದಿದ್ದರು. ನ್ಯಾಯಾಲಯದ ವಿಚಾರಣೆ ವೇಳೆ ಜೇ ವೈ ಲೀ ಅವರು ತಾವು ಯಾವುದೇ ಭ್ರಷ್ಟಾಚಾರ ಎಸಗಿಲ್ಲ ಎಂದು ವಾದಿಸಿದ್ದರು. ಇನ್ನು ಕೆಲ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಿದ್ದೇವೆ ಎಂದು ಲೀ ಪರ ವಕೀಲ ಸಾಂಗ್ ವು ಚೆಯೇಲ್ ಹೇಳಿದ್ದಾರೆ.
