ಸಂಜು ಅಮೋಘ ಫಿಫ್ಟಿ, ಶಿವಂ ದುಬೆ ಆಲ್‌ರೌಂಡ್‌ ಆಟಕ್ಕೆ ಒಲಿದ ಜಯ; 4-1ರಲ್ಲಿ ಸರಣಿ ಗೆದ್ದ ಭಾರತ!

Public TV
3 Min Read
Team India 2 4

ಹರಾರೆ: ಸಂಜು ಸ್ಯಾಮ್ಸನ್ (Sanju Samson)​ ಅಮೋಘ ಅರ್ಧ ಶತಕ, ಶಿವಂ ದುಬೆ ಆಲ್‌ರೌಂಡ್‌ ಆಟ ಹಾಗೂ ಮುಕೇಶ್‌ ಕುಮಾರ್‌ ಮಾರಕ ಬೌಲಿಂಗ್‌ ದಾಳಿಯಿಂದ ಭಾರತ ತಂಡ (Team India) ಜಿಂಬಾಬ್ವೆ ವಿರುದ್ಧ ಟಿ20 ಸರಣಿಯ 5ನೇ ಪಂದ್ಯದಲ್ಲೂ 42 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯನ್ನು 4-1ರಲ್ಲಿ ಗೆದ್ದುಕೊಂಡಿದೆ.

ಆರಂಭಿಕ ಪಂದ್ಯದಲ್ಲಿ ಅತ್ಯಲ್ಪ ಮೊತ್ತವಿದ್ದರೂ ಅಚ್ಚರಿ ಸೋಲು ಕಂಡಿದ್ದ ಯುವ ಬಳಗದ ಭಾರತ ತಂಡ ಬಳಿಕ ಸತತ ನಾಲ್ಕೂ ಪಂದ್ಯಗಳಲ್ಲೂ ಭರ್ಜರಿ ಗೆಲುವಿನೊಂದಿಗೆ ಸರಣಿ ತನ್ನದಾಗಿಸಿಕೊಂಡಿದೆ. ಅಲ್ಲದೇ ತನ್ನ ನಾಯಕತ್ವದಲ್ಲಿ ನಡೆದ ಮೊಟ್ಟ ಮೊದಲ ಅಂತಾರಾಷ್ಟ್ರೀಯ ಟಿ20 ಸರಣಿಯಲ್ಲೇ ಗೆಲುವು ಸಾಧಿಸುವ ಮೂಲಕ ಶುಭಮನ್‌ ಗಿಲ್‌ (Shubman Gill) ನಾಯಕತ್ವದ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

Team India 3 3

ಭಾನುವಾರ ಹರಾರೆ ಸ್ಪೋರ್ಟ್ಸ್‌ಕ್ಲಬ್‌ ಮೈದಾನದಲ್ಲಿ ನಡೆದ ಕೊನೇ ಟಿ20 ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ತಂಡ 6 ವಿಕೆಟ್‌ ನಷ್ಟಕ್ಕೆ 167 ರನ್‌ ಬಾರಿಸಿತ್ತು. 168 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಜಿಂಬಾಬ್ವೆ (Zimbabwe), ಟೀಂ ಇಂಡಿಯಾ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿ 18.3 ಓವರ್‌ಗಳಲ್ಲೇ 125 ರನ್‌ಗಳಿಗೆ ಸರ್ವಪತನ ಕಂಡಿತು. ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ – ನಿತ್ಯ 8 ಸಾವಿರ ಕ್ಯುಸೆಕ್‌ ನೀರು ಹರಿಸಲು ಸರ್ಕಾರ ನಿರ್ಧಾರ: ಸಿಎಂ

Team India 10

ಆರಂಭದಲ್ಲೇ ಸ್ಫೋಟಕ ಪ್ರದರ್ಶನಕ್ಕೆ ಮುಂದಾಗಿದ್ದ ಭಾರತ ತಂಡಕ್ಕೆ ಆಘಾತ ಎದುರಾಗಿತ್ತು. ಮೊದಲ ಐದು ಓವರ್‌ಗಳಲ್ಲೇ 40 ರನ್‌ಗಳಿಗೆ ಪ್ರಮುಖ ಮೂರು ವಿಕೆಟ್‌ ಕಳೆದುಕೊಂಡಿತ್ತು. ಈ ವೇಳೆ ಕ್ರೀಸ್‌ನಲ್ಲಿ ಭದ್ರವಾಗಿ ಕ್ರೀಸ್‌ನಲ್ಲಿ ನೆಲೆಯೂರಿದ ಸಂಜು ಸ್ಯಾಮ್ಸನ್‌ ಹಾಗೂ ರಿಯಾನ್‌ ಪರಾಗ್‌ ಜೋಡಿ ಉತ್ತಮ ಇನ್ನಿಂಗ್ಸ್‌ ಕಟ್ಟುವಲ್ಲಿ ಯಶಸ್ವಿಯಾಯಿತು. 56 ಎಸೆತಗಳಲ್ಲಿ ಈ ಜೋಡಿ 4ನೇ ವಿಕೆಟ್‌ಗೆ 65 ರನ್‌ ಬಾರಿಸಿತ್ತು. ಈ ವೇಳೆ ಸಿಕ್ಸರ್‌ ಬಾರಿಸಲು ಮುಂದಾದ ರಿಯಾನ್‌ ಪರಾಗ್‌ ಕ್ಯಾಚ್‌ ನೀಡಿ ಔಟಾದರು. ಬಳಿಕ ಕ್ರೀಸ್‌ಗಿಳಿದ ಶಿವಂ ದುಬೆ (Shivam Dube) ಆರಂಭದಿಂದಲೇ ಸಿಕ್ಸರ್‌, ಬೌಂಡರಿ ಅಬ್ಬರಿಸಲು ಶುರು ಮಾಡಿದರು. ಇದರಿಂದ ಭಾರತ ತಂಡ 160 ರನ್‌ ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು.

ಸಂಜು 110 ಮೀಟರ್‌ ಸಿಕ್ಸರ್‌:
ಸಂಕಷ್ಟ ಸಮಯದಲ್ಲಿ ಉತ್ತಮ ಇನ್ನಿಂಗ್ಸ್‌ ಕಟ್ಟಿದ ಸಂಜು ಸ್ಯಾಮ್ಸನ್‌ 45 ಎಸೆತಗಳಲ್ಲಿ 1 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್‌ನೊಂದಿಗೆ 58 ರನ್‌ ಚಚ್ಚಿದರು. ಈ ವೇಳೆ ಸಂಜು ಸ್ಯಾಮ್ಸನ್‌ ಬಾರಿಸಿದ ಸಿಕ್ಸರ್‌ವೊಂದು 110 ಮೀಟರ್‌ ಸಾಗಿತು. ಸಂಜು ಸಿಡಿಲಬ್ಬರದ ಸಿಕ್ಸರ್‌ ಕಂಡು ಪ್ರೇಕ್ಷಕರೇ ದಂಗಾದರು. ಇದರೊಂದಿಗೆ ಶಿವಂ ದುಬೆ 28 ರನ್‌ (12 ಎಸೆತ, 2 ಸಿಕ್ಸರ್‌, 2 ಬೌಂಡರಿ), ರಿಯಾನ್‌ ಪರಾಗ್‌ 22 ರನ್‌, ಯಶಸ್ವಿ ಜೈಸ್ವಾಲ್‌ 12 ರನ್‌, ಶುಭಮನ್‌ ಗಿಲ್‌ 13 ರನ್‌, ಅಭಿಷೇಕ್‌ ಶರ್ಮಾ 14 ರನ್‌, ರಿಂಕು ಸಿಂಗ್‌ 11 ರನ್‌, ವಾಷಿಂಗ್ಟನ್‌ 10 ರನ್‌ಗಳ ಕೊಡುಗೆ ನೀಡಿದರು.  ಇದನ್ನೂ ಓದಿ: ಮುಸ್ಲಿಂ ಮಹಿಳೆ ವಿಚ್ಚೇದನ ಜೀವನಾಂಶಕ್ಕೆ ಅರ್ಹಳು: ಸುಪ್ರೀಂ ತೀರ್ಪು ಇಸ್ಲಾಮಿಕ್ ಕಾನೂನಿಗೆ ವಿರುದ್ಧವಾಗಿದೆ ಎಂದ ಮುಸ್ಲಿಂ ಬೋರ್ಡ್‌

Team India 4 1

ಮುಕೇಶ್‌ ಮಾರಕ ದಾಳಿ:
ಭಾರತ ನೀಡಿದ ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಜಿಂಬಾಬ್ವೆ 15 ರನ್​ಗೆ 2 ವಿಕೆಟ್​ ಕಳೆದುಕೊಂಡು ಆತಂಕಕ್ಕೆ ಸಿಲುಕಿತ್ತು. ಬಳಿಕ ಡಿಯೋನ್​ ಮೈರ್ಸ್​ 34 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಅಲ್ಲದೇ ಕೊನೆಯಲ್ಲಿ ಫರಾಜ್ ಅಕ್ರಮ್ 27 ರನ್ ಬಾರಿಸಿದರು. ಮರುಮಣಿ 27 ರನ್ ಕೊಡುಗೆ ನೀಡಿದ್ದು ಬಿಟ್ಟರೆ ಉಳಿದ ಯಾರೊಬ್ಬರೂ ಕ್ರೀಸ್‌ನಲ್ಲಿ ನೆಲೆಯೂರದ ಕಾರಣ ಜಿಂಬಾಬ್ವೆ ಕೊನೇ ಪಂದ್ಯದಲ್ಲೂ ಹೀನಾಯ ಸೋಲಿಗೆ ತುತ್ತಾಯಿತು. ಭಾರತ ಪರ ಬೌಲಿಂಗ್​ನಲ್ಲಿ ಮುಕೇಶ್ ಕುಮಾರ್​ 3.3 ಓವರ್‌ಗಳಲ್ಲಿ 22 ರನ್ ಬಿಟ್ಟುಕೊಟ್ಟು 4 ವಿಕೆಟ್ ಕಿತ್ತರೆ ಶಿವಂ ದುಬೆ 2 ವಿಕೆಟ್ ಪಡೆದರು. ಇದರೊಂದಿಗೆ ತುಷಾರ್‌ ದೇಶ್‌ಪಾಂಡೆ, ವಾಷಿಂಗ್ಟನ್‌ ಸುಂದರ್‌, ಅಭಿಷೇಕ್‌ ಶರ್ಮಾ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು. ಇದನ್ನೂ ಓದಿ: AR Wedding Celebrations: ಉದ್ಯಮಿ ಅಂತ ಹೇಳ್ಕೊಂಡು ಆಹ್ವಾನವಿಲ್ಲದೇ ಬಂದಿದ್ದ ಇಬ್ಬರ ವಿರುದ್ಧ ಕೇಸ್‌! 

Share This Article