ಉಡುಪಿ: ತಮಿಳು ನಟ ಇಳಯ ದಳಪತಿ ವಿಜಯ್ ಅಭಿನಯದ ಮೆರ್ಸೆಲ್ ಚಿತ್ರ ಸಾಕಷ್ಟು ವಿವಾದ ಸೃಷ್ಟಿ ಮಾಡಿದೆ. ನಟನ ವಿಚಾರದಲ್ಲಿ ಜಾತಿ ಧರ್ಮ ಕೂಡಾ ಸಾಕಷ್ಟು ಚರ್ಚೆಯಾಗುತ್ತಿದೆ. ರಾಜಕೀಯ ನುಸುಳಿ ದೊಡ್ಡ ಸುದ್ದಿಯಾಗಿದೆ. ಈ ನಡುವೆ ಬಹುಭಾಷಾ ಖಳನಟ ಸಂಪತ್ ರಾಜ್ ನಟ ವಿಜಯ್ ಪರ ಬ್ಯಾಟ್ ಬೀಸಿದ್ದಾರೆ.
ಕ್ರಿಯೇಟಿವ್ ಫೀಲ್ಡ್ ಸಿನೆಮಾವನ್ನು ಸಿನಿಮಾವಾಗಿ ಸ್ವೀಕರಿಸಬೇಕು. ಚಿತ್ರಕಥೆಯನ್ನು ನಿಜ ಜೀವನಕ್ಕೆ ಅಳವಡಿಸಿದರೆ ತೊಂದರೆ ಹೆಚ್ಚು ಎಂದರು. ಬಣ್ಣ ಹಚ್ಚುವ ಕಲಾವಿದನಿಗೆ ಜಾತಿ ಇಲ್ಲ, ನಾನು ಉತ್ತರ ಪ್ರದೇಶದಲ್ಲಿ ಹುಟ್ಟಿದವನು. ದೆಹಲಿಯಲ್ಲಿ ಬೆಳೆದು ಬೆಂಗಳೂರಲ್ಲಿ ನೆಲೆಸಿದ್ದೇನೆ. ಮದ್ರಾಸಿನಲ್ಲಿ ನಾನು ಹೆಚ್ಚು ಕೆಲಸ ಮಾಡುತ್ತೇನೆ ಎಂದು ಹೇಳಿದರು.
Advertisement
ಈವರೆಗೆ ಯಾರೂ ನನ್ನ ಜಾತಿ ಕೇಳಿಲ್ಲ. ಟೀಕೆಯನ್ನು ಹೇಗೆ ಸ್ವೀಕಾರ ಮಾಡುತ್ತೀರಿ ಅನ್ನೋದು ಮುಖ್ಯ. ಅದನ್ನು ಚಾಲೆಂಜಾಗಿ ಯಾಕೆ ತೆಗೆದುಕೊಳ್ಳಬಾರದು ಎಂದು ಪ್ರಶ್ನೆ ಮಾಡಿ ಮೋದಿ ಪರ ಬ್ಯಾಟ್ ಬೀಸಿ ತಮಿಳುನಾಡಿನ ಹೋರಾಟಗಾರರಿಗೆ ಟಾಂಗ್ ಕೊಟ್ಟರು.
Advertisement
ಅನುಕ್ತ ಚಿತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರಕಥೆ ಹಿಡಿಸಿದ್ದರಿಂದ ನಾನು ಒಪ್ಪಿಕೊಂಡೆ. ಉಡುಪಿಯಲ್ಲೇ ಬಂದು ಸೆಟಲ್ ಆಗುವ ಮನಸ್ಸಿದೆ. ಇಲ್ಲಿ ಟ್ರಾಫಿಕ್ಕೂ ಇಲ್ಲ, ಡರ್ಟಿ ವೆದರೂ ಇಲ್ಲ, ಕರಾವಳಿಯ ವಾತಾವರಣ- ಫುಡ್ ನಂಗೆ ಇಷ್ಟ. ನನ್ನ ಅಪ್ಪ ಅಮ್ಮನ ಪುಣ್ಯದ ಫಲ, ಹೀಗಾಗಿ ಶ್ರೀಕೃಷ್ಣನ ದರ್ಶನ ಆಗಿದೆ. ಎಲ್ಲರಿಗೂ ಒಳಿತು ಮಾಡು ಭಗವಂತನಲ್ಲಿ ಪ್ರಾರ್ಥಿಸಿದೆ ಎಂದು ಹೇಳಿದರು.