ಬೆಂಗಳೂರು: ಸಂಪಾಜೆ ಘಾಟ್ ರಸ್ತೆಯಲ್ಲಿ ನಾಳೆಯಿಂದ ಎಲ್ಲ ರೀತಿಯ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗುತ್ತದೆ ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಗಾಗಲೇ ಜಿಲ್ಲಾಧಿಕಾರಿ ಜೊತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ. ನಾಳೆಯಿಂದ ಎಲ್ಲ ರೀತಿ ವಾಹನ ಓಡಾಡಬಹುದು. ಮಡಿಕೇರಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿಯ ತಡೆಗೋಡೆ ಬಾಗುತ್ತಿದೆ. ಕೇಂದ್ರ ತಂಡದ ಅಧಿಕಾರಿಗಳು ಕೂಡ ಅಲ್ಲಿಯೇ ಇದ್ದಾರೆ, ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
Advertisement
Advertisement
ಶಿರಾಡಿಘಾಟ್ ಸಮಸ್ಯೆಯನ್ನು ತಾತ್ಕಾಲಿಕವಾಗಿ ಬಗೆಹರಿಸಿದ್ದೇವೆ. ಶಿರಾಡಿ ಘಾಟ್ ಕೆಲಸ ಪೂರ್ಣವಾದರೆ ಶಾಶ್ವತ ಪರಿಹಾರ ಸಿಗಲಿದೆ. ಈಗ ನಡೆಯುತ್ತಿರುವ ಕೆಲಸಗಳು ಮಾರ್ಚ್ 2023ರ ಒಳಗಡೆ ಮುಗಿಯಲಿದೆ. ಗುತ್ತಿಗೆದಾರರ ದಿವಾಳಿ ಆಗಿದ್ದಕ್ಕೆ ಅಲ್ಲಿ ಕೆಲಸ ವಿಳಂಬವಾಗಿದೆ. ಅವಶ್ಯಕತೆ ಬಿದ್ದರೆ ನಿತಿನ್ ಗಡ್ಕರಿಯವರನ್ನೂ ಕೂಡ ಭೇಟಿ ಮಾಡಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಕಸ ಸಾಗಿಸೋ ವಾಹನದ ಮೇಲೆ ಹುಚ್ಚಾಟ – ಸಾಹಸ ಮಾಡಿ ಆಸ್ಪತ್ರೆ ಸೇರಿದ ಯುವಕ
Advertisement
ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ವಿರುದ್ಧ ನಾವು ಅಸಮಾಧಾನ ವ್ಯಕ್ತಪಡಿಸಿದ್ದೇವೆ. ಅಧಿಕಾರಿಗಳು ಘಾಟ್ ಕುಸಿತ ಆದ ಸ್ಥಳದಲ್ಲಿ ಮೊಕ್ಕಾಂ ಹೂಡಲು ಸೂಚಿಸಿದ್ದೇನೆ. ಮಣ್ಣಿನಲ್ಲಿ ಗಟ್ಟಿತನ ಹಿಡಿತ ಇಲ್ಲದ ಕಾರಣ ಸಹಜವಾಗಿ ಕುಸಿತ ಆಗುತ್ತದೆ. ಶಿರಾಡಿಘಾಟ್ ಕೆಲಸ ವಿಳಂಬ ಆಗಿದೆ ನಿಜ. ಸುರಂಗ ಮಾರ್ಗ ನಿರ್ಮಾಣ ಸಂಬಂಧ ಸಮಗ್ರ ಯೋಜನಾ ವರದಿ(ಡಿಪಿಆರ್) ಸಿದ್ದವಾಗುತ್ತಿದೆ. ಹೊಸ ತಂತ್ರಜ್ಞಾನದ ಮೂಲಕ ರಸ್ತೆ ಮಾಡುವ ಬಗ್ಗೆಯೂ ಡಿಪಿಆರ್ ಸಿದ್ದಪಡಿಸಲು ಸೂಚಿಸಿದ್ದೇವೆ ಎಂದರು.
Advertisement
ಮಡಿಕೇರಿ, ಶಿರಾಡಿಘಾಟ್ ಎಲ್ಲ ಭಾಗದಲ್ಲೂ ವೀಕ್ಷಣೆ ಮಾಡಿದ್ದು, ಸಿಎಂ ಬೊಮ್ಮಾಯಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚನೆ ನೀಡಿದ್ದಾರೆ. ಇವತ್ತು ಕೂಡ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ಜಿಲ್ಲಾಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿ ಕೆಲವು ಸಮಸ್ಯೆಗಳ ಗಮನ ತಂದಿದ್ದರು. ರಸ್ತೆ ರಿಪೇರಿಗಾಗಿ ತಕ್ಷಣ 200 ಕೋಟಿ ರೂ. ಬಿಡುಗಡೆಯಾಗಿದೆ. ೨೦೧೯ ರಿಂದ ಸತತ ವಿಪರೀತ ಮಳೆಯಾಗುತ್ತಿರುವುದರಿಂದ 610 ಕೋಟಿ ರೂ. ಬಿಡುಗಡೆಯಾಗಿತ್ತು. ಈಗಾಗಲೇ 617 ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ. 141 ಕಿ.ಮಿ ರಾಜ್ಯ ಹೆದ್ದಾರಿ 924 ಕಿ.ಮೀ ಮುಖ್ಯ ರಸ್ತೆಗಳು ಹಾಳಾಗಿದ್ದವು. ಇದೆಲ್ಲವನ್ನೂ ಸರಿಪಡಿಸಲು ನಮಗೆ 740 ಕೋಟಿ ಗೂ ಹೆಚ್ಚು ಮೊತ್ತ ವೆಚ್ಚವಾಗಲಿದೆ ಎಂದು ಸಿಸಿ ಪಾಟೀಲ್ ಮಾಹಿತಿ ನೀಡಿದರು.