ಬೆಂಗಳೂರು: ಭಾರತದ ಕ್ರಿಕೆಟ್ ತಂಡದ ಮಾಜಿ ಆಟಗಾರ ರಾಹುಲ್ ದ್ರಾವಿಡ್ (Rahul Dravid) ಅವರ ಮಗ ಸಮಿತ್ ದ್ರಾವಿಡ್ (Samit Dravid) ಅವರು 19 ವರ್ಷದೊಳಗಿನ ಭಾರತ ಕ್ರಿಕೆಟ್ (Team India) ತಂಡಕ್ಕೆ ಆಯ್ಕೆಯಾಗಿದ್ದಾರೆ.
ಆಯ್ಕೆಯಾದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮೊಟ್ಟ ಮೊದಲ ಬಾರಿಗೆ ನಾನು ಆಯ್ಕೆಯಾಗಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ. ಶುಭಾಶಯ ತಿಳಿಸಿದ ನಿಮ್ಮೆಲ್ಲರಿಗೆ ಧನ್ಯವಾದಗಳು. ನನಗೆ ತುಂಬಾ ಹೆಮ್ಮೆಯಾಗುತ್ತಿದೆ. ಇಲ್ಲಿವರೆಗೆ ಬರುವುದಕ್ಕೆ ನಾನು ತುಂಬಾ ಕಠಿಣ ಪರಿಶ್ರಮಪಟ್ಟಿದ್ದೇನೆ. ಎಲ್ಲಾ ಕನ್ನಡಿಗರಿಗೆ ಧನ್ಯವಾದಗಳು ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಭಾರತ U19 ತಂಡಕ್ಕೆ ಆಯ್ಕೆಯಾದ ಕ್ಷಣಗಳನ್ನು ಹಂಚಿಕೊಂಡ ನಮ್ಮ ಹೆಮ್ಮೆಯ ಕನ್ನಡಿಗ ಸಮಿತ್ ದ್ರಾವಿಡ್! ♥️????
ಆಲ್ ದಿ ಬೆಸ್ಟ್. ????????#SamitDravid #TeamIndiaU19 #StarSportsKannada pic.twitter.com/XnKB5sFZam
— Star Sports Kannada (@StarSportsKan) August 31, 2024
ಆಸ್ಟ್ರೇಲಿಯಾ (Australia) ವಿರುದ್ಧ ನಡೆಯಲಿರುವ ಏಕದಿನ ಪಂದ್ಯಕ್ಕೆ ಬಿಸಿಸಿಐ ಸಮಿತ್ ದ್ರಾವಿಡ್ ಅವರನ್ನು ಆಯ್ಕೆ ಮಾಡಿದೆ. ಇದನ್ನೂ ಓದಿ: ದ್ರಾವಿಡ್ ಪುತ್ರನ ಸಿಕ್ಸ್ – ವಿಡಿಯೋ ವೈರಲ್, ಅಭಿಮಾನಿಗಳ ಮೆಚ್ಚುಗೆ
18 ವರ್ಷದ ಸಮಿತ್ ವೇಗಿ ಬೌಲರ್ ಮತ್ತು ಆಲ್ ರೌಂಡರ್ ಆಟಗಾರರಾಗಿದ್ದಾರೆ. ಕಳೆದ ವರ್ಷದ ದೇಶಿಯ ಮತ್ತು ಪ್ರಾದೇಶಿಕ ಕ್ರಿಕೆಟ್ ಆಟದಲ್ಲಿ ಇವರು ಮಿಂಚಿದ್ದರು. ಇತ್ತೀಚಿಗೆ ಕರ್ನಾಟಕದಲ್ಲಿ ನಡೆದ ಮಹರಾಜ ಟ್ರೋಫಿಯಲ್ಲಿ ಮೈಸೂರು ವಾರಿಯರ‍್ಸ್ ತಂಡದ ಪರವಾಗಿ ಆಟವಾಡಿದ್ದರು. ಮೈಸೂರು ತಂಡ ಈ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.