ಬೆಂಗಳೂರು: ಕಳೆದ 2 ತಿಂಗಳ ಹಿಂದೆಯಷ್ಟೇ ಎರಡನೇ ಬಾರಿಗೆ ತಾಯಿಯಾಗಿದ್ದ ಬಹುಭಾಷಾ ನಟಿ ಸಮೀರಾ ರೆಡ್ಡಿ ತಾಯಿತನದ ಸಂಭ್ರಮವನ್ನು ಎಂಜಾಯ್ ಮಾಡುತ್ತಿದ್ದಾರೆ. ವಿಶೇಷ ಎಂದರೆ ಪುಟ್ಟ ಮಗುವನ್ನು ಹೊತ್ತುಕೊಂಡು ಕರ್ನಾಟಕದ ಎತ್ತದ ಬೆಟ್ಟವೆಂದೇ ಖ್ಯಾತಿ ಪಡೆದಿರುವ ಮುಳ್ಳಯ್ಯನಗಿರಿಯನ್ನು ಹತ್ತಿದ್ದಾರೆ.
ಮಗುವಿನೊಂದಿಗೆ ಬೆಟ್ಟದ ಮೇಲಿರುವ ವಿಡಿಯೋವನ್ನು ಸಮೀರಾ ರೆಡ್ಡಿ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಮುಳ್ಳಯ್ಯಗಿರಿ ಬೆಟ್ಟಕ್ಕೆ ಭೇಟಿ ನೀಡಿದ್ದು, ಬೆಟ್ಟದ ಕೆಲ ಮೆಟ್ಟಿಲುಗಳನ್ನು ಏರಲು ಪ್ರಯತ್ನ ಮಾಡಿದೆ. ಆದರೆ ಮುಂದೆ 500ಕ್ಕೂ ಹೆಚ್ಚು ಮೆಟ್ಟಿಲು ಇದ್ದು, ಮಗುವಿನೊಂದಿಗೆ ಬೆಟ್ಟ ಏರಲು ಆಗುತ್ತಿಲ್ಲ. ಇಲ್ಲಿಗೆ ನಿಲ್ಲಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
https://www.instagram.com/p/B3Bl8KwHoex/
6,300 ಅಡಿ ಎತ್ತರವಿರುವ ಮುಳ್ಳಯ್ಯನಗಿರಿ ಬೆಟ್ಟ ಕರ್ನಾಟಕದ ಎತ್ತರ ಬೆಟ್ಟದವಾಗಿದೆ. ತಾಯಿಯಾಗುವ ಮಹಿಳೆಯರಿಗೆ ಪ್ರೇರಣೆ ನೀಡುವ ಉದ್ದೇಶದಿಂದ ಸಮೀರಾ ಅವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾಗಿ ಹೇಳಿದ್ದಾರೆ. ಅಲ್ಲದೇ ಅವರ ಪೋಸ್ಟ್ ಗಳಿಗೆ ಅಭಿಮಾನಿಗಳು ನೀಡುತ್ತಿರುವ ಪ್ರತಿಕ್ರಿಯೆಗಳು ಸಕಾರಾತ್ಮಕ ಭಾವನೆಯನ್ನು ಮೂಡಿಸುತ್ತಿದ್ದು, ಇದರಿಂದ ರೋಮಾಂಚನಗೊಂಡಿದ್ದೇನೆ ಎಂದಿದ್ದಾರೆ. ಇದೇ ವೇಳೆ ಮಗುವಿಗೆ ಅಗತ್ಯವಾದ ಸಂದರ್ಭದಲ್ಲಿ ಹಾಲು ನೀಡುತ್ತಿದ್ದೇನೆ ಎಂದು ಹೇಳುವ ಮೂಲಕ ಇತರೆ ಮಹಿಳೆಯರಿಗೂ ಪ್ರೇರಣೆಯಾಗಿದ್ದಾರೆ.
https://www.instagram.com/p/B2yT1E9HrsA/
ಇತ್ತೀಚೆಗೆ ಸಮೀರಾ ಇನ್‍ಸ್ಟಾಗ್ರಾಂನಲ್ಲಿ ಪುತ್ರನ ಜೊತೆ ಪುತ್ರಿ ಹೆಸರುಳ್ಳ ಬೋರ್ಡ್ ಹಿಡಿದಿರುವ ಫೋಟೋ ಹಂಚಿಕೊಂಡಿದ್ದರು. ಮಗಳಿಗೆ ‘ನಾಯರಾ’ ಹೆಸರನ್ನು ಸಮೀರಾ ರೆಡ್ಡಿ ಕುಟುಂಬಸ್ಥರು ಅಂತಿಮಗೊಳಿಸಿದ್ದಾರೆ. ಜುಲೈ 12ರಂದು ಪುತ್ರಿಯ ಪುಟ್ಟ ಕೈ ಹಿಡಿದ ಫೋಟೋ ಹಾಕಿ ಇಂದು ಬೆಳಗ್ಗೆ ನಮ್ಮ ಮನೆಗೆ ಪುಟ್ಟ ದೇವತೆಯ ಆಗಮನವಾಗಿದೆ ಎಂದು ತಿಳಿಸಿದ್ದರು.
ಗರ್ಭಿಣಿಯಾಗಿದ್ದ ವೇಳೆ ಅಂಡರ್ ವಾಟರ್ ನಲ್ಲಿ ಫೋಟೋಶೂಟ್ ಮಾಡಿಸುವ ನೆಟ್ಟಿಗರನ್ನು ಸಮಿರಾ ಚಕಿತಗೊಳಿಸಿದ್ದರು. ಇನ್ನು ಬಾಲಿಯಲ್ಲಿ ಕುಟುಂಬದೊಂದಿಗೆ ಸಮಯ ಕಳೆದ ಕೆಲ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಿತ್ತು. ಪ್ರೆಗ್ನಸಿ ಸಮಯದಲ್ಲಿ ಬಿಕಿನಿ ಧರಿಸಿ ತೆಗೆದಿದ್ದ ಫೋಟೋ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿತ್ತು.
https://www.instagram.com/p/B2vt62rHl58/