ಟ್ರೋಲ್ ಮಾಡಿದವರಿಗೆ ಎಫ್‍ಬಿ ಲೈವ್ ಮೂಲಕ ಖಡಕ್ ಉತ್ತರಕೊಟ್ಟ ಸಮೀರಾಚಾರ್ಯ

Public TV
3 Min Read
Sameeracharya

ಬೆಂಗಳೂರು: ಇತ್ತೀಚೆಗೆ ‘ಕನ್ನಡದ ಕೋಟ್ಯಧಿಪತಿ’ ಯಲ್ಲಿ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಸಮೀರಾಚಾರ್ಯ ತಮ್ಮ ಪತ್ನಿ ಶ್ರಾವಣಿಯವರಿಗೆ ಹೇಳಿದ ಮಾತಿನ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಿದ್ದರು. ಈಗ ಸ್ವತಃ ಸಮೀರಾಚಾರ್ಯ ಅವರೇ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಫೇಸ್‍ಬುಕ್ ನಲ್ಲಿ ಒಂದು ವಿಡಿಯೋ ಮಾಡಿ ನಡೆದ ಘಟನೆಗಳ ಬಗ್ಗೆ ವಿವರ ನೀಡಿ ಸ್ಪಷ್ಟನೆ ಕೊಟ್ಟಿದ್ದಾರೆ. “ಬಹಳ ದಿನದಿಂದ ನನ್ನನ್ನು ಎಲ್ಲರೂ ನೆನೆಸಿಕೊಳ್ಳುತ್ತಿದ್ದೀರಿ. ಫೇಸ್ ಬುಕ್ ಪೇಜ್ ನಲ್ಲಿ ಬಹಳ ಜನರು ವಿಸಿಟ್ ಮಾಡುತ್ತಿದ್ದಾರೆ. ಆದ್ದರಿಂದ ಇತ್ತೀಚೆಗೆ ಸಮೀರಾಚಾರ್ಯ ಫುಲ್ ವೈರಲ್ ಆಗಿದ್ದಾರೆ. ಆದರೆ ಇಷ್ಟು ದಿನ ಸಮೀರಾಚಾರ್ಯ ಅವರು ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದರು ಯಾಕೆ ವೈರಲ್ ಆಗಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

Sameer Acharya 3

ಒಳ್ಳೆಯ ಕೆಲಸ
ಪಾಠ – ಪ್ರವಚನ ಮಾಡುತ್ತಿದ್ದರೂ ಅದನ್ನು ಯಾರು ಶೇರ್ ಮಾಡಲಿಲ್ಲ. ಪ್ರತಿಯೊಂದು ಹಳ್ಳಿ ಹಳ್ಳಿಗೆ ಹೋಗಿ ನಮ್ಮ ದೇಶದ ಸಂಸ್ಕೃತಿಯನ್ನು ಹೇಳಿದ್ದರು ಅದನ್ನು ಯಾರು ಶೇರ್ ಮಾಡಿಲ್ಲ. ಪ್ರತಿ ಶನಿವಾರ, ಭಾನುವಾರ ಮಕ್ಕಳಿಗೆ ಮೌಲ್ಯಧಾರಿತ ಶಿಕ್ಷಣವನ್ನು ಉಚಿತವಾಗಿ ಕೊಡುತ್ತಿದ್ದರು ಅದನ್ನು ಯಾರು ವೈರಲ್ ಮಾಡಿಲ್ಲ. ಇನ್ನು ಸ್ಕೂಲ್ ತೆಗೆದು ರೈತರ ಮತ್ತು ಸೈನಿಕರ ಮಕ್ಕಳಿಗೆ ಶಿಕ್ಷಣ ಕೊಡಬೇಕು ಅಂತ ಹೊರಟರು. ಅದನ್ನು ಯಾರು ಅಷ್ಟು ವೈರಲ್ ಮಾಡಲಿಲ್ಲ ಎಂದು ಸಮೀರಾಚಾರ್ಯ ಹೇಳಿದ್ದಾರೆ.

ಇತ್ತೀಚೆಗೆ `ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮದಲ್ಲಿ ಗಂಡ ಹೆಂಡತಿ ಮಾತನಾಡಿ, ಆ ಕಾರ್ಯಕ್ರಮದ ವಾತಾವರಣಕ್ಕೆ ನಗು ತುಂಬಿ, ಎಲ್ಲರನ್ನು ನಗಿಸಲು ಪ್ರಯತ್ನ ಮಾಡಿದ್ದರು. ಅದೇ ಈಗ ಸಮೀರಾಚಾರ್ಯರಿಗೆ ಮುಳುವಾಯ್ತು ಅನ್ನಿಸುತ್ತದೆ. ಸಮೀರಾಚಾರ್ಯ ತಮ್ಮ ಹೆಂಡತಿನ ಬೈದರು ಎಂದು ಎಷ್ಟೋ ಜನ ಹೇಳುತ್ತಿದ್ದಾರೆ. ಅವರಿಗೆ ನಾನು ಉತ್ತರ ಕೊಡಬೇಕಿದೆ ಎಂದು ಹೇಳಿ ಕೋಟ್ಯಧಿಪತಿ, ಬಿಗ್‍ಬಾಸ್ ಕೆಲವು ದೃಶ್ಯಗಳನ್ನು ತೋರಿಸಿದ್ದಾರೆ.

sameer

ಕೋಟ್ಯಧಿಪತಿ:
ಕೋಟ್ಯಧಿಪತಿ ಕಾರ್ಯಕ್ರಮದಲ್ಲಿಯೇ ಜಯಶ್ರೀ ಮೇಡಂ ಒಂದು ಪ್ರಶ್ನೆ ಕೇಳಿದ್ದರು. `ಮದುವೆ ಆದ ಮೇಲೆ ಗಂಡಂದಿರು ಹೆಂಡತಿಯ ಮೇಲೆ ಪ್ರೀತಿ ಕಡಿಮೆ ಮಾಡುತ್ತಾರೆ ಯಾಕೆ?, ಅದು ಎಲ್ಲಿಗೆ ಹೋಗುತ್ತದೆ?’ ಎಂದು ಕೇಳಿದ್ದರು. ಅದಕ್ಕೆ ನಾನು `ಪ್ರೀತಿ ಎಲ್ಲಿಯೂ ಹೋಗುವುದಿಲ್ಲ. ನಾನು ಎಲ್ಲಿ ಹೋದರು ನನ್ನ ಪ್ರೀತಿ ನನ್ನ ಜೊತೆಗೆ ಬರುತ್ತದೆ’ ಅಂತ ನನ್ನ ಹೆಂಡತಿಯನ್ನು ತೋರಿಸಿ ಹೇಳಿದ್ದೆ ಎಂದು ಸಮೀರಾಚಾರ್ಯ ಹೇಳಿದ್ದಾರೆ.

ಬಿಗ್‍ಬಾಸ್
`ಬಿಗ್ ಬಾಸ್’ ನಲ್ಲಿ ಕಾರ್ಯಕ್ರಮದಲ್ಲಿ ಇರುವಾಗ ಹೆಂಡತಿಯ ಧ್ವನಿ ಕೇಳಿ ಕಣ್ಣೀರು ಹಾಕಿದ್ದೇನೆ. ಬಳಿಕ ಅವರು `ಬಿಗ್ ಬಾಸ್’ ಮನೆಯೊಳಗೆ ಬಂದು ಹಾರ ಹಾಕಿ ಹೋಗಿದ್ದರು. ನಂತರ ಆ ಹಾರದಿಂದ ಬಿದ್ದ ಹೂವನ್ನು ಒಂದೊಂದೆ ಆರಿಸಿ ತೆಗೆದು ಇಟ್ಟುಕೊಂಡಿದ್ದೆ. ಹೀಗಿದ್ದಾಗ ಹೆಂಡತಿಯನ್ನು ಅಷ್ಟು ಜನರ ಮುಂದೆ ಬೈಯುವುದಕ್ಕೆ ಸಾಧ್ಯ ಆಗುತ್ತದೆಯಾ. ಒಂದು ವೇಳೆ ಬೈದರೆ ಮನೆ ಮುಟ್ಟಲಿಕ್ಕೆ ಆಗುತ್ತಾ ನೀವೇ ಹೇಳಿ. ಬೈದರು ಅಂತ ಹೇಗೆ ವಿಚಾರ ಮಾಡುತ್ತೀರಿ ಎಂದು ಹೇಳಿದ್ದಾರೆ.

sameer 2

ಬಿಗ್ ಬಾಸ್ ನಲ್ಲಿ ನನ್ನ ಹೆಂಡತಿಯ ಪತ್ರ ಬಂದಿದ್ದು, ಅದನ್ನು ಸುಟ್ಟು ಹಾಕಿದ್ದಾರೆ. ಅದು ನನಗೆ ಸಿಕ್ಕಿಲ್ಲ ಎಂದು ನೀರಿಗೆ ಹಾರಿದ್ದೆ. ಅದನ್ನು ಟ್ರೋಲ್ ಮಾಡಿದ್ದರು, ನಾನು ನನ್ನ ಹೆಂಡತಿಯನ್ನು ಪ್ರೀತಿ ಮಾಡಿದ್ರು ಟ್ರೋಲ್ ಮಾಡಿತ್ತೀರಿ, ಏನಾದರೂ ಹೇಳಿದರು ಟ್ರೋಲ್ ಮಾಡುತ್ತೀರಿ. ಹೀಗಿರುವಾಗ ನಾನು ನನ್ನ ಹೆಂಡತಿಯನ್ನು ಪ್ರೀತಿ ಮಾಡುತ್ತೇನೆ ಎಂದು ನಿಮಗೆ ಸಾಬೀತು ಮಾಡಬೇಕಾಗಿಲ್ಲ ಎಂದ್ರು.

ಸ್ಪಷ್ಟನೆ
ಈಗ ತುಂಬಾ ಜನರು ಸಮೀರಾಚಾರ್ಯ ಅವರು ಹೆಂಡತಿಗೆ ಹೇಳಿದ ಮಾತು ತಪ್ಪು ಅಂತ ಹೇಳಿದ್ದಾರೆ. ಕನ್ನಡದ ಕೋಟ್ಯಧಿಪತಿಯ ಸಂಪೂರ್ಣ ವಿಡಿಯೋ ನೋಡಿಕೊಂಡು ಬನ್ನಿ. ಅಲ್ಲಿದ್ದವರೆಲ್ಲರೂ ನಗುತ್ತಿದ್ದರು. ಜನರು, ಕ್ಯಾಮೆರಾ ಮ್ಯಾನ್, ಸ್ಪರ್ಧಿಗಳು ಎಲ್ಲರೂ ತಮಾಷೆಯಲ್ಲಿ ಇದ್ದೇವು. ನಾನು ಉತ್ತರಿಸಿದ ಪ್ರತಿ ಉತ್ತರ ನಗುವ ಹಾಗೆ ಇತ್ತು. ನನ್ನ ಹೆಂಡತಿ, ರಮೇಶ್ ಸರ್ ಎಲ್ಲರೂ ನಗುತ್ತಿದ್ದಾರೆ. ನಾನು ಅದನ್ನು ತಮಾಷೆಯಾಗಿ ಹೇಳಿದ್ದೆ. ಆಕೆಗೆ ಅನಮಾನ, ಬೇಸರ ಮಾಡಬೇಕು ಎಂದು ಹೇಳಿಲ್ಲ. ನೀವು ಅದನ್ನು ಇಷ್ಟೊಂದು ಸೀರಿಯಸ್ ಆಗಿ ತೆಗೆದುಕೊಂಡು ಟ್ರೋಲ್ ಮಾಡಿದ್ದೀರಿ. ಅದು ತಮಾಷೆಯಷ್ಟೆ ಎಂದು ಸಮೀರಾಚಾರ್ಯ ಸ್ಪಷ್ಟ ಪಡಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *