ನವದೆಹಲಿ: ಸಲಿಂಗ ಸಂಬಂಧಗಳು ಸ್ವೀಕಾರಾರ್ಹವಾದರೂ ಅಂತಹ ವಿವಾಹಗಳು (Marriage) ಒಪ್ಪುವಂತಹದ್ದಲ್ಲ. ಅಂತಹ ವಿವಾಹಗಳಿಗೆ ಅವಕಾಶ ನೀಡುವುದರಿಂದ ವಿಚ್ಛೇದನ, ದತ್ತು ಸ್ವೀಕಾರ ಸೇರಿದಂತೆ ಹಲವು ಹಂತಗಳಲ್ಲಿ ಸಮಸ್ಯೆ ಉದ್ಭವಿಸಲಿದೆ ಎಂದು ಬಿಜೆಪಿ (BJP) ಸಂಸದ ಸುಶೀಲ್ ಕುಮಾರ್ ಮೋದಿ (Sushil Kumar Modi) ಹೇಳಿದ್ದಾರೆ.
Advertisement
ಸಂಸತ್ತಿನ (Parliament) ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಕೆಲ ಎಡ- ಉದಾರವಾದಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಸಲಿಂಗ ವಿವಾಹದ ಕಾನೂನು (Law) ಮಾನ್ಯತೆಗಾಗಿ ಹೋರಾಟ ನಡೆಸುತ್ತಿದ್ದಾರೆ. ಇಂಥ ಪ್ರಯತ್ನವನ್ನು ಸರ್ಕಾರ ತೀವ್ರವಾಗಿ ವಿರೋಧಿಸಬೇಕು. ದೇಶದ ಸಂಸ್ಕೃತಿಗೆ ಧಕ್ಕೆ ತರುವಂತಹ ಇಂಥ ನೀತಿಯ ಪರವಾಗಿ ನ್ಯಾಯಾಂಗವು ಯಾವುದೇ ತೀರ್ಪು ನೀಡಬಾರದು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ನನಗೆ ಗುಂಡು ಹೊಡೆದ್ರೂ ಟಿಪ್ಪು ಭಾವಚಿತ್ರ ಅಳವಡಿಸಲು ಬಿಡಲ್ಲ – ಯತ್ನಾಳ್
Advertisement
Advertisement
ಯಾವುದೇ ಕಾನೂನುಗಳು ದೇಶದ ಸಂಪ್ರದಾಯದದೊಂದಿಗೆ ಹೊಂದಿಕೆಯಾಗಬಾರದು. ಭಾರತೀಯ ಸಮಾಜ ಹೇಗಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಇಲ್ಲಿನ ಜನರು ಹೇಗೆ ಅದನ್ನು ಸ್ವೀಕರಿಸಲು ಸಿದ್ಧರಿದ್ದಾರೆ ಎಂಬುದನ್ನು ನಿರ್ಣಯಿಸಬೇಕು. ಸಲಿಂಗ ಸಂಬಂಧವನ್ನು ಅಪರಾಧೀಕರಿಸಲಾಗಿದೆ. ಸಲಿಂಗ ದಂಪತಿಗೆ ಒಟ್ಟಿಗೆ ವಾಸಿಸಲು ಕಾನೂನು ಸ್ಥಾನಮಾನ ನೀಡುವುದು ಬೇರೆ ವಿಚಾರ. ಆದರೆ ಮದುವೆ ಪವಿತ್ರ ಸಂಬಂಧ. ಭಾರತವನ್ನು ಅಮೆರಿಕದಂತೆ (US) ಮಾಡಬೇಡಿ ಎಂದು ಅವರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: 1,050 ರೂ. LPG ಸಿಲಿಂಡರ್ ಇನ್ಮುಂದೆ 500 ರೂ.ಗೆ – ಗುಡ್‌ನ್ಯೂಸ್ ಕೊಟ್ಟ ರಾಜಸ್ಥಾನ ಸಿಎಂ
Advertisement
ಭಾರತದಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನು ಅಥವಾ ಯಾವುದೇ ಕ್ರೋಢೀಕರಿಸದ ವೈಯಕ್ತಿಕ ಕಾನೂನಿನಲ್ಲಿ ಸಲಿಂಗ ವಿವಾಹವನ್ನು ಅಂಗೀಕರಿಸಲಾಗುವುದಿಲ್ಲ. ಸಲಿಂಗ ವಿವಾಹವು ದೇಶದಲ್ಲಿ ವೈಯಕ್ತಿಕ ಕಾನೂನುಗಳ ಸೂಕ್ಷ್ಮ ಸಮತೋಲನಕ್ಕೆ ಹಾನಿಯುಂಟು ಮಾಡುತ್ತದೆ. ಇಂತಹ ಮಹತ್ವದ ಸಾಮಾಜಿಕ ವಿಷಯದ ಬಗ್ಗೆ ಇಬ್ಬರು ನ್ಯಾಯಮೂರ್ತಿಗಳು ನಿರ್ಧರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟ ಸುಶೀಲ್ ಕುಮಾರ್, ಈ ವಿಷಯವು ಸಂಸತ್ತು ಮತ್ತು ಸಮಾಜದಲ್ಲಿ ದೊಡ್ಡಮಟ್ಟದಲ್ಲಿ ಚರ್ಚೆಗೆ ಒಳಪಡಬೇಕಿದೆ ಎಂದು ಸಲಹೆ ನೀಡಿದ್ದಾರೆ.
ಸರ್ಕಾರವು, ನ್ಯಾಯಾಲಯದಲ್ಲಿ ಇಂಥ ಪ್ರಕರಣಗಳ ವಿರುದ್ಧ ತೀವ್ರವಾಗಿ ವಾದ ಮಂಡಿಸಬೇಕು ಎಂದಿದ್ದಾರೆ.