– ಸುಪ್ರೀಂ ಗೌರವಿಸುವ ಜನತೆಗೆ ಈ ತೀರ್ಪು ಉಭಯ ಸಂಕಟವಾಗಬಾರದು
ಬಾಗಲಕೋಟೆ: ವೈವಾಹಿಕ ಜೀವನಕ್ಕೆ ತನ್ನದೇ ಆದ ಪಾವಿತ್ರ‍್ಯವಿದೆ. ಈ ಸಲಿಂಗಿಗಳಿಗೆ ವೈವಾಹಿಕ ಜೀವನದ (Same-sex Marriage) ಮುದ್ರೆ ಒತ್ತುವುದು ಸಲ್ಲದು ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (Pejavara Sri) ಹೇಳಿದರು.
ಶುಕ್ರವಾರ ಬಾಗಲಕೋಟೆಯಲ್ಲಿ (Bagalkote) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಸಮಾಜ ವಿದ್ವಾಂಸರನ್ನು, ಧರ್ಮಶಾಸ್ತ್ರ ಅರಿತವರನ್ನು ಜೊತೆ ಸೇರಿಸಿ ವಿಚಾರ ವಿಮರ್ಶೆ ಕೈಗೊಳ್ಳಬೇಕು. ಆದರೆ ಸುಪ್ರೀಂ ನೇರವಾಗಿ ತೀರ್ಪು ಕೊಡುವ ಮೂಲಕ ಸಮಾಜದ ಭಾವನಾತ್ಮಕ ವಿಚಾರಗಳು, ಶಾಸ್ತ್ರೀಗಳ ವಿಚಾರಗಳ ಮೇಲೆ ನೇರವಾಗಿ ಕ್ರಮ ಕೈಗೊಳ್ಳಬಾರದು ಎಂದು ತಿಳಿಸಿದರು.
ಸುಪ್ರೀಂ ಕೋರ್ಟ್‌ಗೆ (Supreme Court) ಅದರದೇ ಆದ ಗೌರವ ಸ್ಥಾನಮಾನವಿದೆ. ಹಾಗಾಗಿ ತೀರ್ಪನ್ನು ಒಪ್ಪುತ್ತೇವೆ. ಆದರೆ ತೀರ್ಪು ಕೊಡುವ ಮುಂಚೆ ರಾಜಪ್ರಭುತ್ವ ನಮ್ಮಲ್ಲಿಲ್ಲ. ಆ ತೀರ್ಪು ಅಡ್ಡ ಬಾಗಿಲಿನಿಂದ ಬಂದಿದೆ ಎಂಬ ಭಾವ ಸಮಾಜಕ್ಕೆ ಬರಬಾರದು ಎಂಬುದು ನಮ್ಮ ಭಾವನೆ ಎಂದರು. ಇದನ್ನೂ ಓದಿ: ಶನಿವಾರ ಬೆಂಗಳೂರಿನಲ್ಲಿ ಮೋದಿ ರೋಡ್ ಶೋ – ಪರ್ಯಾಯ ರಸ್ತೆಗಳ ಪೂರ್ಣ ವಿವರ ಇಲ್ಲಿದೆ
ಸುಪ್ರೀಂ ಕೋರ್ಟ್ ರಾಜಪ್ರಭುತ್ವ ಇನ್ನೊಂದು ಮುಖ ಆಗಬಾರದು. ನ್ಯಾಯಾಲಯ ಗೌರವಿಸುವ ಜನತೆಗೆ ಈ ತೀರ್ಪು ಉಭಯ ಸಂಕಟವಾಗಬಾರದು ಎಂದು ತಿಳಿಸಿದರು.
ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಬೇಕೆಂದು ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ. ಸಲಿಂಗಿ ವಿವಾಹಕ್ಕೆ ಮಾನ್ಯತೆ ನೀಡಬಾರದು ಎಂದು ಧಾಮಿರ್ಕ ಮುಖಂಡರು ವಾದಿಸುತ್ತಿದ್ದಾರೆ. ಇದನ್ನೂ ಓದಿ: ಮತಯಾಚನೆ ವೇಳೆ ಪರಮೇಶ್ವರ್ ತಲೆಗೆ ಕಲ್ಲೇಟು, ರಕ್ತಸ್ರಾವ