ಟೋಕಿಯೋ: ಸಲಿಂಗ ವಿವಾಹ ನಿಷೇಧಿಸುವುದು ಅಸಾಂವಿಧಾನಿಕವಲ್ಲ ಎಂದು ಜಪಾನಿನ ಒಸಾಕಾ ನ್ಯಾಯಾಲಯ ತೀರ್ಪು ನೀಡಿದೆ. ಇದರೊಂದಿಗೆ ಸಲಿಂಗಿಗಳ ವಿವಾಹ ಸಂಬಂಧ ಎಲ್‌ಜಿಬಿಟಿಕ್ಯೂ ಕಾರ್ಯಕರ್ತರಿಗೆ 7 ರಾಷ್ಟ್ರಗಳಲ್ಲಿ ಹಿನ್ನಡೆಯಾಗಿದೆ.
Advertisement
ಸಲಿಂಗ ವಿವಾಹಕ್ಕೆ ಸಂಬಂಧಿಸಿದ ವ್ಯಾಜ್ಯಗಳಲ್ಲಿ ತಮಗೆ ನ್ಯಾಯ ಕಲ್ಪಿಸಿಕೊಡುವಂತೆ ಮೂರು ಸಲಿಂಗ ದಂಪತಿ ಒಸಾಕಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಈ ವಿಷಯದ ಬಗ್ಗೆ ಜಪಾನ್‌ನಲ್ಲಿ 2ನೇ ವಿಚಾರಣೆ ನಡೆಯಿತು. ಈ ವೇಳೆ ಸಲಿಂಗ ವಿವಾಹವನ್ನು ನಿಷೇಧಿಸುವುದು ಅಸಾಂವಿಧಾನಿಕ ಎನ್ನುವ ಹಕ್ಕನ್ನು ತಿರಸ್ಕರಿಸಿತು. ಜೊತೆಗೆ ನ್ಯಾಯಾಲಯವು ಪ್ರತಿ ದಂಪತಿಗೆ ನೀಡಬೇಕಿದ್ದ ಆರ್ಥಿಕ ಬೇಡಿಕೆಯನ್ನೂ ತಿರಸ್ಕರಿಸಿತು. ಇದನ್ನೂ ಓದಿ: ಇಂದಿನಿಂದ 2 ದಿನ ಪ್ರಧಾನಿ ರಾಜ್ಯ ಪ್ರವಾಸ – 20 ಗಂಟೆಯಲ್ಲಿ 10 ಕಾರ್ಯಕ್ರಮಗಳಲ್ಲಿ ಮೋದಿ ಭಾಗಿ
Advertisement
Advertisement
ಸಪೋರೊ ನ್ಯಾಯಾಲಯವು 2021ರ ಮಾರ್ಚ್ ತಿಂಗಳಲ್ಲಿ ಸಲಿಂಗಿಗಳ ವಿವಾಹವನ್ನು ಅನುಮತಿಸುವುದು ಅಸಂವಿಧಾನಿಕವಾಗಿದೆ ಎಂದು ಹೇಳಿತ್ತು. ಈ ತೀರ್ಪಿನ ಪರವಾಗಿಯೇ ತೀರ್ಪು ಪ್ರಕಟಿಸುವಂತೆ ಜಪಾನ್ ಸರ್ಕಾರದ ಮೇಲೆ ಒತ್ತಡ ತರಲಾಗಿತ್ತು. ಅದರಂತೆ ತೀರ್ಪು ನೀಡಿರುವ ಜಪಾನ್ ಒಸಾಕಾ ನ್ಯಾಯಾಲಯವು ಸಲಿಂಗ ವಿವಾಹ ನಿಷೇಧದ ಪರವಾಗಿ ತೀರ್ಪು ನೀಡಿದೆ. ಇದನ್ನೂ ಓದಿ: ‘ವಿದ್ಯಾಪೀಠ’ದಲ್ಲಿ ಯಾರೆಲ್ಲ ಭಾಗವಹಿಸುತ್ತಿದ್ದಾರೆ? – ಉಚಿತ ಪ್ರವೇಶದ ಕಾರ್ಯಕ್ರಮಕ್ಕೆ ಬನ್ನಿ
Advertisement
ಈ ತೀರ್ಪು ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳಿಗೆ ಗುರಿಯಾಗಿದೆ. ಜೊತೆಗೆ ಸಲಿಂಗ ವಿವಾಹಕ್ಕೆ ಬೆಂಬಲಿಸಿ ಅಭಿಪ್ರಾಯವನ್ನೂ ಸಂಗ್ರಹಿಸಲಾಗುತ್ತಿದೆ. ವಿಚಾರಣೆ ಮುಂದುವರಿದ್ದು, ಈ ವರ್ಷದ ಕೊನೆಯಲ್ಲಿ ಅಂತಿಮ ತೀರ್ಪು ಪ್ರಕಟವಾಗಲಿದೆ ಎಂದು ಜಪಾನ್‌ನ ಒಸಾಕಾ ನ್ಯಾಯಾಲಯ ತಿಳಿಸಿದೆ.