ನವದೆಹಲಿ: ಸಂಭಲ್ ಹಿಂಸಾಚಾರ (Sambhal Violence) ನಡೆದ ಸಂದರ್ಭ ನಾನು ಬೆಂಗಳೂರಿನಲ್ಲಿದ್ದೆ (Bengaluru) ಎಂದು ಸಮಾಜವಾದಿ ಪಕ್ಷದ (Samajwadi Party) ಸಂಸದ ಜಿಯಾ ಉರ್ ರೆಹಮಾನ್ ಬಾರ್ಕ್ (Zia Ur Rehman Barq) ಸ್ಪಷ್ಟನೆ ನೀಡಿದ್ದಾರೆ.
ಸಂಭಲ್ ಹಿಂಸಾಚಾರದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂಭಲ್‌ನಲ್ಲಿ ಪೊಲೀಸ್ ಅಧಿಕಾರಿಗಳು ಹಿಂಸಾಚಾರ ನಡೆಸಿದ ಘಟನೆ ಮಾನವ ಕುಲವನ್ನು ಬೆಚ್ಚಿಬೀಳಿಸಿದೆ. ಅಲ್ಲದೇ ರಾಜ್ಯ ಹಾಗೂ ದೇಶದ ಪ್ರತಿಷ್ಠೆಗೆ ಕಳಂಕ ತಂದಿದೆ ಎಂದರು. ಇದನ್ನೂ ಓದಿ: ಸಂಭಾಲ್ ಹಿಂಸಾಚಾರ | ಎಸ್‌ಪಿ ಸಂಸದ ಸೇರಿ 400 ಮಂದಿ ವಿರುದ್ಧ ಎಫ್‌ಐಆರ್
Advertisement
#WATCH | Delhi: On Sambhal violence, Samajwadi Party MP Zia Ur Rehman Barq says, “The incident that the police administration carried out in Sambhal has shaken the entire humanity and has tarnished the image of the state and the country…Yesterday, I was not even present in the… pic.twitter.com/OKk1qKpHcD
— ANI (@ANI) November 25, 2024
Advertisement
ಭಾನುವಾರ ಸಂಭಲ್ ಹಿಂಸಾಚಾರ ನಡೆದ ವೇಳೆ ನಾನು ಸಂಭಲ್‌ನಲ್ಲಿ ಇರಲಿಲ್ಲ. ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸಭೆಯಲ್ಲಿ ಭಾಗವಹಿಸುವ ಸಲುವಾಗಿ ಬೆಂಗಳೂರಿಗೆ ತೆರಳಿದ್ದೆ. ಆದರೆ ನನ್ನ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಇದು ನನ್ನ ವಿರುದ್ಧ ಪೊಲೀಸರು ಮಾಡಿರುವ ಪಿತೂರಿ. ಪೊಲೀಸರು ಸಮೀಕ್ಷೆಗೆ ಯಾವಾಗ ಬರುತ್ತಾರೆ ಎಂದು ಸಾರ್ವಜನಿಕರಿಗೆ ಗೊತ್ತಿಲ್ಲದಿದ್ದಾಗ ಅವರು ಷಡ್ಯಂತ್ರ ರೂಪಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಜಾಮಾ ಮಸೀದಿ ಸರ್ವೇಗೆ ವಿರೋಧ – ಹಿಂಸಾಚಾರದಲ್ಲಿ ಮೂವರು ಸಾವು, 20 ಪೊಲೀಸರಿಗೆ ಗಾಯ
Advertisement
Advertisement
ಗಲಾಟೆ ನಡೆದ ವೇಳೆ ಶಸ್ತ್ರಾಸ್ತ್ರಗಳನ್ನು ಬಳಸಿ ಐವರು ಅಮಾಯಕರನ್ನು ಹತ್ಯೆ ಮಾಡಿದ್ದಾರೆ. ಘಟನೆಯಲ್ಲಿ ಅನೇಕರು ಗಾಯಗೊಂಡಿದ್ದಾರೆ. ಪೊಲೀಸರು ನಮ್ಮ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಈ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು ಮತ್ತು ಅವರನ್ನು ಕಂಬಿಯ ಹಿಂದೆ ಹಾಕಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಉತ್ತರ ಪ್ರದೇಶ | ಜಾಮಾ ಮಸೀದಿ ಸಮೀಕ್ಷೆಗೆ ತೆರಳಿದ್ದ ಅಧಿಕಾರಿಗಳ ಮೇಲೆ ಕಲ್ಲು ತೂರಾಟ