Bigg Boss ಮನೆಯಲ್ಲಿ ಎಲ್ಲರೂ ಸಮಾನರು ಎಂದ ಸುದೀಪ್

Public TV
2 Min Read
sudeep 1 1

ಬಿಗ್ ಬಾಸ್ ಮನೆಯ (Bigg Boss Kannada 10) ಆಟ ಶುರುವಾಗಿ ಒಂದೇ ವಾರಕ್ಕೆ ಜಗಳ ತಾರಕಕ್ಕೇರಿದೆ. ಮನೆಯ ಮಂದಿಯ ಆಟಕ್ಕೆ ಕಿಚ್ಚ ಖಡಕ್ ಕ್ಲಾಸ್ ಮಾಡುವ ಮೂಲಕ ಬ್ರೇಕ್ ಹಾಕಿದ್ದಾರೆ. ಇನ್ನೂ ಮನೆಗೆ ಕಾಲಿಟ್ಟದ್ದಾಗ ಸ್ಪರ್ಧಿಗಳು ಸಮರ್ಥರು, ಅಸಮರ್ಥರು ಎಂದು 2 ಗುಂಪುಗಳಾಗಿ ಮಾಡಲಾಗಿತ್ತು. ಈಗ ಎಲ್ಲರೂ ಸಮಾನರು ಎಂದು ಸುದೀಪ್ (Sudeep) ಘೋಷಿಸಿದ್ದಾರೆ.

sudeep 3

ಬಿಗ್ ಬಾಸ್ ಮೊದಲ ವಾರವೇ ಸ್ಪರ್ಧಿಗಳನ್ನ ಸಮರ್ಥರು ಹಾಗೂ ಅಸಮರ್ಥರು ಎಂದು ಇಬ್ಭಾಗ ಮಾಡಲಾಗಿತ್ತು. ಪ್ರೀಮಿಯರ್ ವೇದಿಕೆ ಮೇಲೆ ಲೈವ್ ಆಡಿಯೆನ್ಸ್ ಕಡೆಯಿಂದ 40% ರಿಂದ 80% ವರೆಗಿನ ವೋಟಿಂಗ್ ಪಡೆದ 6 ಸ್ಪರ್ಧಿಗಳಿಗೆ ಅಸಮರ್ಥರು ಲೇಬಲ್ ಕೊಟ್ಟು ಬಿಗ್ ಬಾಸ್ ಮನೆಯೊಳಗೆ ಕಳುಹಿಸಲಾಗಿತ್ತು. ಇದನ್ನೂ ಓದಿ:Bigg Boss: ಕಿಚ್ಚನ ಬೆಂಬಲ ಸಿಗ್ತಿದ್ದಂತೆ ಜೂಮ್‌ನಲ್ಲಿ ಡ್ರೋನ್ ಪ್ರತಾಪ್

bigg boss 10

ಬಿಗ್ ಬಾಸ್ ಮನೆಯೊಳಗೆ (Bigg Boss Kannada 10) ಅಸಮರ್ಥರಿಗೆ ಯಾವುದೇ ರೀತಿಯ ಸೌಕರ್ಯಗಳು ಇರಲಿಲ್ಲ. ಸೋಫಾ, ಕುರ್ಚಿ ಮೇಲೆ ಕೂರುವಂತಿರಲಿಲ್ಲ. ನೆಲದ ಮೇಲೆ ಕೂರಬೇಕಿತ್ತು. ನೆಲದ ಮೇಲೆ ಮಲಗಬೇಕಿತ್ತು. ಸಮರ್ಥರು ಸ್ನಾನ ಮುಗಿಸಿದ ಬಳಿಕ ಅಸಮರ್ಥರು ಸ್ನಾನ ಮಾಡಬೇಕಿತ್ತು. ಸಮರ್ಥರು ನಿದ್ದೆ ಮಾಡಿದ ಬಳಿಕ ಅಸಮರ್ಥರು ನಿದ್ದೆ ಮಾಡಬೇಕಿತ್ತು. ಅಡುಗೆ ಕೆಲಸ ಹಾಗೂ ಕ್ಲೀನಿಂಗ್ ಕೆಲಸವನ್ನ ಅಸಮರ್ಥರೇ ಮಾಡಬೇಕಿತ್ತು. ಹಾಗೇ, ಅಸಮರ್ಥರಿಗೆ ನಾಮಿನೇಷನ್‌ನಲ್ಲಿ ವೋಟ್ ಹಾಕುವ, ಉತ್ತಮ/ಕಳಪೆ ಆಯ್ಕೆ ಮಾಡುವಾಗ ವೋಟ್ ಹಾಕುವ ಅಧಿಕಾರವನ್ನೂ ಬಿಗ್ ಬಾಸ್ ನೀಡಿರಲಿಲ್ಲ.

bhagyashree

ಮೊದಲ ವಾರವೇ ಇಷ್ಟೆಲ್ಲಾ ಕಠಿಣ ನಿಯಮಗಳನ್ನು ಅಸಮರ್ಥರು ಎದುರಿಸಬೇಕಾಯಿತು. ಎಲ್ಲಾ ನಿಯಮಗಳನ್ನು ಪಾಲಿಸಿ, ಟಾಸ್ಕ್‌ನಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿ ಅಸಮರ್ಥರು ಸೈ ಎನಿಸಿಕೊಂಡಿದ್ದಾರೆ. ಇದೀಗ ಬಿಗ್ ಬಾಸ್ ಮನೆಯಲ್ಲಿ ಅಸಮರ್ಥರು- ಸಮರ್ಥರು ಎಂಬ ಭೇದಭಾವ ಇಲ್ಲ ಎಲ್ಲರೂ ಸಮಾನರು ಎಂದು ಸುದೀಪ್‌ ಹೇಳಿದ್ದಾರೆ. ಇದನ್ನೂ ಓದಿ:ಭಾರತ-ಪಾಕ್ ಪಂದ್ಯದ ವೇಳೆ ಚಿನ್ನದ ಫೋನ್ ಕಳೆದುಕೊಂಡ ಊರ್ವಶಿ

ಬಿಗ್ ಬಾಸ್ ಮನೆಯ ಮೊದಲ ವಾರ ಸ್ನೇಕ್ ಶ್ಯಾಮ್ (Snake Shyam) ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ ಎನ್ನಲಾಗುತ್ತಿದೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article