-ಸಮರ್ಥ ಭಾರತ ಸಂಸ್ಥೆಗೆ 10 ವರ್ಷ
ಬೆಂಗಳೂರು: ಸಮರ್ಥ ಭಾರತ (Samartha Bharata) ಸಂಸ್ಥೆಯು 10 ವರ್ಷ ಪೂರೈಸಿದ ಸಂದರ್ಭದಲ್ಲಿ ಶಂಕರಪುರದ (Shankarapura) ಉತ್ತುಂಗದಲ್ಲಿ ‘ಸ್ವಯಂಸೇವಕರ ಸಭೆ’ಯನ್ನು ಆಯೋಜಿಸಲಾಗಿತ್ತು.
Advertisement
ಕಾರ್ಯಕ್ರಮದಲ್ಲಿ ಸಮರ್ಥ ಭಾರತದ ಮಾರ್ಗದರ್ಶಕ ನಾ.ತಿಪ್ಪೇಸ್ವಾಮಿ ಮಾತನಾಡಿ, ಯುವಜನತೆಗೆ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಲು ಮಾರ್ಗದರ್ಶನದ ಅಗತ್ಯವಿದೆ. ಸಮಾಜಕ್ಕೆ ಸಮಾಜದ ಸೇವೆಗಾಗಿ ಸಮಯ ನೀಡುವವರ ಅಗತ್ಯವಿದೆ. ಈ ಎರಡೂ ಕಾರ್ಯವನ್ನು ಸಮರ್ಥ ಭಾರತ ಸಂಸ್ಥೆ ಕಳೆದ ಒಂದು ದಶಕದಿಂದ ಮಾಡಿಕೊಂಡು ಬರುತ್ತಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿಯ ಸಂದರ್ಭದಲ್ಲಿ ಹೆಚ್ಚೆಚ್ಚು ಯುವಕರು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡಬೇಕಿದೆ. ಸಮರ್ಥ ಭಾರತ ಸಂಸ್ಥೆಯ ಕಾರ್ಯಚಟುವಟಿಕೆಯ ವೇಗವನ್ನೂ ಹೆಚ್ಚಿಸುವ ಸಮಯ ಬಂದಿದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಜಾ
Advertisement
Advertisement
ಬಳಿಕ ಸಮರ್ಥ ಭಾರತದ ಟ್ರಸ್ಟಿ ರಾಜೇಶ್ ಪದ್ಮಾರ್ ಸಮರ್ಥ ಭಾರತದ 10 ವರ್ಷಗಳ ಕಾರ್ಯಚಟುವಟಿಕೆಗಳ ಕಿರುವರದಿಯನ್ನು ಸಭಿಕರ ಮುಂದಿಟ್ಟರು. ಇದನ್ನೂ ಓದಿ: ನಾಗಾಲ್ಯಾಂಡ್‌ನಲ್ಲಿ ಭಾರೀ ಮಳೆಗೆ ಹೆದ್ದಾರಿ ಕುಸಿತ – ಮೃತರ ಸಂಖ್ಯೆ 6ಕ್ಕೆ ಏರಿಕೆ
Advertisement
ಈ ವೇಳೆ ಸಮರ್ಥ ಭಾರತದ ವ್ಯವಸ್ಥಾಪಕ ವಿಶ್ವಸ್ಥ ದೇವಾನಂದ, ಖಜಾಂಚಿ ಮಾಲಿನಿ ಭಾಸ್ಕರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಮರ್ಥ ಭಾರತದ ಹಿತೈಷಿಗಳು, ಸ್ವಯಂಸೇವಕರು ಭಾಗವಹಿಸಿದರು. ಇದನ್ನೂ ಓದಿ: ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿದ್ದೇನೆ, 3 ವಾರ ವಿಶ್ರಾಂತಿ ಬೇಕು: ಆರೋಗ್ಯದ ಬಗ್ಗೆ ಮಾಹಿತಿ ಕೊಟ್ಟ ಸುರೇಶ್‌ಕುಮಾರ್