3 ವರ್ಷದ ನಿರಾಣಿ ಮೊಮ್ಮಗನಿಂದ ಏಷ್ಯಾ ಬುಕ್‌ ಆಫ್‌ ರೆಕಾರ್ಡ್‌!

Public TV
1 Min Read
Samarth Vijay Nirani India Book Of Record Golf Cart 1

ಬಾಗಲಕೋಟೆ: ಮಾಜಿ ಸಚಿವ ಮುರುಗೇಶ್ ನಿರಾಣಿ (Murugesh Nirani) ಅವರ ಮೊಮ್ಮಗ ಸಮರ್ಥ ವಿಜಯ್ ನಿರಾಣಿ (Samarth Vijay Nirani) 3 ವರ್ಷ 1 ತಿಂಗಳಲ್ಲಿ ಗಾಲ್ಪ್ ಕಾರ್ಟ್ ಓಡಿಸಿ‌ ಇಂಡಿಯಾ ಬುಕ್ ಆಫ್‌ ರೆಕಾರ್ಡ್ (India Book Of Record), ಏಷ್ಯಾ ಬುಕ್ ಆಫ್‌ ರೆಕಾರ್ಡ್ (Asia book Of Record) ಬರೆದಿದ್ದಾನೆ‌.

ಸಮರ್ಥ ಚಿಕ್ಕಂದಿನಿಂದಲೂ ಎಲೆಕ್ಟ್ರಿಕ್ ಕಾರುಗಳನ್ನು (Electric Car) ಓಡಿಸುತ್ತಿದ್ದ. ಒಂದು ದಿನ ಕಾರ್ಖಾನೆ ವೀಕ್ಷಣೆ ಮಾಡುವುದಕ್ಕೆ ಈಗ ಇರುವ ಗಾಲ್ಪ್ ಕಾರ್ಟ್ (Golf Cart) ಓಡಿಸುತ್ತೇನೆ ಎಂದು ಹಠ ಮಾಡಿದಾಗ ಈತನಿಗೆ ಒಮ್ಮೆ ಕಾರ್ಟ್ ಓಡಿಸುವ ಬಗ್ಗೆ ಮನೆಯವರು ಮಾಹಿತಿ ನೀಡಿದ್ದರು.

ಒಂದು ಸಾರಿ ನೋಡಿ ತಿಳಿದುಕೊಂಡ ಸಮರ್ಥ ಮೂರು ವರ್ಷ ಹತ್ತು ತಿಂಗಳಲ್ಲೇ ಗಾಲ್ಪ್ ಕಾರ್ಟ್ ವಾಹನ ಓಡಿಸಿ ಮನೆಯವರಿಗೆ ಅಚ್ಚರಿ ಮೂಡಿಸಿದ್ದ. ತಾನೊಬ್ಬನೇ ಅಲ್ಲದೇ ತಂದೆ ವಿಜಯ್, ತಾಯಿ ಸುಶ್ಮಿತಾ, ಅಜ್ಜಿ ಕಮಲಾ ನಿರಾಣಿ ಸೇರಿದಂತೆ ಎಲ್ಲಾ ಕುಟುಂಬಸ್ಥರನ್ನು ಕೂರಿಸಿಕೊಂಡು ಗಾಲ್ಪ್ ಕಾರ್ಟ್ ಓಡಿಸಿದ್ದ.  ಇದನ್ನೂ ಓದಿ: ಹಾಸನಾಂಬೆ ಹುಂಡಿ ಎಣಿಕೆ – 9 ದಿನದಲ್ಲಿ 12.63 ಕೋಟಿ ಹಣ ಸಂಗ್ರಹ

Samarth Vijay Nirani India Book Of Record Golf Cart 2

ಸಮರ್ಥನ ಪ್ರತಿಭೆಯನ್ನು ನೋಡಿ ಮುರುಗೇಶ್ ನಿರಾಣಿ, ಅವರ ಮಗ ವಿಜಯ್ ಹಾಗೂ ಪತ್ನಿ ಸುಶ್ಮಿತಾ ಅವರು ಇಂಡಿಯಾ ಬುಕ್ ಆಫ್‌ ರೆಕಾರ್ಡ್ ಹಾಗೂ ಏಷ್ಯಾ ಬುಕ್ ಆಫ್‌ ರೆಕಾರ್ಡ್ ಸಂಸ್ಥೆಗೆ ವಿಡಿಯೋ ಮಾಡಿ‌ ಕಳುಹಿಸಿದ್ದರು.

ವಿಡಿಯೋ ಗಮನಿಸಿ ಮುಧೋಳ‌ ನಗರಕ್ಕೆ ಬಂದ ಇಂಡಿಯಾ, ಏಷಿಯಾ ಬುಕ್ ಆಫ್‌ ರೆಕಾರ್ಡ್ ಜಡ್ಜ್‌ಗಳು ಸ್ಥಳದಲ್ಲಿ ಪರೀಕ್ಷೆ ‌ಮಾಡಿದ್ದಾರೆ. ಬಾಲಕ ಸಮರ್ಥನ ಚಾಲನೆ ಕಂಡು ಇಂಡಿಯಾ ಬುಕ್ ಆಫ್‌ ರೆಕಾರ್ಡ್, ಏಷ್ಯಾ ಬುಕ್ ಆಫ್‌ ರೆಕಾರ್ಡ್ ಪ್ರಶಸ್ತಿ ಪದ‌ಕ‌ ನೀಡಿ ಗೌರವಿಸಿದ್ದಾರೆ.

ಸಮರ್ಥ ಕೇವಲ ಎರಡು ವರ್ಷದವನಿದ್ದಾಗಲೂ 22 ಸಂಸ್ಕೃತ ಶ್ಲೋಕ ಹೇಳಿ ಸುದ್ದಿಯಾಗಿದ್ದ. ಲಿಮ್ಕಾ ಹಾಗೂ ಗಿನ್ನಿಸ್ ದಾಖಲೆಗೂ ಅರ್ಜಿ ಸಲ್ಲಿಸಿದ್ದು ಅಲ್ಲೂ ಕೂಡ ದಾಖಲೆ ಬರೆಯುತ್ತಾನೆ ಎಂಬ ವಿಶ್ವಾಸದಲ್ಲಿ ಸಮರ್ಥನ ಪೋಷಕರಿದ್ದಾರೆ.

Share This Article