ನಟಿ ಶೋಭಿತಾ (Sobhita Dhulipala) ಜೊತೆ ನಾಗಚೈತನ್ಯ (Nagachaitanya) ಡಿ.4ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಮಾಜಿ ಪತಿ ನಾಗಚೈತನ್ಯ ಮದುವೆ ದಿನ ಸಮಂತಾ (Samantha) ಹಂಚಿಕೊಂಡ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಹುಡುಗಿಯಂತೆ ಹೋರಾಡಿ ಎಂದು ನಟಿ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಶ್ರೀಲೀಲಾಗೆ ಚಿತ್ರರಂಗದಲ್ಲಿ ಉತ್ತಮ ಭವಿಷ್ಯವಿದೆ: ಹೊಗಳಿದ ಅಲ್ಲು ಅರ್ಜುನ್
Advertisement
ಹಾಲಿವುಡ್ ತಾರೆ ವಯೋಲಾ ಡೇವಿಸ್ ಕಥೆಯ ಕುರಿತು ಪೋಸ್ಟ್ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ಪುಟ್ಟ ಬಾಲಕ ಹಾಗೂ ಬಾಲಕಿಯ ನಡುವೆ ಫೈಟ್ ನಡೆಯುತ್ತಿದೆ. ಆತ್ಮವಿಶ್ವಾಸದ ಮನೋಭಾವದಿಂದ ಹುಡುಗ ಜಗಳ ಆರಂಭಿಸಿ ನಂತರ ಹುಡುಗಿಯ ಎದುರು ಸೋತು ಅಳಲು ಆರಂಭಿಸುತ್ತಾನೆ. ಈ ವಿಡಿಯೋ ಹಂಚಿಕೊಂಡಿರುವ ಸಮಂತಾ, ‘ಹುಡುಗಿಯಂತೆ ಹೋರಾಡಿ’ ಎಂದು ಬರೆದಿದ್ದಾರೆ. ಈ ಮೂಲಕ ನಿಗೂಢ ಸಂದೇಶ ಬರೆದುಕೊಂಡಿದ್ದಾರೆ.
Advertisement
Advertisement
ಅಂದಹಾಗೆ, ಸಮಂತಾ ಜೊತೆ 2017ರಲ್ಲಿ ನಾಗಚೈತನ್ಯ ಮದುವೆಯಾಗಿದ್ದರು. ಕೆಲ ಮನಸ್ತಾಪಗಳಿಂದ ಇಬ್ಬರೂ ಡಿವೋರ್ಸ್ ಪಡೆದುಕೊಳ್ಳುವುದಾಗಿ 2021ರಲ್ಲಿ ಅನೌನ್ಸ್ ಮಾಡಿದರು. ಡಿ.4ರಂದು ಶೋಭಿತಾ ಜೊತೆ ನಟ 2ನೇ ಮದುವೆ ಆಗಿದ್ದಾರೆ.