ನಾನು ಪ್ರೀತಿಸಿದ ಮೊದಲ ಹುಡುಗಿ ಸಮಂತಾ: ಟ್ವೀಟ್ ಮಾಡಿದ ವಿಜಯ್ ದೇವರಕೊಂಡ

ವಿಜಯ್ ದೇವರಕೊಂಡ (Vijay Devarakonda) ಅಂದಾಕ್ಷಣ ಥಟ್ಟನೆ ನೆನಪಾಗುವ ಹೆಸರು ರಶ್ಮಿಕಾ ಮಂದಣ್ಣ (Rashmika Mandanna) ಅವರದ್ದು. ಇಬ್ಬರೂ ಡೇಟ್ ಮಾಡುತ್ತಿದ್ದಾರೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಮೊನ್ನೆಯಷ್ಟೇ ಈ ಜೋಡಿ ವಿದೇಶ ಪ್ರವಾಸಕ್ಕೂ ಹೋಗಿ ಬಂತು. ಅಲ್ಲದೇ, ಈ ಜೋಡಿ ಒಟ್ಟಿಗೆ ನ್ಯೂ ಇಯರ್ ಅನ್ನು ಗೋವಾದಲ್ಲಿ ಆಚರಿಸಿ ಹೆಚ್ಚು ಸದ್ದು ಮಾಡಿದ್ದರು. ಇಬ್ಬರ ನಡುವಿನ ಪ್ರೀತಿ (Love) ಬ್ರೇಕ್ ಆಗಿದೆ ಎನ್ನುವ ಹೊತ್ತಿನಲ್ಲಿ ವಿದೇಶ ಪ್ರವಾಸ ಮಾಡುವ ಮೂಲಕ ನಾವಿಬ್ಬರೂ ಇನ್ನೂ ಜೊತೆಯಾಗಿಯೇ ಇದ್ದೇವೆ ಎಂದು ತೋರಿಸಿದರು.
ಇಂತಹ ಹೊತ್ತಿನಲ್ಲಿ ವಿಜಯ್ ದೇವರಕೊಂಡ ಮಾಡಿರುವ ಟ್ವೀಟ್ ವೈರಲ್ ಆಗಿದೆ. ವಿಜಯ್ ದೇವರಕೊಂಡ ಬಹಿರಂಗವಾಗಿಯೇ ಸಮಂತಾರನ್ನು ನಾನು ಕಾಲೇಜು ದಿನಗಳಲ್ಲಿ ಇಷ್ಟ ಪಡುತ್ತಿದ್ದೆ ಎಂದು ಬರೆದುಕೊಂಡಿದ್ದಾರೆ. ‘ಕಾಲೇಜು ದಿನಗಳಲ್ಲಿ ನಾನು ಮೊದಲು ಇಷ್ಟ ಪಟ್ಟಿರೋ ಹುಡುಗಿ ಸಮಂತಾ. ಅವರನ್ನು ದೊಡ್ಡ ಪರದೆಯ ಮೇಲೆ ನೋಡಿ ಆನಂದಿಸುತ್ತಿದ್ದೆ. ಇದೀಗ ಹತ್ತಿರದಲ್ಲೇ ನೋಡುತ್ತಿರುವೆ. ಅವರು ಹೇಗೆ ಇದ್ದರೂ, ಏನೇ ಇದ್ದರೂ, ನಾನು ಇಷ್ಟಪಡುತ್ತಲೇ ಇರುತ್ತೇನೆ’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಗಂಧದಗುಡಿ ಸಿನಿಮಾ ಅಲ್ಲವೇ ಅಲ್ಲ, ಅದೊಂದು ಅನುಭೂತಿ
ಕಾಲೇಜು ದಿನಗಳಿಂದಲೂ ವಿಜಯ್ ದೇವರಕೊಂಡಗೆ ಸಮಂತಾ (Samantha) ಇಷ್ಟದ ನಟಿಯಂತೆ. ಇದೀಗ ಸಮಂತಾ ನಟನೆಯ ಯಶೋದಾ ಸಿನಿಮಾ ರಿಲೀಸ್ ಆಗುತ್ತಿದೆ. ಈ ಹೊತ್ತಿನಲ್ಲಿ ಸಮಂತಾರನ್ನು ವಿಜಯ್ ನೆನಪಿಸಿಕೊಂಡಿದ್ದಾರೆ. ತಮ್ಮ ಹಳೆಯ ಕ್ರಷ್ ಬಗ್ಗೆ ಮಾತನಾಡಿದ್ದಾರೆ. ಸಮಂತಾ ಕುರಿತಾಗಿ ಟ್ವೀಟ್ ಮಾಡುತ್ತಿದ್ದಂತೆಯೇ ರಶ್ಮಿಕಾ ಮಂದಣ್ಣ ಕಥೆ ಏನು ಎಂದು ಹಲವರು ಕಾಲೆಳೆದಿದ್ದಾರೆ.