ಸಮಂತಾ (Samantha) ನಟಿಸಿರುವ ಬಾಲಿವುಡ್‌ನ ಎರಡನೇ ಪ್ರಾಜೆಕ್ಟ್ ‘ಸಿಟಾಡೆಲ್: ಹನಿ ಬನಿ’ ಟ್ರೈಲರ್ ರಿಲೀಸ್ ಆಗಿದೆ. ವರುಣ್ ಧವನ್ (Varun Dhawan) ಜೊತೆ ಆ್ಯಕ್ಷನ್ ಅವತಾರದಲ್ಲಿ ಸಮಂತಾ ಕಾಣಿಸಿಕೊಂಡಿದ್ದಾರೆ. ಒಟಿಟಿ ರಿಲೀಸ್ ಕುರಿತು ಫ್ಯಾನ್ಸ್‌ಗೆ ಸಿಹಿಸುದ್ದಿ ಕೂಡ ಸಿಕ್ಕಿದೆ. ಇದನ್ನೂ ಓದಿ:ಬ್ಯಾಚುಲರ್ ಪಾರ್ಟಿ ಕಾಪಿರೈಟ್ ಉಲ್ಲಂಘನೆ ಕೇಸ್: ವಿಚಾರಣೆಗೆ ರಕ್ಷಿತ್ ಶೆಟ್ಟಿ ಹಾಜರು
‘ಸಿಟಾಡೆಲ್: ಹನಿ ಬನಿ’ (Citadel Honey Bunny) ಟ್ರೈಲರ್‌ನಲ್ಲಿ ಸಮಂತಾ ಗೂಢಚಾರಿಣಿಯಾಗಿ ಕಾಣಿಸಿಕೊಂಡಿದ್ದಾರೆ. ನಟಿ ಜೊತೆಗೆ ಬಾಲಿವುಡ್ ನಟ ವರುಣ್ ಧವನ್ ಕೂಡ ನಟಿಸಿದ್ದಾರೆ. ವೆಬ್ ಸರಣಿಯಲ್ಲಿ ಸಮಂತಾ ಆ್ಯಕ್ಷನ್ ಅವತಾರ ತಾಳಿದ್ದಾರೆ. ಅದ್ಧೂರಿಯಾಗಿ ‘ಹನಿ ಬನಿ’ ಚಿತ್ರೀಕರಣವನ್ನು ಮಾಡಲಾಗಿದ್ದು, ಭಾರತ ಸೇರಿದಂತೆ ವಿದೇಶಗಳಲ್ಲಿಯೂ ವೆಬ್ ಸರಣಿಯ ಶೂಟಿಂಗ್ ಮಾಡಲಾಗಿದೆ. ಆ್ಯಕ್ಷನ್ ಸೀಕ್ವೆನ್ಸ್ ಮತ್ತು ವರುಣ್ ಜೊತೆಗಿನ ಸಮಂತಾ ರೊಮ್ಯಾನ್ಸ್ ಇದ್ದು, ಸೆಂಟಿಮೆಂಟ್ ಸಹ ಇರುವುದಕ್ಕೆ ಟ್ರೈಲರ್‌ನಲ್ಲಿ ಸುಳಿವುಗಳಿವೆ.
ಪ್ರಿಯಾಂಕಾ ಚೋಪ್ರಾ ನಟಿಸಿದ ಹಾಲಿವುಡ್ ವೆಬ್ ಸರಣಿ ‘ಸಿಟಾಡೆಲ್’ ಭಾರತೀಯ ವರ್ಷನ್‌ನಲ್ಲಿ ರಿಲೀಸ್ ಆಗುತ್ತಿದೆ. ‘ಸಿಟಾಡೆಲ್ ಹನಿ ಬನಿ’ ಟೈಟಲ್‌ನೊಂದಿಗೆ ಬಿಡುಗಡೆಯಾಗ್ತಿದೆ. ಇದಕ್ಕೆ ರಾಜ್ ಮತ್ತು ಡಿಕೆ ನಿರ್ದೇಶನ ಮಾಡಿದ್ದಾರೆ. ಸಮಂತಾ, ವರುಣ್ ಧವನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದೇ ನವೆಂಬರ್ 7ರಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.
ಈ ಹಿಂದೆ ಸಮಂತಾ, ‘ದಿ ಫ್ಯಾಮಿಲಿ ಮ್ಯಾನ್ 2’ನಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಈ ವೆಬ್ ಸರಣಿ ಸೂಪರ್ ಹಿಟ್ ಆಗಿತ್ತು. ಈಗ ಬಾಲಿವುಡ್‌ನಲ್ಲಿ ‘ಸಿಟಾಡೆಲ್’ ಮೂಲಕ ನಟಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.