ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ, ಚಿಕಿತ್ಸೆಗಾಗಿ ಅಮೆರಿಕಾಗೆ ಹೋಗುವ ಮುನ್ನ ಹಲವು ದೇವಸ್ಥಾನಗಳಿಗೆ ಭೇಡಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಮೊನ್ನೆಯಷ್ಟೇ ಅವರು ವೆಲ್ಲೂರಿನ ಶ್ರೀ ಲಕ್ಷ್ಮೀ ನಾರಾಯಣ ಗೋಲ್ಡನ್ ಟೆಂಪಲ್ (Sri Lakshmi Narayana Golden Temple) ಗೆ ಭೇಟಿ ನೀಡಿದ್ದಾರೆ. ಈ ಹಿಂದೆಯೇ ಅವರು ಆರೋಗ್ಯಕ್ಕಾಗಿ ಹಲವಾರು ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು.
Advertisement
ವೆಲ್ಲೂರಿನ (Vellore) ದೇವಸ್ಥಾನದಲ್ಲಿ ಫ್ರೆಂಡ್ಸ್ ಜೊತೆ ಕಾರಿನಲ್ಲಿ ತೆರಳಿದ್ದ ಸಮಂತಾ, ಆ ಪ್ರಯಾಣದ ಕುರಿತಾಗಿ ಅವರು ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ. ಇಷ್ಟದ ಫ್ರೆಂಡ್ಸ್ ಜೊತೆ ಇಷ್ಟದ ಹಾಡುಗಳು ಕೂಡ ಜೊತೆಯಾಗಿದ್ದವು ಎಂದು ಅವರು ಪೋಸ್ಟ್ ಮಾಡಿದ್ದಾರೆ. ಸಮಂತಾ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಅನೇಕರು ಹಾರೈಸಿದ್ದಾರೆ. ದೇವರು ನಿಮ್ಮೊಂದಿಗೆ ಇದ್ದಾನೆ ಎಂದೂ ಕೆಲವರು ಕಾಮೆಂಟ್ ಮಾಡಿದ್ದಾರೆ.
Advertisement
Advertisement
ಸಮಂತಾ (Samantha), ಒಪ್ಪಿಕೊಂಡಿದ್ದ ಸಿನಿಮಾಗಳನ್ನ ಮುಗಿಸಿಕೊಟ್ಟಿದ್ದಾರೆ. ಈಗ ತಮ್ಮ ಆರೋಗ್ಯದ ಕಡೆ ಗಮನ ವಹಿಸುತ್ತಿದ್ದಾರೆ. ಡಿವೋರ್ಸ್ ನಂತರ ಒಂದಲ್ಲಾ ಒಂದು ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವ ಸಮಂತಾ ಸೂಕ್ತ ಚಿಕಿತ್ಸೆಗಾಗಿ ಅಮೆರಿಕಾಗೆ (America) ಹಾರಿದ್ದಾರೆ ಎಂದು ಹೇಳಲಾಗುತ್ತಿದೆ. ದೇವಸ್ಥಾನಗಳನ್ನು ಭೇಟಿ ಮಾಡಿದ ನಂತರ ಅವರು ವಿಮಾನ ಏರಿದ್ದಾರೆ ಎನ್ನುವುದು ಅವರ ಆಪ್ತರ ಮಾಹಿತಿ.
Advertisement
ಮೊನ್ನೆಯಷ್ಟೇ ಅವರೊಂದು ಪೋಸ್ಟ್ ಹಾಕಿದ್ದರು. ಜೊತೆಗೆ ತಮ್ಮ ಆರೋಗ್ಯ ಸುಧಾರಣೆಗೆ ಹೊಸ ಮಾದರಿಯ ಥೆರಪಿಯೊಂದನ್ನ ಮಾಡಿಸುತ್ತಿದ್ದಾರೆ. ಇದು ಆಮ್ಲಜನಕ ಥೆರಪಿಯಾಗಿದ್ದು, ಇದರ ಫೋಟೋವನ್ನ ನಟಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಆ ಕುರಿತು ಸಮಂತಾ ವಿವರಣೆಯನ್ನೂ ನೀಡಿದ್ದರು.
ನಾಗಚೈತನ್ಯ (NagaChaitanya) ಜೊತೆಗಿನ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಮೇಲೆ ಮಯೋಸಿಟಿಸ್ ಕಾಯಿಲೆಯಿಂದ ಸಮಂತಾ ಬಳಲುತ್ತಿದ್ದರು. ಇದಕ್ಕೆ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿಯೇ ಚರ್ಮದ ಸಮಸ್ಯೆ, ಶ್ವಾಸಕೋಶದ ಸಮಸ್ಯೆಯನ್ನ ನಟಿ ಎದುರಿಸುತ್ತಿದ್ದರು. ಹಾಗಾಗಿ ಸಿನಿಮಾಗೆ ಕೊಂಚ ಬ್ರೇಕ್ ನೀಡಿ, ತಮ್ಮ ಹೆಲ್ತ್ ಕಡೆ ನಟಿ ಗಮನ ಕೊಡ್ತಿದ್ದಾರೆ.
ಹೆಚ್‌ಬಿಓಟಿ ಹೆಸರಿನ ಚಿಕಿತ್ಸೆಯನ್ನು ಸ್ಯಾಮ್ ಪಡೆದುಕೊಳ್ಳುತ್ತಿದ್ದಾರೆ. ಹೆಚ್‌ಬಿಓಟಿ ಎಂದರೆ ಹೈಪರ್‌ಬ್ಯಾರಿಕ್ ಆಕ್ಸಿಜನ್ ಥೆರಪಿ ಎಂದರ್ಥ. ಈ ಚಿಕಿತ್ಸಾ ವಿಧಾನದಲ್ಲಿ ವ್ಯಕ್ತಿಗೆ ಪ್ರತ್ಯೇಕವಾಗಿ ಶುದ್ಧ ಆಮ್ಲಜನಕವನ್ನು ಸಾಮಾನ್ಯಕ್ಕಿಂತಲೂ ಹೆಚ್ಚಿನ ವೇಗದಲ್ಲಿ ನೀಡಲಾಗುತ್ತದೆ. ಈ ಥೆರಪಿ ಮಾಡಿಸಲು ವಿಶೇಷವಾದ ಕೋಣೆ ಅಥವಾ ಚೇಂಬರ್‌ಗಳನ್ನು ನಿರ್ಮಿಸಿ ಅದರಲ್ಲಿ ಚಿಕಿತ್ಸೆ ಪಡೆಯುವವರನ್ನು ಕೂರಿಸಿ ಅಥವಾ ಮಲಗಿಸಿ ವೇಗವಾಗಿ ಶುದ್ಧ ಆಮ್ಲಜನಕವನ್ನು ಅವರ ದೇಹಕ್ಕೆ ಹರಿಸಲಾಗುತ್ತದೆ. ಈ ಚಿಕಿತ್ಸೆಯಿಂದ ಶ್ವಾಸಕೋಶಗಳು ಹೆಚ್ಚು ಆಮ್ಲಜನಕವನ್ನು ಹೀರಿಕೊಳ್ಳುತ್ತವೆ ಹಾಗೂ ರಕ್ತದಲ್ಲಿಯೂ ಆಮ್ಲಜನಕದ ಪ್ರಮಾಣ ಹೆಚ್ಚಾಗುತ್ತದೆ. ಚರ್ಮವು ಶುಷ್ಕವಾಗಿ ಬಿಳಿಚಿಕೊಳ್ಳುವುದರಿಂದ ರಕ್ಷಿಸುತ್ತದೆ. ರಕ್ತದಲ್ಲಿ ಆಮ್ಲಜನಕ ಪ್ರಮಾಣ ಹೆಚ್ಚಾಗುವುದರಿಂದ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಶ್ವಾಸಕೋಶದ ಸೋಂಕುಗಳು ನಿವಾರಣೆಯಾಗುತ್ತದೆ. ಗಾಯಗಳು, ನೋವುಗಳು ಬೇಗನೆ ಮಾಯಲು, ವಾಸಿಯಾಗಲು ಪ್ರಾರಂಭವಾಗುತ್ತವೆ.
ನಟಿ ಸಮಂತಾ, ವಿಜಯ್ ದೇವರಕೊಂಡ (Vijay Devarakonda) ಜೊತೆಗಿನ ‘ಖುಷಿ’ (Kushi) ಸಿನಿಮಾ ಮುಗಿಸಿ ಕೊಟ್ಟಿದ್ದಾರೆ. ವರುಣ್ ಧವನ್ ಜೊತೆಗಿನ ಸಿಟಾಡೆಲ್ (Citadel) ಕೂಡ ಶೂಟಿಂಗ್ ಮುಗಿದಿದೆ. ಇಂಗ್ಲೀಷ್‌ನ ಒಂದು ಸಿನಿಮಾ, ಬಾಲಿವುಡ್ ಚಿತ್ರವೊಂದನ್ನ ನಟಿ ಓಕೆ ಎಂದಿದ್ದಾರೆ. ಸಮಂತಾ ಆರೋಗ್ಯದಲ್ಲಿ ಚೇತರಿಕೆ ಕಂಡ ಮೇಲೆ ಮತ್ತೆ ಸಿನಿಮಾ ಮಾಡಲಿದ್ದಾರೆ. ಅಲ್ಲಿಯವರೆಗೂ ನಟಿ ಬ್ರೇಕ್ ತೆಗೆದುಕೊಳ್ಳಲಿದ್ದಾರೆ.
ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ನಟಿ ಸಮಂತಾ, ದಿನಕ್ಕೊಂದು ಪೋಸ್ಟ್ ಮಾಡಿ ತಮ್ಮ ಅಂತರಾಳದ ದುಗುಡಗಳನ್ನು ಅಭಿಮಾನಿಗಳ ಮುಂಚೆ ಬಿಚ್ಚಿಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದ ಮೂಲಕ ಸದಾ ಅಭಿಮಾನಿಗಳ ಜೊತೆ ಕನೆಕ್ಟ್ ಆಗುವ ಸಮಂತಾ, ಈ ಬಾರಿ ಆರು ತಿಂಗಳ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ದಿನಕ್ಕೂ ಅವು ಯಾತನೆಯ ದಿನಗಳು ಎಂದಿದ್ದಾರೆ.
ಆರೋಗ್ಯದ ಸಮಸ್ಯೆಯಿಂದಾಗಿ ಸಿನಿಮಾ ರಂಗಕ್ಕೆ ಒಂದು ವರ್ಷಗಳ ಕಾಲ ಗೈರಾಗಿದ್ದ ಸಮಂತಾ, ಟ್ರೀಟ್ ಮೆಂಟ್ ನಂತರ ಮತ್ತೆ ಬಂದಿದ್ದರು. ಒಪ್ಪಿಕೊಂಡಿದ್ದ ಪ್ರಾಜೆಕ್ಟ್ ಗಳನ್ನು ಅವರು ಮುಗಿಸಿಕೊಡಬೇಕಿತ್ತು. ಹಾಗಾಗಿ ಆರು ತಿಂಗಳ ಕಾಲ ನೋವಿನಲ್ಲೇ ಕೆಲಸ ಮಾಡಿದ್ದಾರೆ. ಇನ್ನೂ ಸಾಧ್ಯವಿಲ್ಲ ಅನಿಸಿ, ಒಂದಷ್ಟು ಪ್ರಾಜೆಕ್ಟ್ ಗಳಿಗೆ ತೆಗೆದುಕೊಂಡಿದ್ದ ಅಡ್ವಾನ್ಸ್ ವಾಪಸ್ಸು ಮಾಡಿ ಮತ್ತೆ ಆರೋಗ್ಯದ ಕಡೆ ಗಮನ ಹರಿಸಿದ್ದಾರೆ.
Web Stories