ನಟಿ ಸಮಂತಾ (Samantha) ಮತ್ತು ಮಾಜಿ ಅತ್ತೆ ಅಮಲಾ (Amala Akkineni) ಒಂದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರೋದು ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ. ಸಮಂತಾ ಭಾಷಣಕ್ಕೆ ಅಮಲಾ ಚಪ್ಪಾಳೆ ಹೊಡೆದಿರುವ ವಿಡಿಯೋ ವೈರಲ್ ಆಗಿದೆ. ಇದನ್ನೂ ಓದಿ:100 ಮಿಲಿಯನ್ ಮಿನಿಟ್ ಸ್ಟ್ರೀಮಿಂಗ್ ಕಂಡ ಜಾಜಿಯ ರೋಚಕ ಕಥೆ- Zee5ನಲ್ಲಿ ‘ಅಯ್ಯನ ಮನೆ’ ರೆಕಾರ್ಡ್
ಸಮಂತಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 15 ವರ್ಷಗಳಾಗಿವೆ. ಇಂದಿಗೂ ನಟಿಗೆ ಫ್ಯಾನ್ಸ್ ಕ್ರೇಜ್ ಇದೆ. ಹೀಗಾಗಿ ನಟಿಯ ಸಾಧನೆಗೆ ಜೀ ತೆಲುಗು ಅವಾಡ್ಸ್ ಕಾರ್ಯಕ್ರಮದಲ್ಲಿ ‘ಕ್ವೀನ್ ಆಫ್ ಸಿಲ್ವರ್ ಸ್ಕ್ರೀನ್’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಅವರ ಮಾಜಿ ಅತ್ತೆ ಅಮಲಾ ಕೂಡ ಭಾಗವಹಿಸಿದ್ದರು. ಇದನ್ನೂ ಓದಿ:ಅವಳ ಹಿಂದೆ ಇಬ್ಬರು ಹೀರೋ, ಒಬ್ಬಳು ಲೇಡಿ ಡಾನ್ ಇದ್ದಾಳೆ – ರೇಪ್ ಕೇಸ್ ದಾಖಲಾದ ಬಳಿಕ ಮಡೆನೂರು ಮನು ಬಾಂಬ್
View this post on Instagram
ಕಾರ್ಯಕ್ರಮದಲ್ಲಿ ಸಮಂತಾ ಮಾತನಾಡಿ, ತೆಲುಗು ಚಿತ್ರರಂಗ ನನಗೆ ಎಲ್ಲವನ್ನೂ ನೀಡಿದೆ. ಇದೇ ನನ್ನ ಕರ್ಮ ಭೂಮಿ. ತೆಲುಗು ಪ್ರೇಕ್ಷಕರಿಗೆ ಯಾವಾಗಲೂ ನಾನು ಮೊದಲ ಸ್ಥಾನ ಕೊಡುತ್ತೇನೆ ಎಂದು ಭಾವುಕವಾಗಿ ಸಮಂತಾ ಮಾತನಾಡಿದರು. ಈ ವೇಳೆ ಸ್ಯಾಮ್ ಮಾತಿಗೆ, ಅಮಲಾ ನಗು ನಗುತ್ತಾ ಚಪ್ಪಾಳೆ ತಟ್ಟಿದ್ದಾರೆ.
ಅಂದಹಾಗೆ, 2010ರಲ್ಲಿ ‘ಯೇ ಮಾಯಾ ಚೇಸಾವೆ’ ಚಿತ್ರದ ಮೂಲಕ ನಾಗಚೈತನ್ಯಗೆ ನಾಯಕಿ ಸಮಂತಾ ನಟಿಸಿದರು. ಇಲ್ಲಿಯೇ ನಾಗಚೈತನ್ಯರನ್ನು ನಟಿ ಮೊದಲು ಭೇಟಿಯಾದರು. ಈ ಪರಿಚಯ ಪ್ರೀತಿಗೆ ತಿರುಗಿ ಮದುವೆಗೆ ಮುನ್ನಡಿ ಬರೆದಿತ್ತು. 2017ರಲ್ಲಿ ಇಬ್ಬರೂ ಮದುವೆಯಾದರು. ಕೆಲ ಮನಸ್ತಾಪಗಳಿಂದ 2021ರಲ್ಲಿ ಡಿವೋರ್ಸ್ ಪಡೆದರು.