CinemaLatestMain PostSouth cinema

ಮೋಸ ಮಾಡುವವರು ಎಂದಿಗೂ ಉದ್ಧಾರ ಆಗಲ್ಲ: ಸಿದ್ದಾರ್ಥ್

ಹೈದರಾಬಾದ್: ನಟಿ ಸಮಂತಾ ಪತಿ ನಾಗಚೈತನ್ಯ ಡಿವೋರ್ಸ್ ನೀಡಿರುವುದು ತಿಳಿಸಿರುವ ವಿಚಾರವಾಗಿದೆ. ಆದರೆ ಸಮಂತಾ ಅವರ ಮಾಜಿ ಪ್ರೀಯಕರ ಟಾಲಿವುಡ್ ನಟ ಸಿದ್ದಾರ್ಥ್ ಸಮಂತಾಗೆ ಟಾಂಗ್ ಕೊಟ್ಟು ಟ್ವೀಟ್ ಮಾಡಿದ್ದಾರೆ.

ನಾಗಚೈತನ್ಯ ಹಾಗೂ ಸಮಂತಾ ವಿಚ್ಛೇದನ ಸುದ್ದಿ ಹೊರ ಬರುತ್ತಿದ್ದಂತೆ ಟ್ವೀಟ್ ಮಾಡಿರುವ ಸಿದ್ದಾರ್ಥ್ ಮೋಸ ಮಾಡುವವರು ಎಂದಿಗೂ ಏಳೆಗೆಯಾಗುವುದಿಲ್ಲ, ಎನ್ನುವ ಪಾಠವನ್ನು ಬಾಲ್ಯದಲ್ಲಿ ನನ್ನ ಶಿಕ್ಷಕರಿಂದ ಕಲಿತೆ ಎಂದು ನಟ ಸಿದ್ದಾರ್ಥ್ ಟ್ವೀಟ್ ಮಾಡಿದ್ದಾರೆ.ಇದನ್ನೂ ಓದಿ : ನಾನು ನನ್ನನ್ನು ಬದಲಾಯಿಸಿಕೊಳ್ಳಬೇಕು: ಸಮಂತಾ

ಸಮಂತಾ ಮತ್ತು ಸಿದ್ದಾರ್ಥ್ ಮಾಜಿ ಪ್ರೇಮಿಗಳು ಎನ್ನುವುದು ಬಹುತೇಕ ಜನರಿಗೆ ಗೊತ್ತಿರದ ವಿಚಾರವಾಗಿದೆ. 2003ರಲ್ಲಿ ಮೇಘನಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ನಟ, 2007 ರಲ್ಲಿ ಆಕೆಯಿಂದ ವಿಚ್ಛೇದನ ಪಡೆದರು. ನಂತರ ಸೋಹಾ ಅಲಿಖಾನ್ ಜೊತೆ ಪ್ರೀತಿಯಲ್ಲಿ ಬಿದ್ದರು. ಈಕೆಯೊಂದಿಗೆ ಬ್ರೇಕಪ್ ಮಾಡಿಕೊಂಡ ಬಳಿಕ ಶೃತಿ ಹಾಸನ್ ಅವರೊಂದಿಗೆ ಮೂರುವರೆ ವರ್ಷ ರಿಲೇಷೆನ್‍ಶಿಪ್‍ನಲ್ಲಿದ್ದರು. ಶೃತಿ ಹಾಸನ್ ಜೊತೆಗಿನ ಪ್ರೀತಿ ಮುರಿದು ಬಿದ್ದ ನಂತರ ಈ ನಟನಿಗೆ ಸಿಕ್ಕದ್ದೆ ಸಮಂತಾ. ಇದನ್ನೂ ಓದಿ :  ವಿಚ್ಛೇದನ ಪಡೆಯುತ್ತಿದ್ದಂತೆ ಹೆಸರು ಬದಲಿಸಿಕೊಂಡ ಸಮಂತಾ

ತೆಲುಗಿನ ಜಬರ್ದಸ್ತ್ ಸಿನಿಮಾ ಸೆಟ್ಟಿನಲ್ಲಿ ಸಮಂತಾ ಹಾಗೂ ಸಿದ್ದಾರ್ಥ್ ಪರಿಚಯವಾಗಿದ್ದರು. ಅಲ್ಲಿಂದ ಶುರುವಾದ ಇವರ ಸ್ನೇಹ ಪ್ರೀತಿಯಾಗಿ ಪ್ರಮೋಟ್ ಆಗಿತ್ತು. ಇವರಿಬ್ಬರೂ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಕೂಡ ಕೇಳಿ ಬಂದಿತ್ತು. ಆದರೆ ಅಷ್ಟರಲ್ಲಾಗಲೇ ಈ ಜೋಡಿ ಬೇರೆ ಬೇರೆಯಾಗಿತ್ತು. ಇದನ್ನೂ ಓದಿ: 200 ಕೋಟಿ ಜೀವನಾಂಶ ರಿಜೆಕ್ಟ್ ಮಾಡಿದ ಸಮಂತಾ

ಸಿದ್ದಾರ್ಥ್ ಅವರಿಂದ ದೂರವಾದ ಸಮಂತಾ ಅವರು ನಾಗಚೈತನ್ಯ ಅವರ ಜೊತೆ ಪ್ರೀತಿಯಲ್ಲಿ ಬೀಳುತ್ತಾರೆ. 2017 ರಲ್ಲಿ ಮದುವೆಯಾಗುತ್ತಾರೆ. ಆದರೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ 4 ವರ್ಷದಲ್ಲಿ ವಿಚ್ಛೇದನ ಪಡೆದಿದ್ದಾರೆ. ಸಮಂತಾ ಅವರು ತಮ್ಮ ವಿಚ್ಛೇದನ ಸುದ್ದಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಬೆನ್ನಲ್ಲೆ ಟ್ವೀಟ್ ಮಾಡಿರುವ ಸಿದ್ದಾರ್ಥ್ ಟ್ವೀಟ್ ಮಾಡಿ ಮಾಜಿ ಪ್ರೇಯಸಿಗೆ ಟಾಂಗ್ ಕೊಟ್ಟಿದ್ದಾರೆ.

Leave a Reply

Your email address will not be published. Required fields are marked *

Back to top button