ಸೌತ್ ಬ್ಯೂಟಿ ಸಮಂತಾ (Samantha) ಮೈಯೋಸಿಟಿಸ್ ಕಾಯಿಲೆಗೆ ಚಿಕಿತ್ಸೆ ಪಡೆದು ಮತ್ತೆ ಕೆಲಸಕ್ಕೆ ಮರಳಿದ್ದಾರೆ. ಮತ್ತೆ ಸಿನಿಮಾಗಳ ಮುಖ ಮಾಡಿದ್ದಾರೆ. `ಶಾಕುಂತಲಂ’ ಸಿನಿಮಾ ರಿಲೀಸ್‌ಗೆ ರೆಡಿಯಿರುವ ಬೆನ್ನಲ್ಲೇ ಬಾಲಿವುಡ್‌ನ (Bollywood) ಬಿಗ್ ಪ್ರಾಜೆಕ್ಟ್‌ಗೆ ಸಮಂತಾ ಸಾಥ್ ನೀಡಿದ್ದಾರೆ.

`ಸಿಟಾಡೆಲ್’ (Citadel) ಎಂಬ ಸೀರಿಸ್‌ನಲ್ಲಿ ಸಮಂತಾ ನಟಿಸುತ್ತಿದ್ದಾರೆ. ಬಾಲಿವುಡ್ ನಟ ವರುಣ್ ಧವನ್ (Varun Dhawan) ಜೊತೆ ನಾಯಕಿಯಾಗಿ ಸೌತ್ ಸುಂದರಿ ಸಮಂತಾ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಚೇತರಿಸಿಕೊಂಡಿರುವ ಸಮಂತಾ ಮತ್ತೆ ಆಕ್ಟೀವ್ ಆಗಿದ್ದಾರೆ. ಆಗಾಗಲೇ ಶೂಟಿಂಗ್‌ಗಾಗಿ ಸಮಂತಾ ಮುಂಬೈಗೆ ಬೀಡು ಬಿಟ್ಟಿದ್ದಾರೆ. 2 ವಾರಗಳ ಕಾಲ ಮುಂಬೈನಲ್ಲಿ ಶೂಟಿಂಗ್ ನಡೆಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಇದನ್ನೂ ಓದಿ: ರಾತ್ರಿ 2 ಗಂಟೆಗೆ ಅಸ್ಸಾಂ ಸಿಎಂಗೆ ಶಾರುಖ್ ಖಾನ್ ಫೋನ್ ಕಾಲ್
ಈಗಾಗಲೇ ವರುಣ್ ಧವನ್ ಶೂಟಿಂಗ್ ಪ್ರಾರಂಭಿಸಿದ್ದು ಸಮಂತಾ ಕೂಡ ಸಾಥ್ ನೀಡಲಿದ್ದಾರೆ. ವರುಣ್ ಧವನ್ ಈಗಾಗಲೇ ಕೆಲವು ಆ್ಯಕ್ಷನ್ ದೃಶ್ಯಗಳನ್ನು ಚಿತ್ರೀಕರಿಸಿದ್ದಾರೆ. `ಸಿಟಾಡೆಲ್’ ಅಮೆರಿಕಾದ ಸೀರಿಸ್ ಆಗಿದ್ದು, ಪ್ರಿಯಾಂಕಾ ಚೋಪ್ರಾ (Priyanka Chopra) ಮತ್ತು ರಿಚರ್ಡ್ ಮ್ಯಾಡೆನ್ ಕಾಣಿಸಿಕೊಂಡಿದ್ದರು. ಅದೇ ಸರಣಿಯ ಹಿಂದಿ ವರ್ಷನ್‌ನಲ್ಲಿ ಸಮಂತಾ ಮತ್ತು ವರುಣ್ ಧವನ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಹುನಿರೀಕ್ಷೆಯ ಸೀರಿಸ್‌ಗೆ ಫ್ಯಾಮಿಲಿ ಮ್ಯಾನ್ ಖ್ಯಾತಿಯ ರಾಜ್ (Raj) ಮತ್ತು ಡಿಕೆ (Dk) ನಿರ್ದೇಶನ ಮಾಡುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k



