ಹೈದರಾಬಾದ್: ನಟಿ ಸಮಂತಾ ವಿಚ್ಛೇದನ ನಂತರ ಸಿನಿಮಾಗಳಲ್ಲಿ ನಟಿಸುವ ಅವಕಾಶ ಅವರಿಗೆ ಬರುತ್ತಿವೆ. ಹೀಗಾಗಿ ಅವರು ಜೀಮ್ನಲ್ಲಿ ಬೇವರು ಹರಿಸುತ್ತಾ, ದೇಹವನ್ನು ದಂಡಿಸುತ್ತಿದ್ದಾರೆ. ಈ ವೀಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡು ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ.
Advertisement
ಫಿಟ್ನೆಸ್ಗೆ ಹೆಚ್ಚು ಒತ್ತು ನೀಡುವ ಸಮಂತಾ ಜಿಮ್ನಲ್ಲಿ ವರ್ಕೌಟ್ ಮಾಡುತ್ತಿರುವ ವೀಡಿಯೊವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿರುವ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಮಂತಾ ಅತ್ಯಂತ ಸುಲಭವಾಗಿ ತೂಕವನ್ನು ಎತ್ತುವುದನ್ನು ಕಾಣಬಹುದು. 75, 78, 80 ಕೆ.ಜಿ ತೂಕ ಎತ್ತುತ್ತಿರುವ ವೀಡಿಯೊವನ್ನು ಪೋಸ್ಟ್ ಮಾಡಿದ್ದರು. ಇದನ್ನೂ ಓದಿ: ಬೇಬಿ ಬಂಪ್ ಫೋಟೋಶೂಟ್ನಲ್ಲಿ ನಟಿ ಅಮೂಲ್ಯ
Advertisement
View this post on Instagram
Advertisement
ಇತ್ತೀಚೆಗೆ ತೆರೆಕಂಡ ಸುಕುಮಾರ್ ನಿರ್ದೇಶನದ ಪುಷ್ಪ ಸಿನಿಮಾದಲ್ಲಿ ಸಮಂತಾ, ಮೊದಲ ಬಾರಿಗೆ ಐಟಂ ಸಾಂಗ್ನಲ್ಲಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಹೂ ಅಂತಿಯಾ ಮಾವ. ಊ ಊ ಅಂತಿಯಾ ಹಾಡಿಗೆ ಸಮಂತಾ ಮೈ ಚಳಿ ಬಿಟ್ಟು ಸೊಂಟ ಬಳುಕಿಸಿದ್ದಾರೆ. ಸಿನಿಮಾ ಗೆಲುವಿನಲ್ಲಿ ಈ ವಿಶೇಷ ಹಾಡು ಪ್ರಮುಖ ಪಾತ್ರ ವಹಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಸೆಲೆಬ್ರಿಟಿ ದಂಪತಿ ನಾಗ ಚೈತನ್ಯ, ಸಮಂತಾ ಕಳೆದ ವರ್ಷ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಈಗ ಇಬ್ಬರು ತಮ್ಮ ಸಿನಿಮಾ ಕೆಲಗಳಲ್ಲಿ ತೊಡಗಿಕೊಂಡಿದ್ದಾರೆ. ಇದನ್ನೂ ಓದಿ: ಐತಿಹಾಸಿಕ ಕೌತುಕಕ್ಕೆ ಸಾಕ್ಷಿಯಾದ ಗವಿ ಗಂಗಾಧರೇಶ್ವರ ದೇಗುಲ – ಶಿವಲಿಂಗಕ್ಕೆ ಸೂರ್ಯ ರಶ್ಮಿ ಸ್ಪರ್ಶ