ಸಮಂತಾ, ರಾಜ್ ನಿಧಿಮೋರು ಪ್ರೇಮ್ ಕಹಾನಿ ಈಗ ಕದ್ದುಮುಚ್ಚಿ ನಡೆಯುತ್ತಿಲ್ಲ. ರಟ್ಟಾದ್ಮೇಲೆ ಗುಟ್ಟಾಗಿಡುವ ಪ್ರಯತ್ನ ವ್ಯರ್ಥ ಎಂಬ ತೀರ್ಮಾನಕ್ಕೆ ಸಮಂತಾ ಬಂದಂತಿದೆ. ಹೀಗಾಗಿ ಸ್ಯಾಮ್ (Samantha Ruth Prabhu) ಹಾಗೂ ರಾಜ್ ಸೋಶಿಯಲ್ ಮೀಡಿಯಾದಲ್ಲೇ ಫೋಟೋಗಳನ್ನ ಹಂಚಿಕೊಳ್ಳುತ್ತಿದ್ದಾರೆ. ಇದೀಗ ವಿಷಯ ಅಂದ್ರೆ ರಾಜ್ ಹಾಗೂ ಸಮಂತಾ ಒಟ್ಟಿಗೆ ಜೋಡಿಯಾಗಿ ಏರ್‌ಪೋರ್ಟ್‌ನಲ್ಲಿ ಕಾಣಿಸ್ಕೊಂಡಿದ್ದಾರೆ. ಒಟ್ಟಿಗೆ ಪ್ರಯಾಣ ಬೆಳೆಸುವ ವೇಳೆ ಏರ್‌ಪೋರ್ಟ್‌ನಲ್ಲಿ ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ.

ಸ್ಯಾಮ್ ನಟನೆಯ ಫ್ಯಾಮಿಲಿ ಮ್ಯಾನ್ ವೆಬ್ ಸಿರೀಸ್ ಹಾಗೂ ಸಿಟಾಡೆಲ್ ನಿರ್ದೇಶಕ ರಾಜ್ ನಿಧಿಮೋರು (Raj Nidimoru) ಜೊತೆ ಸಮಂತಾ ಬಾಡಿಂಗ್ ಗಟ್ಟಿಯಾದಂತೆ ಅವರ ನಡವಳಿಕೆ ನೋಡಿದವರಿಗೆ ಭಾಸವಾಗುತ್ತಿದೆ. ಇನ್ನು ಮುಂದೆ ಕಣ್ಣಾಮುಚ್ಚಾಲೆ ಸಾಕು ಎಂಬಂತೆ ಸಮಂತಾ ಕಳೆದ ದೀಪಾವಳಿ ಹಬ್ಬವನ್ನ ರಾಜ್ ಮನೆಯಲ್ಲೇ ಸೆಲೆಬ್ರೇಟ್ ಮಾಡಿದ್ದರು. ಇದೀಗ ರಾಜ್ ಜೊತೆ ಬಹಿರಂಗವಾಗಿ ಕಾಣಿಸಿಕೊಳ್ಳಲು ಆರಂಭಿಸಿದ್ದಾರೆ.ಇದನ್ನೂ ಓದಿ: `ನಂದ ಗೋಕುಲ’ ಧಾರಾವಾಹಿಯಲ್ಲಿ ಸಖತ್ ತಿರುವು
ಕಳೆದ ಒಂದು ವರ್ಷದಿಂದ ಸ್ಯಾಮ್, ರಾಜ್ ನಡುವಿನ ಪ್ರೀತಿಯ ವಿಚಾರ ಕೇಳಿಬರುತ್ತಿತ್ತು. ಈಗೀಗ ರಾಜ್ ಜೊತೆ ಬಹಿರಂಗವಾಗಿ ಕಾಣಿಸ್ಕೊಂಡು ಗಾಸಿಪ್ ಬಿಸಿಗೆ ತಣ್ಣೀರು ಹಾಕುತ್ತಿದ್ದಾರೆ. ಅಷ್ಟಕ್ಕೂ ಈ ಜೋಡಿ ಪ್ರೀತಿಯ ವಿಚಾರವನ್ನ ಇದುವರೆಗೂ ಮಾಧ್ಯಮದ ಮುಂದೆ ಬಿಟ್ಟುಕೊಟ್ಟಿಲ್ಲ. ಆದರೆ ಮದುವೆ ವಿಚಾರವನ್ನ ಸ್ಯಾಮ್ ಅಭಿಮಾನಿಗಳು ನಿರೀಕ್ಷೆ ಮಾಡುತ್ತಿದ್ದಾರೆ. ಕಾಲವೇ ಎಲ್ಲದಕ್ಕೂ ಉತ್ತರ ಕೊಡಬೇಕು.

