ಸೌತ್ ಬ್ಯೂಟಿ ಸಮಂತಾ ಮತ್ತೆ ಸುದ್ದಿಯಲ್ಲಿದ್ದಾರೆ. ಮಯೋಸಿಟಿಸ್ ಕಾಯಿಲೆಯಿಂದ ನಟಿ ಬಳಲುತ್ತಿದ್ದಾರೆ. ಇದರ ನಡುವೆಯೂ ಕೂಡ ʻಯಶೋದಾʼ ಚಿತ್ರದ ಪ್ರಮೋಷನ್ ಕಾರ್ಯಕ್ಕೆ ಸಮಂತಾ ನೀಡುತ್ತಿದ್ದಾರೆ.
`ಪುಷ್ಪ’ ಬ್ಯೂಟಿ ಸಮಂತಾ ನಟನೆಯ `ಯಶೋದಾ’ ಚಿತ್ರ ರಿಲೀಸ್ಗೆ ರೆಡಿಯಾಗಿದ್ದು, ಅನಾರೋಗ್ಯದ ನಡುವೆಯೂ ಪ್ರಚಾರ ಕಾರ್ಯಕ್ಕೆ ಸಮಂತಾ ಭಾಗವಹಿಸುತ್ತಿದ್ದಾರೆ. ಇದೀಗ ಪ್ರಚಾರ ಕಾರ್ಯಕ್ಕೆ ಸಜ್ಜಾಗಿರುವ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಇಂಡೋನೇಷ್ಯಾದಲ್ಲೂ ಕನ್ನಡದ `ಕಾಂತಾರ’ ಹೌಸ್ಫುಲ್ ಪ್ರದರ್ಶನ
ಚಿತ್ರದ ಪೋಸ್ಟರ್ ಲುಕ್, ಟೀಸರ್ ಮೂಲಕ ಸಮಂತಾ ಚಿತ್ರದ ಅಭಿಮಾನಿಗಳು ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟಿದ್ದಾರೆ. ಇದೇ ನವೆಂಬರ್ 11ಕ್ಕೆ ಯಶೋದಾ ಸಿನಿಮಾ ತೆರೆಗೆ ಅಬ್ಬರಿಸುತ್ತಿದೆ. ಹಾಗಾಗಿ ಮತ್ತೆ ಸಮಂತಾ ಕೆಲಸಕ್ಕೆ ಮರಳಿದ್ದಾರೆ. ಸಿನಿಮಾ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ.
View this post on Instagram
ʻಪುಷ್ಪʼ ಚಿತ್ರದ ಹಾಡಿನ ಸಕ್ಸಸ್ ನಂತರ ಯಶೋದಾ ಆಗಿ ತೆರೆಗೆ ಅಬ್ಬರಿಸಲಿರುವ ಸಮಂತಾ, ಚಿತ್ರಮಂದಿರದಲ್ಲಿ ಅದೆಷ್ಟರ ಮಟ್ಟಿಗೆ ಮೋಡಿ ಮಾಡುತ್ತಾರೆ ಎಂಬುದನ್ನ ಕಾದುನೋಡಬೇಕಿದೆ.