ಅನುಷ್ಕಾ ಶೆಟ್ಟಿ ನಟನೆಯ ಚಿತ್ರವನ್ನು ಹಾಡಿ ಹೊಗಳಿದ ಸಮಂತಾ

Public TV
2 Min Read
samantha

ಳೆದ ಐದು ದಿನಗಳ ಹಿಂದೆಯಷ್ಟೇ ಅನುಷ್ಕಾ ಶೆಟ್ಟಿ ನಟನೆಯ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ’ ಚಿತ್ರ ರಿಲೀಸ್ ಆಗಿದೆ. ಈ ಸಿನಿಮಾವನ್ನು ನೋಡಿರುವ ನಟಿ ಸಮಂತಾ (Samantha), ಚಿತ್ರದ ಬಗ್ಗೆ ಹಾಡಿ ಹೊಗಳಿದ್ದಾರೆ. ಇಂತಹ ಸಿನಿಮಾ ನೋಡಿ ಮತ್ತು ಅಷ್ಟೊಂದು ನಕ್ಕು ತುಂಬಾ ದಿನಗಳು ಆಗಿದ್ದವು. ಇದೊಂದು ಉತ್ತಮ ಮನರಂಜನೆ ಸಿನಿಮಾ ಎಂದು ಪ್ರತಿಕ್ರಿಯಿಸಿದ್ದಾರೆ. ಅನುಷ್ಕಾ ನಟನೆಯ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

anushka shetty 1

ಕರಾವಳಿ ಬ್ಯೂಟಿ ಅನುಷ್ಕಾ ಶೆಟ್ಟಿ 3 ವರ್ಷಗಳ ನಂತರ ಈ ಸಿನಿಮಾದ ಮೂಲಕ ಕಮ್‌ಬ್ಯಾಕ್ ಆಗಿದ್ದಾರೆ. ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ’ (Miss Shetty Mr Poli Shetty) ಸಿನಿಮಾ ಮೂಲಕ ಸ್ವೀಟಿ ಸದ್ದು ಮಾಡ್ತಿದ್ದಾರೆ. ಈ ಹಿಂದೆ ಟೀಸರ್ ಝಲಕ್‌ನಿಂದ ಅನುಷ್ಕಾ ಶೆಟ್ಟಿ (Anushka Shetty) ಹೈಪ್ ಕ್ರಿಯೇಟ್ ಮಾಡಿದ್ದರು. ಇದನ್ನೂ ಓದಿ:ಉಪೇಂದ್ರ ಮನೆಮುಂದೆ ಜಮಾಯಿಸಿದ ಅಭಿಮಾನಿಗಳು: ಉಪ್ಪಿ ಕೊಟ್ಟ ಭರವಸೆ ಏನು?

anushka shetty 1 1

ಬಾಹುಬಲಿ 2 (Bahubali 2), ನಿಶಬ್ಧಂ ಚಿತ್ರದ ನಂತರ ಸ್ವೀಟಿ, ಅನ್ವಿತಾ ರಾವಲಿ ಶೆಟ್ಟಿಯಾಗಿ ಬಂದಿದ್ದಾರೆ. ಹೋಟೆಲ್‌ವೊಂದರ ಶೆಫ್ ಆಗಿ ಅನುಷ್ಕಾ ನಟಿಸಿದ್ದಾರೆ. ಅನ್ವಿತಾ ರಾವಲಿ ಶೆಟ್ಟಿಗೆ ಮದುವೆ ಅಂದ್ರೆ ಇಷ್ಟ ಇರಲ್ಲ, ಆ ವಿಷಯದಲ್ಲಿ ಫ್ಯಾಮಿಲಿ ಸಪೋರ್ಟ್ ಕೂಡ ಇರುತ್ತದೆ. ಮತ್ತೊಂದು ಕಡೆ ಪೋಷಕರಿಗೆ ಇಷ್ಟವಿಲ್ಲದಿದ್ದರೂ ಸ್ಟ್ಯಾಂಡಪ್ ಕಾಮೆಡಿಯನ್ ಆಗಬೇಕು ಎನ್ನುವ ಕನಸು ಕಾಣುವ ಯುವಕ ನವೀನ್ ಪೋಲಿ ಶೆಟ್ಟಿ. ಆಕಸ್ಮಿಕವಾಗಿ ಇವರಿಬ್ಬರ ನಡುವೆ ಪರಿಚಯ ಆಗಿ ಅದು ಸ್ನೇಹಕ್ಕೆ ತಿರುಗುತ್ತದೆ. ಮುಂದೆ ಆ ಸ್ನೇಹ ಎಲ್ಲಿಗೆ ಹೋಗಿ ತಲುಪುತ್ತದೆ ಅನ್ನೋದೇ ಸಿನಿಮಾ. ಇಬ್ಬರ ನಡುವಿನ ದೃಶ್ಯಗಳು ತುಂಬಾ ಫ್ರೆಶ್ ಆಗಿ ಮೋಡಿ ಬಂದಿವೆ. ವಿಶೇಷವಾಗಿ ರಾವಲಿ ಶೆಟ್ಟಿ, ಪೋಲಿ ಶೆಟ್ಟಿನ ಸಂದರ್ಶನ ಮಾಡುವ ಸನ್ನಿವೇಶ ಮಜವಾಗಿದೆ.

anushka shetty

ನವೀನ್‌ನ ನಿನ್ನ ಸ್ಟ್ರೆಂತ್ ಏನು ಎಂದು ಆಕೆ ಕೇಳಿದಾಗ ಅವಕಾಶ ಸಿಕ್ಕಾಗಲೆಲ್ಲಾ ಕಾಮಿಡಿ ಮಾಡ್ತೀನಿ ಅಂತಾನೆ. ವೀಕ್‌ನೆಸ್ ಏನು ಅಂದ್ರೆ ಸಿಚ್ಯುವೇಷನ್‌ಗೆ ಸಂಬಂಧ ಇಲ್ಲದೇ ಕಾಮಿಡಿ ಮಾಡ್ತಿರ್ತೀನಿ ಅಂತಾ ಉತ್ತರ ಕೊಡುತ್ತಾನೆ. ಇನ್ನು ಕೊನೆಗೆ ನಿನ್ನ ಟೈಮಿಂಗ್ ಯಾವಾಗಲೂ ಹೀಗೇನಾ? ಎನ್ನುವ ಪ್ರಶ್ನೆಗೆ ಕಾಮಿಡಿ ಟೈಮಿಂಗ್ ಮಾತ್ರ ಪರ್ಫೆಕ್ಟ್ ಆಗಿ ಇರುತ್ತೆ ಎನ್ನುತ್ತಾನೆ. ಇಡೀ ಸಿನಿಮಾ ಹೊಸ ಫೀಲ್ ಕೊಡುವಂತಿದೆ. ಯುವಿ ಕ್ರಿಯೇಷನ್ಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಮಹೇಶ್ ಬಾಬು ಪಿ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿದೆ.

 

ಡಿಫರೆಂಟ್ ಲುಕ್, ಫ್ರೆಶ್ ಕಥೆ ಜೊತೆ ಬಂದಿರುವ ಅನುಷ್ಕಾಳನ್ನ ಅಭಿಮಾನಿಗಳು ಸಂಭ್ರಮದಿಂದ ಎದುರುಗೊಂಡಿದ್ದಾರೆ. ನವೀನ್ ಪೋಲಿ ಶೆಟ್ಟಿ- ಅನುಷ್ಕಾ ನಟನೆಯ ಈ ಚಿತ್ರ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಚಿತ್ರ ಮೂಡಿ ಬಂದಿದೆ.

Web Stories

Share This Article