ಮತ್ತೆ ಹಾಟ್ ಅವತಾರದಲ್ಲಿ ಕಾಣಿಸಿಕೊಂಡ ಸಮಂತಾ

Public TV
1 Min Read
samantha 1 1

ಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ರುತ್ ಪ್ರಭು ಸದಾ ಒಂದಲ್ಲಾ ಒಂದು ಸುದ್ದಿಯಿಂದ ಸದ್ದು ಮಾಡುತ್ತಾರೆ. ದಿನದಿಂದ ದಿನಕ್ಕೆ ನೇಮು ಫೇಮು ಜಾಸ್ತಿಯಾಗ್ತಿದಂತೆ, ಹಾಟ್ ಹಾಟ್ ಅವತಾರದಲ್ಲಿ ಸಮಂತಾ ಕಾಣಿಸಿಕೊಳ್ತಿದ್ದಾರೆ. ಈಗ ಡಿಫರೆಂಟ್ ಆಗಿ ಫೋಟೋಶೂಟ್ ಮಾಡಿಸಿ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ. ಈ ಸದ್ಯ ಈ ಫೋಟೋ ಭಾರೀ ವೈರಲ್ ಆಗುತ್ತಿದೆ.

samantha 2 1

`ಪುಷ್ಪ’ ಸಕ್ಸಸ್ ನಂತರ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿರೋ ನಟಿ ಸಮಂತಾ, ಈಗ ಪತ್ರಿಕೆಯೊಂದರ ಫೋಟೋಶೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಎಂದೂ ಕಾಣಿಸಿಕೊಂಡಿರದ ಹಾಟ್ ಅವತಾರದಲ್ಲಿ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಟ್ಟಿದ್ದಾರೆ. ಮೆರುನ್ ಕಲರ್ ಡ್ರೇಸ್‌ನಲ್ಲಿ ಮಿರ ಮಿರ ಅಂತಾ ಮಿಂಚಿದ್ದಾರೆ. ಸದ್ಯ ಸ್ಯಾಮ್ ಫೋಟೋ ನೋಡಿ ಫ್ಯಾನ್ಸ್ ಬೋಲ್ಡ್ ಆಗಿದ್ದಾರೆ. ಇದನ್ನೂ ಓದಿ: ಯಜಮಾನ ಪ್ರೀಮಿಯರ್ ಲೀಗ್ ಶುರು: ಡಾ.ವಿಷ್ಣು ಹೆಸರಿನಲ್ಲಿ ಅಭಿಮಾನಿಗಳ ಅಭಿಮಾನ

samantha 3

ಇನ್ನು ಹಾಲಿವುಡ್ ಮತ್ತು ಬಾಲಿವುಡ್ ಚಿತ್ರಗಳಲ್ಲಿಯೂ ಸಮಂತಾ ನಟಿಸುತ್ತಿದ್ದಾರೆ. ಇತ್ತೀಚೆಗೆ ಸಮಂತಾ ನಟನೆಯ `ಯಶೋದಾ’ ಚಿತ್ರದ ಗ್ಲಿಂಪ್ಸ್‌ನಿಂದ ಗಮನ ಸೆಳೆದಿದ್ರು. ಪ್ಯಾನ್ ಇಂಡಿಯಾ ಚಿತ್ರ `ಯಶೋದ’ ಆಗಸ್ಟ್ 12ಕ್ಕೆ ತೆರೆ ಕಾಣುತ್ತಿದೆ.

Share This Article