ಸೌತ್ ನಟಿ ಸಮಂತಾಗೆ (Samantha) ಬಾಲಿವುಡ್‌ನಿಂದ (Bollywood) ಬಂಪರ್ ಆಫರ್ ಅರಸಿ ಬಂದಿದೆ. ಬ್ಯಾಡ್ ಬಾಯ್ ಸಲ್ಮಾನ್ ಖಾನ್‌ಗೆ ಸಮಂತಾ ನಾಯಕಿಯಾಗಿ ನಟಿಸುವ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ಸ್ಯಾಮ್‌ಗೆ ಸಿಹಿಸುದ್ದಿ ಸಿಕ್ಕಿದೆ.
‘ಖುಷಿ’ (Kushi Film) ಸಕ್ಸಸ್ ಅಲೆಯಲ್ಲಿ ಸಮಂತಾ ತೇಲುತ್ತಿದ್ದಾರೆ. ಈ ಬೆನ್ನಲ್ಲೇ ಸಲ್ಮಾನ್ ಖಾನ್ (Salman Khan) ಜೊತೆ ತೆರೆಹಂಚಿಕೊಳ್ಳುವ ಚಾನ್ಸ್ ಸಿಕ್ಕಿದೆ. ಈ ಚಿತ್ರವನ್ನು ವಿಷ್ಣು ವರ್ಧನ್ ನಿರ್ದೇಶನ ಮಾಡಲಿದ್ದಾರೆ. ಧರ್ಮ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಕರಣ್ ಜೋಹರ್ (Karan Johar) ನಿರ್ಮಾಣ ಮಾಡಲಿದ್ದಾರೆ.
‘ಸಿಟಾಡೆಲ್’ (Citadel) ವೆಬ್‌ಸಿರೀಸ್‌ನಲ್ಲಿ ಸ್ಯಾಮ್ ವರುಣ್ ಧವನ್ ಜೊತೆ ನಟಿಸಿದ್ದಾರೆ. ಆ್ಯಕ್ಷನ್ ಥ್ರಿಲರ್ ಕಥೆಯಲ್ಲಿ ಸಮಂತಾ ನಟಿಸಿದ್ದಾರೆ. ಸದ್ಯದಲ್ಲೇ ಈ ಪ್ರಾಜೆಕ್ಟ್ ರಿಲೀಸ್ ಬಗ್ಗೆ ಅಪ್‌ಡೇಟ್ ಸಿಗಲಿದೆ. ಇದನ್ನೂ ಓದಿ:ಗಂಡು ಮಗುವಿಗೆ ತಂದೆಯಾದ ನಟ ಧ್ರುವ ಸರ್ಜಾ
ಬಣ್ಣದ ಲೋಕದಿಂದ ಈಗಾಗಲೇ ಬ್ರೇಕ್ ತೆಗೆದುಕೊಂಡಿರುವ ಸಮಂತಾ, 2024ರಲ್ಲಿ ಸಲ್ಮಾನ್ ಜೊತೆಗಿನ ಸಿನಿಮಾ ಶುರುವಾಗಲಿದೆ ಎಂದು ಹೇಳಲಾಗುತ್ತಿದೆ. ಕೊಂಚ ಆರೋಗ್ಯದಲ್ಲಿ ಫಿಟ್ & ಫೈನ್ ಆದ ಮೇಲೆ ಸ್ಯಾಮ್ ಕ್ಯಾಮೆರಾ ಮುಂದೆ ಬರಲಿದ್ದಾರೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]