ನಾಗಚೈತನ್ಯ ಅವರಿಂದ ವಿಚ್ಛೇದನ ಪಡೆದ ಬಳಿಕ ಒಂಟಿಯಾಗಿದ್ದ ತೆಲುಗು ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಇದೀಗ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿರ್ದೇಶಕ ರಾಜ್ ನಿಡಿಮೋರು (Raj Nidimoru) ಜೊತೆ ನಟಿ ಸಮಂತಾ ರುತ್ ಪ್ರಭು ಅವರಿಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮೂಲಕ ಹಲವು ದಿನಗಳಿಂದ ಹಬ್ಬಿದ್ದ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಇಶಾ ಫೌಂಡೇಶನ್ (Isha Foundation) ಆವರಣದಲ್ಲಿರುವ ಲಿಂಗಭೈರವಿ ದೇವಿಯ ದೇವಸ್ಥಾನದಲ್ಲಿ (Ling Bhairavi Temple) ಇಂದು ಸರಳ ವಿವಾಹವಾಗಿದ್ದಾರೆ. ಸಮಂತಾ ಕೆಂಪು ಸೀರೆ ಧರಿಸಿ ಮಿಂಚಿದ್ರೆ, ರಾಜ್ ನಿಡಿಮೋರು ವೈಟ್ & ವೈಟ್ ಕುರ್ತಾ ಧರಿಸಿ ಸರಳವಾಗಿ ಕಾಣಿಸಿಕೊಂಡಿದ್ದಾರೆ.
ʻಫ್ಯಾಮಿಲಿ ಮ್ಯಾನ್ʼ, ʻಸಿಟಾಡೆಲ್ ಹನಿಬನಿʼ ನಿರ್ದೇಶಕನ ಜೊತೆ ಸಮಂತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೆಲವು ತಿಂಗಳಿಂದ ಬಹಿರಂಗವಾಗೇ ಈ ಜೋಡಿ ಕಾಣಿಸ್ಕೊಳ್ತಾ ಬಂದಿತ್ತು. ಇದೀಗ ಗುಟ್ಟಾಗಿ ಕಲ್ಯಾಣವಾಗಿರುವ ವಿಚಾರವನ್ನ ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತ ಘೋಷಣೆ ಮಾಡಿದ್ದಾರೆ. ಮದುವೆಯ ಫೋಟೋಗಳನ್ನ ಸಮಂತಾ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ರಾಜ್ ನಿಡಿಮೋರು ಈಗಾಗ್ಲೇ ವಿವಾಹವಾಗಿದ್ದು ಸಮಂತಾ ಜೊತೆ ಅವರಿಗೆ 2ನೇ ವಿವಾಹ.
ಇನ್ನು ಸಮಂತಾ ಖ್ಯಾತ ನಟ ನಾಗಚೈತನ್ಯ ಜೊತೆಗಿನ ಮದುವೆಯಿಂದ ವಿಚ್ಛೇದನ ಪಡೆದುಕೊಂಡಿದ್ದರು. ಇದೀಗ ವೆಬ್‌ಸಿರೀಸ್‌ಗಳ ಮೂಲಕ ಪರಿಚಯವಾದ ಬಹುಕಾಲದ ಒಡನಾಡಿ ರಾಜ್ ಜೊತೆ ಸ್ಯಾಮ್ ಪ್ರೀತಿಯಲ್ಲಿ ಬಿದ್ದಿದ್ದು ಸದ್ದಿಲ್ಲದೇ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.
ಲಿಂಗಭೈರವಿ ದೇವಿಯ ಆರಾಧಕಿ ಆಗಿರುವ ಸಮಂತಾ ಮನೆಯಲ್ಲಿ ನಿತ್ಯವೂ ಪೂಜೆ ಮಾಡೋದಾಗಿ ಹೇಳಿಕೊಂಡಿದ್ರು. ದೇವಿ ಮುಂದೆ ಧ್ಯಾನ ಮಾಡುವ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ಅದೇ ದೇವಿಯ ಮುಂದೆ ರಾಜ್ ಸಮಂತಾ ಅಧಿಕೃತ ದಾಂಪತ್ಯಕ್ಕೆ ಹೆಜ್ಜೆ ಇಟ್ಟಿದ್ದಾರೆ. ಸರಳ ವಿವಾಹ ಸುಂದರ ಫೋಟೋಗಳನ್ನ ಸಮಂತಾ ರಿಲೀಸ್ ಮಾಡಿದ್ದಾರೆ. ಲಿಂಗಭೈರವಿ ದೇವಿ ಮುಂದೆ ಇಂದು ಬೆಳ್ಳಂಬೆಳಗ್ಗೆ ಹಿಂದೂ ಸಂಪ್ರದಾಯದ ಪ್ರಕಾರ ಸಮಂತಾ ರಾಜ್ ಶಾಸ್ತೋಕ್ತ ಕಲ್ಯಾಣ ನಡೆದಿದೆ.





