ಬಾಲಿವುಡ್ ನ ಖ್ಯಾತ ನಟ ವರುಣ್ ದವನ್ ಜತೆ ಇದೇ ಮೊದಲ ಬಾರಿಗೆ ಸಮಂತಾ ಕಾಣಿಸಿಕೊಳ್ಳುವುದರ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ದಿನವೂ ನೆಟ್ಟಿಗರ ಪ್ರಶ್ನೆಗೆ ಬೇಸತ್ತು ಹೋಗಿರುವ ಈ ಚೆಲುವೆ, ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಒಂದರ ಮೇಲೊಂದು ಪ್ರಾಜೆಕ್ಟ್ ಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಹಲವು ದಿವಸಗಳ ಹಿಂದೆ ಸಮಂತಾ ಮತ್ತೆ ‘ದಿ ಫ್ಯಾಮಿಲಿ ಮ್ಯಾನ್’ ನಿರ್ದೇಶಕರ ಜತೆ ಕೆಲಸ ಮಾಡಲಿದ್ದಾರೆ ಎಂದು ಸುದ್ದಿ ಆಗಿತ್ತು. ಅದು ಈಗ ನಿಜವೂ ಆಗಿದೆ. ಅತೀ ಶೀಘ್ರದಲ್ಲೇ ‘ದಿ ಫ್ಯಾಮಿಲಿ ಮ್ಯಾನ್’ ನಿರ್ದೇಶಕರಾದ ರಾಜ್ ಮತ್ತು ಡಿಕೆ ಅವರ ಹೊಸ ವೆಬ್ ಸರಣಿಯ ಚಿತ್ರೀಕರಣದಲ್ಲೂ ಸಮಂತಾ ಭಾಗಿಯಾಗಲಿದ್ದಾರೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ನಿಂದ ಜೇಮ್ಸ್ ಚಿತ್ರಕ್ಕೆ ತೊಂದರೆ ಇಲ್ಲ : ಶಿವರಾಜ್ ಕುಮಾರ್
Advertisement
ಈ ವೆಬ್ ಸರಣಿಗೆ ಹೀರೋ ಆಗಿ ವರುಣ್ ದವನ್ ಆಯ್ಕೆಯಾಗಿದ್ದರೆ, ಸಮಂತಾ ಅವರದ್ದು ಪ್ರಮುಖ ಪಾತ್ರ. ಈ ವೆಬ್ ಸರಣಿಗೆ ‘ಸಿಟಾಡೆಲ್’ ಎಂದು ಹೆಸರಿಡಲಾಗಿದೆ. ಇದೇ ಮೊದಲ ಬಾರಿಗೆ ವರುಣ್ ದವನ್ ಮತ್ತು ಸಮಂತಾ ತೆರೆ ಹಂಚಿಕೊಳ್ಳುತ್ತಿರುವುದು ವಿಶೇಷ. ಹಾಗಾಗಿಯೇ ಮೊನ್ನೆಯಷ್ಟೇ ಮುಂಬೈನಲ್ಲಿ ಸಮಂತಾ ಮತ್ತು ವರುಣ್ ಕೂಡ ಭೇಟಿಯಾಗಿದ್ದಾರೆ. ಸ್ವತಃ ಸಮಂತಾ ಅವರನ್ನು ವರುಣ್ ಕಾರಿನವರೆಗೂ ಬಿಟ್ಟು ಬಂದು ಒಲವು ತೋರಿದ್ದಾರೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ಲಾಭವನ್ನು ದಾನಮಾಡಿ ಎಂದ ಐಎಎಸ್ ಆಫೀಸರ್: ನಿರ್ದೇಶಕರ ಉತ್ತರವೇನು?
Advertisement
Advertisement
ಈ ವೆಬ್ ಸರಣಿಯ ಚಿತ್ರೀಕರಣ ಮುಂದಿನ ತಿಂಗಳಿಂದ ಶುರುವಾಗಲಿದ್ದು, ಮೊದಲು ಮುಂಬೈನಲ್ಲಿಯೇ ಶೂಟ್ ಮಾಡಲಿದೆಯಂತೆ ಚಿತ್ರತಂಡ. ಆನಂತರ ಯುರೋಪ್ ಭಾಗಗಳಲ್ಲಿ ಚಿತ್ರೀಕರಣ ಮಾಡುವ ಪ್ಲ್ಯಾನ್ ಕೂಡ ಹಾಕಿಕೊಂಡಿದೆ. ಇದನ್ನೂ ಓದಿ : ಬಸವರಾಜ ಬೊಮ್ಮಾಯಿಯನ್ನು ಶಿವರಾಜ್ ಕುಮಾರ್ ಭೇಟಿ ಮಾಡಿದ್ದೇಕೆ?
Advertisement
ಇದೊಂದು ಸಾಹಸಮಯ ವೆಬ್ ಸೀರಿಸ್ ಆಗಿದ್ದು, ದವನ್ ಅವರಿಗೆ ಹೇರಳಾಗಿ ಸಾಹಸ ದೃಶ್ಯಗಳು ಇವೆಯಂತೆ. ಹಾಗಾಗಿಯೇ ಅವರು ಮಾರ್ಷಲ್ ಆರ್ಟ್ ಕೂಡ ಕಲಿಯುತ್ತಿದ್ದಾರಂತೆ.