‘ಸಿಟಾಡೆಲ್’ ಕುರಿತು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ ಸಮಂತಾ

Public TV
1 Min Read
samantha

ಮಂತಾ (Samantha) ಮತ್ತೆ ಮೈ ಕೊಡವಿ ಎದ್ದು ನಿಂತಿದ್ದಾರೆ. ಮೈಯೋಸಿಟಿಸ್ ಖಾಯಿಲೆಯನ್ನು ಪಕ್ಕಕ್ಕೆ ಇಟ್ಟು ಹೊಸ ಸಾಹಸದ ಮೊದಲ ಝಲಕ್ ತೋರಿಸಿದ್ದಾರೆ. ಇನ್ನೇನು ಸ್ಯಾಮ್ ಬಣ್ಣದ ಲೋಕದ ಬದುಕು ಮುಗಿಯಿತು. ಹೀಗಂತ ಅಂದುಕೊಂಡವರಿಗೆ ಭರ್ಜರಿ ಕಾಣಿಕೆ ಕೊಡಲು ಸಜ್ಜಾಗಿದ್ದಾರೆ. ಹಾಗಿದ್ದರೆ ಸಮಂತಾ ಇನ್ಯಾವ ರೀತಿ ನಮ್ಮ ಮನೆ ಮನಕ್ಕೆ ಲಗ್ಗೆ ಹಾಕಲಿದ್ದಾರೆ ? ಅವರು ಹಂಚಿಕೊಂಡ ದಿವ್ಯ ಕನಸಾದರೂ ಏನು? ಅದರ ಮಾಹಿತಿ ಇಲ್ಲಿದೆ.

samantha 1

ಸಮಂತಾಗೆ ಎರಡು ವರ್ಷ ಅಷ್ಟೇನೂ ಸುಖದಾಯಕವಾಗಿರಲಿಲ್ಲ. ಮೊದಲ ಕಾರಣ ಎಲ್ಲರಿಗೂ ಗೊತ್ತು. ಅದು ವರ್ಷದಿಂದ ಕಾಡುತ್ತಿರುವ ಮೈಯೋಸೀಟಿಸ್. ಅದರಿಂದ ಹೊರ ಬರಲು ಎಲ್ಲೆಲ್ಲಿಗೋ ಹೋಗಿ ಚಿಕಿತ್ಸೆ ಪಡೆದು ಬಂದರು. ಅದಕ್ಕಾಗಿ ಸಿನಿಮಾ ರಂಗದಿಂದ ತಾತ್ಕಾಲಿಕವಾಗಿ ದೂರವಾದರು. ಆದರೆ ಭಕ್ತಗಣದ ಜೊತೆ ಸಂಪರ್ಕದಲ್ಲಿದ್ದರು.

samantha

ಈಗ ಹೊಸದೊಂದು ಯುದ್ಧ ಮುಗಿಸಿ ಬಂದಿದ್ದಾರೆ. ಸದ್ಯದಲ್ಲೇ ಇವರ ವೆಬ್‌ಸೀರೀಸ್ ಸಿಟಾಡೆಲ್ ಓಟಿಟಿಯಲ್ಲಿ ಪ್ರಸಾರವಾಗಲು ಸಜ್ಜಾಗಿದೆ. ಒಂದು ಗೆಲುವಿಗೆ ಸ್ಯಾಮ್ ಕಾದಿದ್ದಾರೆ. ಕಾರಣ ಈ ಹಿಂದಿನ ಎರಡು ಮೂರು ಸಿನಿಮಾ ಕೈ ಹಿಡಿಯಲಿಲ್ಲ. ಇದಾದಾದರೂ ಗೆದ್ದು ಬೀಗುತ್ತದಾ? ಎಂದು ಕಾತುರದಿಂದ ಕಾಯುತ್ತಿದ್ದಾರೆ.

samantha 6

ಈಗಾಗಲೇ ಸಿಟಾಡೆಲ್ (Citadel) ಸೀರೀಸ್ ಮುಗಿದಿದೆ. ಡಬ್ಬಿಂಗ್ ನಡೆಯುತ್ತಿದೆ. ಬಾಲಿವುಡ್ ಹೀರೋ ವರುಣ್ ಧವನ್ (Varun Dhawan) ಜೊತೆ ಕೈ ಜೋಡಿಸಿದ್ದಾರೆ. ಫ್ಯಾಮಿಲಿಮ್ಯಾನ್ ಸರಣಿ ನಿರ್ದೇಶಿಸಿದ್ದ ಡಿಕೆ ಇದರ ಸಾರಥಿ. ಹಾಲಿವುಡ್ ಸರಣಿಯ ಹಿಂದಿ ರಿಮೇಕ್ ಇದು. `ಈಗಾಗಲೇ ಸರಣಿಯ ಕೆಲವು ದೃಶ್ಯ ನೋಡಿದ್ದೇನೆ. ಅದ್ಭುತವಾಗಿದೆ. 22 ತಿಂಗಳ ಕಷ್ಟ ಕಾಣುತ್ತಿದೆ. ಜನರು ಗೆಲ್ಲಿಸುತ್ತಾರೆ ಎನ್ನುವ ವಿಶ್ವಾಸವೂ ಇದೆ…’ ಹೀಗಂತ ಬರೆದುಕೊಂಡಿದ್ದಾರೆ ಸಮಂತಾ.

ಇನ್ನೇನು ಓಟಿಟಿಯನ್ನು ಇದು ಮೆರವಣಿಗೆ ಹೊರಡಲಿದೆ. ಇದಾದರೂ ಸ್ಯಾಮ್‌ಗೆ ಗೆಲುವಿನ ರುಚಿ ತೋರಿಸುತ್ತದಾ ಅಥವಾ ಆಕಾಶಕ್ಕೆ ಮುಖ ಮಾಡಿಸುತ್ತದಾ ? ಕಾದು ನೋಡಬೇಕಷ್ಟೇ.

Share This Article