IFFM ಪ್ರಶಸ್ತಿ: ಸಮಂತಾ, ವಿಜಯ್, ನಯನತಾರಾ, ವಿಘ್ನೇಶ್‌ ಸೆಲಬ್ರೇಷನ್

Public TV
1 Min Read
samantha 1

ಹೈದರಾಬಾದ್: ಫ್ಯಾಮಿಲಿ ಮ್ಯಾನ್-2 ಚಿತ್ರದಲ್ಲಿ ಅಭಿನಯಿಸಿದ್ದ ಟಾಲಿವುಡ್ ನಟಿ ಸಮಂತಾ ಅಕ್ಕೆನೇನಿ ಐಎಫ್‍ಎಫ್‍ಎಂ (ಇಂಡಿಯನ್ ಫಿಲ್ಮ್ ಫೇಸ್ಟಿವಲ್ ಆಫ್ ಮೆಲ್ಬೋರ್ನ್)ನ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ಈ ಸಕ್ಸಸ್ ಖುಷಿಯನ್ನು ಕಾಲಿವುಡ್ ನಟ ವಿಜಯ್ ಸೇತುಪತಿ, ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಸೇರಿದಂತೆ ಕಾತು ವಕುಳ ರೆಂಡು ಕಾದಲ್ ಚಿತ್ರತಂಡ ಸೆಟ್‍ನಲ್ಲಿ ಕೇಕ್ ಕತ್ತರಿಸಿ ಸಮಂತಾ ಅಕ್ಕೆನೇನಿ ಜೊತೆ ಸೆಲಬ್ರೆಟ್ ಮಾಡಿದ್ದಾರೆ.

FotoJet 30 medium

ಸದ್ಯ ಈ ಸೆಲಿಬ್ರೆಶನ್‍ನ ಕೆಲವೊಂದು ಫೋಟೋವನ್ನು ಸಮಂತಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಫೋಟೋದಲ್ಲಿ ನಯನತಾರಾ, ವಿಜಯ್ ಸೇತುಪತಿ ಮತ್ತು ವಿಘ್ನೇಶ್ ಶಿವನ್ ಚೆನ್ನೈನ ಕಾತು ವಾಕುಲಾ ರೆಂಡು ಕಾದಲ್ ಸೆಟ್‍ನಲ್ಲಿ ಕೇಕ್ ಕತ್ತರಿಸಿ ಸಂಭ್ರಮಾಚರಿಸುತ್ತಿರುವುದನ್ನು ಕಾಣಬಹುದಾಗಿದೆ.

samantha 2

ಈ ವಾರದ ಆರಂಭದಲ್ಲಿ ಸಮಂತಾ ಅಕ್ಕಿನೇನಿ ಹೈದರಾಬಾದ್‍ನಿಂದ ಚೆನ್ನೈಗೆ ಹಾರಿದ್ದು, ಕಾತು ವಾಕುಲಾ ರೆಂಡ್ ಕಾದಲ್ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಕೊರೊನಾ ಎರಡನೇ ಅಲೆ ಆರಂಭವಾಗುವುದಕ್ಕೂ ಮುನ್ನ ಚಿತ್ರತಂಡವು ಚೆನ್ನೈನಲ್ಲಿ ಚಿತ್ರೀಕರಣವನ್ನು ಆರಂಭಿಸಿತ್ತು. ಇನ್ನೂ ಈ ಚಿತ್ರಕ್ಕೆ ನಿರ್ದೇಶಕ ವಿಘ್ನೇಶ್ ಶಿವನ್ ಆ್ಯಕ್ಷನ್ ಕಟ್ ಹೇಳಿದ್ದು, ರೌಡಿ ಪಿಕ್ಚರ್ಸ್ ಬ್ಯಾನರ್ ನ ಅಡಿಯಲ್ಲಿ ಸಹ-ನಿರ್ಮಾಣವಾಗಿದೆ. ಸಂಗೀತಾ ನಿರ್ದೇಶಕ ಅನಿರುದ್ಧ್ ರವಿಚಂದರ್ ಚಿತ್ರಕ್ಕೆ ಮ್ಯೂಸಿಕ್ ನೀಡಿದ್ದು, ವಿಜಯ್ ಕಾರ್ತಿಕ್ ಕಣ್ಣನ್ ಛಾಯಾಗ್ರಹಣ ಇರಲಿದೆ ಮತ್ತು ಎ.ಶ್ರೀಕರ್ ಪ್ರಸಾದ್ ಸಂಕಲನಕಾರರಾಗಿದ್ದಾರೆ. ಇದನ್ನೂ ಓದಿ: ಕಿಚ್ಚನ ಹೊಸ ಹೇರ್ ಸ್ಟೈಲ್‍ಗೆ ಫ್ಯಾನ್ಸ್ ಫಿದಾ

 

View this post on Instagram

 

A post shared by S (@samantharuthprabhuoffl)

ಫ್ಯಾಮಿಲಿ ಮ್ಯಾನ್-2 ವೆಬ್ ಸಿರಿಸ್‍ನಲ್ಲಿ ಸಮಂತಾ ರಾಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ವೆಬ್ ಸಿರಿಸ್‍ನ ಪ್ರಮುಖ ಪಾತ್ರದಲ್ಲಿ ಮನೋಜ್ ಬಾಜಪೇಯಿ. ಸಮಂತಾ ಅಕ್ಕಿನೇನಿ ಮತ್ತು ಪ್ರಿಯಾಮಣಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಇದನ್ನೂ ಓದಿ: ಕಾಂತ್ರಿಕಾರಿ ಅಂದ್ರೆ ಗುಂಡು ಹೊಡೆಯುವುದು ಅಲ್ಲ – ಚೇತನ್‍ಗೆ ಹೆಚ್‍ಡಿಕೆ ತಿರುಗೇಟು

 

Share This Article
Leave a Comment

Leave a Reply

Your email address will not be published. Required fields are marked *