ಟಾಲಿವುಡ್ ನಟಿ ಸಮಂತಾ (Samantha) ಮತ್ತೆ ಮೈ ಕೊಡವಿ ಎದ್ದು ನಿಂತಿದ್ದಾರೆ. ಮೈಯೋಸಿಟಿಸ್ ಖಾಯಿಲೆಯನ್ನು ಪಕ್ಕಕ್ಕೆ ಇಟ್ಟು, ಹೊಸ ಸಾಹಸದ ಮೊದಲ ಝಲಕ್ ತೋರಿಸಿದ್ದಾರೆ. ಇನ್ನೇನು ಸಮಂತಾ ಬಣ್ಣದ ಲೋಕದ ಬದುಕು ಮುಗಿಯಿತು. ಎಂದು ಅಂದುಕೊಂಡವರಿಗೆ ಭರ್ಜರಿ ಕಾಣಿಕೆ ಕೊಡಲು ನಟಿ ಸಜ್ಜಾಗಿದ್ದಾರೆ. ಇದನ್ನೂ ಓದಿ:‘ಬಿಗ್ ಬಾಸ್’ ಶೋ ಮುಗಿದ ಬಳಿಕ ಮತ್ತೆ ಜೊತೆಯಾಗಿ ಕಾಣಿಸಿಕೊಂಡ ಸ್ಪರ್ಧಿಗಳು
ಸಮಂತಾ ಕಳೆದ ಈ ಎರಡು ವರ್ಷ. ಅಷ್ಟೇನೂ ಸುಖದಾಯಕವಾಗಿರಲಿಲ್ಲ. ಮೊದಲ ಕಾರಣ ಎಲ್ಲರಿಗೂ ಗೊತ್ತು. ಅದು ವರ್ಷದಿಂದ ಕಾಡುತ್ತಿರುವ ಮೈಯೋಸೀಟಿಸ್. ಅದರಿಂದ ಹೊರ ಬರಲು ಎಲ್ಲೆಲ್ಲಿಗೋ ಹೋಗಿ ಚಿಕಿತ್ಸೆ ಪಡೆದು ಬಂದರು. ಅದಕ್ಕಾಗಿ ಸಿನಿಮಾ ರಂಗದಿಂದ ತಾತ್ಕಾಲಿಕವಾಗಿ ದೂರವಾದರು. ಆದರೆ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದರು. ಈಗ ಹೊಸದೊಂದು ಯುದ್ಧ ಮುಗಿಸಿ ಬಂದಿದ್ದಾರೆ. ಸದ್ಯದಲ್ಲೇ ಇವರ ವೆಬ್‌ಸೀರೀಸ್ ‘ಸಿಟಾಡೆಲ್’ ಓಟಿಟಿಯಲ್ಲಿ ಪ್ರಸಾರವಾಗಲು ಸಜ್ಜಾಗಿದೆ. ಒಂದು ಗೆಲುವಿಗೆ ಸ್ಯಾಮ್ ಕಾದಿದ್ದಾರೆ. ಕಾರಣ ಈ ಹಿಂದಿನ ಎರಡ್ಮೂರು ಸಿನಿಮಾ ಕೈ ಹಿಡಿಯಲಿಲ್ಲ. ಇದಾದಾದರೂ ಗೆಲ್ಲುತ್ತಾ?
View this post on Instagram
ಈಗಾಗಲೇ ‘ಸಿಟಾಡೆಲ್’ ಸೀರೀಸ್ ಮುಗಿದಿದೆ. ಡಬ್ಬಿಂಗ್ ನಡೆಯುತ್ತಿದೆ. ಬಾಲಿವುಡ್ ಹೀರೋ ವರುಣ್ ಧವನ್ (Varun Dhawan) ಜೊತೆ ಸಮಂತಾ ಕೈ ಜೋಡಿಸಿದ್ದಾರೆ. ಫ್ಯಾಮಿಲಿಮ್ಯಾನ್ ಸರಣಿ ನಿರ್ದೇಶಿಸಿದ್ದ ಡಿಕೆ ಇದರ ಸಾರಥಿ. ಹಾಲಿವುಡ್ ಸರಣಿಯ ಹಿಂದಿ ರಿಮೇಕ್ ಇದು. ಈಗಾಗಲೇ ಸರಣಿಯ ಕೆಲವು ದೃಶ್ಯ ನೋಡಿದ್ದೇನೆ. ಅದ್ಭುತವಾಗಿದೆ. 22 ತಿಂಗಳ ಕಷ್ಟ ಕಾಣುತ್ತಿದೆ. ಜನರು ಗೆಲ್ಲಿಸುತ್ತಾರೆ ಎನ್ನುವ ವಿಶ್ವಾಸವೂ ಇದೆ. ಹೀಗಂತ ಸಮಂತಾ ಬರೆದುಕೊಂಡಿದ್ದಾರೆ. ಇನ್ನೇನು ಓಟಿಟಿಯನ್ನು ಇದು ಮೆರವಣಿಗೆ ಹೊರಡಲಿದೆ. ಇದಾದರೂ ಸ್ಯಾಮ್‌ಗೆ ಗೆಲುವಿನ ರುಚಿ ತೋರಿಸುತ್ತದಾ ಅಥವಾ ಇಲ್ವಾ ಸೋಲುತ್ತಾ ಕಾದುನೋಡಬೇಕಿದೆ.
‘ಖುಷಿ’ (Kushi) ಸಿನಿಮಾ ಬಳಿಕ ಸಮಂತಾ ಬ್ರೇಕ್ ತೆಗೆದುಕೊಂಡಿದ್ದರು. ‘ಸಿಟಾಡೆಲ್’ (Citadel) ಮೂಲಕ ಮತ್ತೆ ಅದೃಷ್ಟ ಪರೀಕ್ಷೆಗಿಳಿಯುತ್ತಿದ್ದಾರೆ. ವೈವಾಹಿಕ ಬದುಕಿನಲ್ಲಿ ಫೇಲ್ ಆಗಿರುವ ಸಮಂತಾಗೆ ಸಿನಿ ಕೆರಿಯರ್ ಮತ್ತೆ ಕೈಹಿಡಿಯುತ್ತಾ ಕಾಯಬೇಕಿದೆ.