ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾದ ‘ಸಿಟಾಡೆಲ್’ ಜೋಡಿ

Public TV
1 Min Read
samantha

ಸೌತ್ ನಟಿ ಸಮಂತಾ- ಬಾಲಿವುಡ್ ನಟ ವರುಣ್ ಧವನ್ ಅವರು ಸದ್ಯ ಸಿಟಾಡೆಲ್ ವೆಬ್ ಸಿರೀಸ್ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ದೇಶ-ವಿದೇಶದಲ್ಲಿ ಸಿಟಾಡೆಲ್ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಸದ್ಯ ಸೆರ್ಬಿಯಾದಲ್ಲಿ ಬೀಡು ಬಿಟ್ಟಿರುವ ಸಿಟಾಡೆಲ್ ತಂಡ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನ ಭೇಟಿಯಾಗಿದ್ದಾರೆ. ಈ ಬಗ್ಗೆ ‘ಸಿಟಾಡೆಲ್’ ಜೋಡಿ ಸ್ಯಾಮ್- ವರುಣ್ ಫೋಟೋ ಖುಷಿಯಿಂದ ಹಂಚಿಕೊಂಡಿದ್ದಾರೆ.

samantha 1

ಮೊದಲ ಬಾರಿಗೆ ವರುಣ್ ಧವನ್- ಸಮಂತಾ ಒಟ್ಟಾಗಿ ನಟಿಸುತ್ತಿದ್ದಾರೆ. ಹಾಲಿವುಡ್‌ನಲ್ಲಿ ಪ್ರಿಯಾಂಕಾ ಚೋಪ್ರಾ ನಿರ್ವಹಿಸಿದ್ದ ಕಥೆಯಲ್ಲಿ ಇಂಡಿಯನ್ ವರ್ಷನ್‌ನಲ್ಲಿ ಸ್ಯಾಮ್- ವರುಣ್ ಕಾಣಿಸಿಕೊಳ್ತಿದ್ದಾರೆ. ಇದಕ್ಕಾಗಿ ಸೆರ್ಬಿಯಾದಲ್ಲಿ ಸಿನಿಮಾ ತಂಡ ಬೀಡು ಬಿಟ್ಟಿದೆ. ಈ ಸಂದರ್ಭಕ್ಕೆ ಸರಿಯಾಗಿ ಸೆರ್ಬಿಯಾಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ನೀಡಿದ್ದಾರೆ. ಹಾಗಾಗಿ ಅವರನ್ನ ಭೇಟಿಯಾಗುವ ಅವಕಾಶ ಸ್ಯಾಮ್ ತಂಡಕ್ಕೆ ಸಿಕ್ಕಿದೆ. ಖುಷಿಯಿಂದ ರಾಷ್ಟ್ರಪತಿ ದ್ರೌಪದಿ ಮುರ್ಮು ಜೊತೆ ಸಿಟಾಡೆಲ್ ಟೀಂ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

 

View this post on Instagram

 

A post shared by VarunDhawan (@varundvn)

ವರುಣ್ ಧವನ್ ಅಪ್‌ಲೋಡ್ ಮಾಡಿರುವ ಫೋಟೋವನ್ನು ಸಮಂತಾ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಖಾತೆಯ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ‘ಮೇಡಂ ಪ್ರೆಸಿಡೆಂಟ್’ ಎಂಬ ಕ್ಯಾಪ್ಷನ್ ಜೊತೆಗೆ ಕೈ ಮುಗಿಯುತ್ತಿರುವ ಇಮೋಜಿಯನ್ನು ಅವರು ಪೋಸ್ಟ್ ಮಾಡಿದ್ದಾರೆ. ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರನ್ನು ಸೆರ್ಬಿಯಾದಲ್ಲಿ ಭೇಟಿಯಾಗುವ ಅವಕಾಶ ನಮ್ಮ ‘ಸಿಟಾಡೆಲ್’ ತಂಡಕ್ಕೆ ಸಿಕ್ಕಿತು. ಅವರನ್ನು ಭೇಟಿಯಾಗಿದ್ದಕ್ಕೆ ಹೆಮ್ಮೆ ಮತ್ತು ಖುಷಿ ಆಗಿದೆ ಎಂದು ವರುಣ್ ಧವನ್ ಅವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಸಿನಿಮಾ ಸೋಲಿನ ಬಳಿಕ ನಿವೃತ್ತಿ ಘೋಷಿಸಿದ್ದ ಆಮೀರ್ ಖಾನ್ ಇದೀಗ ಟಾಲಿವುಡ್‌ನತ್ತ

‘ಸಿಟಾಡೆಲ್’ ಹಾಲಿವುಡ್ ವರ್ಷನ್‌ನಲ್ಲಿ ಪ್ರಿಯಾಂಕಾ ಚೋಪ್ರಾ ಹಸಿಬಿಸಿ ದೃಶ್ಯದಲ್ಲಿ ನಟಿಸಿದ್ದಾರೆ. ಸಮಂತಾ ಇಂಡಿಯನ್ ವರ್ಷನ್‌ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಾರಾ.? ಎಂಬುದರ ಬಗ್ಗೆ ಫ್ಯಾನ್ಸ್‌ಗೆ ಕುತೂಹಲವಿದೆ. ಎಲ್ಲದ್ದಕ್ಕೂ ಕಾದುನೋಡಬೇಕಿದೆ.

Share This Article