ಮುಂಬೈ: ಮಹಾರಾಷ್ಟ್ರದಲ್ಲಿ (Maharashtra) ಸಮಾಜವಾದಿ ಪಕ್ಷ (SP) ಬಿಜೆಪಿಯ ಬಿ ಟೀಂ (BJP B Team) ಎಂದು ಶಿವಸೇನಾ ಉದ್ದವ್ ಠಾಕ್ರೆ ಬಣದ ಶಾಸಕ ಆದಿತ್ಯ ಠಾಕ್ರೆ (Aaditya Thackeray) ಬಹಿರಂಗವಾಗಿಯೇ ಆಕ್ರೋಶ ಹೊರ ಹಾಕಿದ್ದಾರೆ.
ಪಕ್ಷದ ಮಹಾರಾಷ್ಟ್ರ ಘಟಕವು ಕೆಲವೊಮ್ಮೆ ಬಿಜೆಪಿ ಬಿ-ಟೀಂನಂತೆ ವರ್ತಿಸುತ್ತದೆ. ನಮ್ಮ ಹಿಂದುತ್ವ ಸ್ಪಷ್ಟವಾಗಿದೆ. ನಮ್ಮ ಹಿಂದುತ್ವ ಎಂದರೆ ‘ಹೃದಯ್ ಮೇ ರಾಮ್ ಔರ್ ಹಾಥ್ ಕೋ’ ಕಾಮ್’. ನಮ್ಮ ಹಿಂದುತ್ವ ಎಂದರೆ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವುದು ಎಂದರು.
ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿಯನ್ನು (MVA) ಎಸ್‌ಪಿ ತೊರೆದ ಒಂದು ದಿನದ ನಂತರ ಠಾಕ್ರೆಯವರಿಂದ ಈ ಹೇಳಿಕೆ ಪ್ರಕಟವಾಗಿರುವುದು ವಿಶೇಷ. ಇದನ್ನೂ ಓದಿ: `ಮಹಾ’ ಸ್ಪೀಕರ್ ಹುದ್ದೆಗೆ ಬಿಜೆಪಿ ಶಾಸಕ ರಾಹುಲ್ ನಾರ್ವೇಕರ್ ನಾಮಪತ್ರ ಸಲ್ಲಿಕೆ
#WATCH | Mumbai: On reports of SP quitting MVA in Maharashtra, Shiv Sena (UBT) leader Aaditya Thackeray says, “I would not like to comment much on them. Akhilesh Yadav is fighting his fight but the SP here (Maharashtra unit of SP) sometimes behaves like the B team of BJP…Our… pic.twitter.com/OCFBWVnLHI
— ANI (@ANI) December 8, 2024
ಭಾನುವಾರ ಆದಿತ್ಯ ಠಾಕ್ರೆ, ನಾನಾ ಪಟೋಲೆ, ವಿಜಯ್ ವಾಡೆಟ್ಟಿವಾರ್, ನಿತಿನ್ ರಾವುತ್, ಸುನೀಲ್ ಪ್ರಭು, ಜಿತೇಂದ್ರ ಅವದ್ ಅವರಂತಹ ಪ್ರಮುಖ ನಾಯಕರು ಸಭೆಯಲ್ಲಿ ಭಾಗವಹಿಸಿದರು.
ಮಹಾರಾಷ್ಟ್ರ ಚುನಾವಣೆಯ (Maharashtra Election) ಒಟ್ಟು 288 ವಿಧಾನಸಭಾ ಸ್ಥಾನಗಳಲ್ಲಿ ಮಹಾಯುತಿ ಒಕ್ಕೂಟ 235 ಕ್ಷೇತ್ರಗಳನ್ನು ಗೆದ್ದರೆ ಮಹಾ ವಿಕಾಸ ಅಘಾಡಿ ಕೇವಲ 46 ಸ್ಥಾನಗಳನ್ನು ಮಾತ್ರ ಗೆದ್ದುಕೊಂಡಿದೆ.
ಈ ಚುನಾವಣೆಯಲ್ಲಿ ಇವಿಎಂ ದುರ್ಬಳಕೆ ಮಾಡಲಾಗಿದೆ. ಹೀಗಾಗಿ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಎಂವಿಎ ಶಾಸಕರು ಪ್ರಮಾಣ ವಚನ ಸ್ವೀಕರಿಸದೇ ಇರುವ ನಿರ್ಧಾರಕ್ಕೆ ಬಂದಿದ್ದಾರೆ.