ಲಕ್ನೋ: ಸಾಮಾನ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ನಿಷೇಧಿಸಲಾಗಿದೆ. ಇದನ್ನು ಸಾರ್ವಜನಿಕ ಸ್ಥಳಗಳಲ್ಲಿ ಬರೆಯಲಾಗುತ್ತದೆ. ಆದರೆ ಇದನ್ನು ಮರೆತು ಸಮಾಜವಾದಿ ಪಕ್ಷದ ಮುಖಂಡ, ಶಾಸಕ ಹಾಜಿ ಇಕ್ರಮ್ ಖುರೇಷಿ ಜಿಲ್ಲಾಸ್ಪತ್ರೆಯ ಆವರಣದಲ್ಲೇ ಸಿಗರೇಟ್ ಸೇದಿದ್ದಾರೆ.
ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರ ಜನ್ಮದಿನದ ನಿಮಿತ್ತ ಸಮಾಜವಾದಿ ಪಕ್ಷದ ಎಸ್‍ಪಿ ಶಾಸಕರು ಮೊರಾದಾಬಾದ್ ಜಿಲ್ಲಾಸ್ಪತ್ರೆಯ ರೋಗಿಗಳಿಗೆ ಹಣ್ಣುಗಳನ್ನು ವಿತರಿಸಲು ಬಂದಿದ್ದರು. ಈ ವೇಳೆ ಶಾಸಕ ಹಾಜಿ ಇಕ್ರಮ್ ಖುರೇಷಿ ಆಸ್ಪತ್ರೆಯ ಆವರಣದಲ್ಲಿ ಸಿಗರೇಟ್ ಸೇದಿದ್ದಾರೆ. ಈ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
Advertisement
#WATCH SP leader Haji Ikram Qureshi was seen smoking inside hospital premises in Moradabad, earlier today, where he had gone to distribute fruits to patients on the occasion of birthday of Samajwadi Party founder Mulayam Singh Yadav. pic.twitter.com/zFsRpM3Se4
— ANI UP/Uttarakhand (@ANINewsUP) November 22, 2019
Advertisement
ವಿಶೇಷವೆಂದರೆ, ಈ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದ್ದಕ್ಕೆ ಹಾಜಿ ಇಕ್ರಮ್ ಖುರೇಷಿ ತಪ್ಪನ್ನು ಸ್ವೀಕರಿಸುವ ಬದಲು, ಅಸಂಬದ್ಧ ಉತ್ತರವನ್ನು ನೀಡಿದ್ದಾರೆ. ಯಾರೋ ಕಿಡಿಗೇಡಿಗಳು ತನ್ನ ಹೆಸರು ಹಾಳು ಮಾಡಲು ಹೀಗೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
Advertisement
ಶಾಸಕರು ಆಸ್ಪತ್ರೆಯ ಆವರಣದಲ್ಲಿ ಸಿಗರೇಟ್ ಸೇದಿದ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕೆಲ ನೆಟ್ಟಿಗರು ತಮ್ಮದೆಯಾದ ಮಾಡಿದ್ದಾರೆ.
Advertisement
Samajwadi Party leader Haji Ikram Qureshi in Moradabad: Hospital mein nahi the, side mein ek park mein khade ho kar ke kuch bhi kar rahe the. Badnaam agar honge toh kya naam na hoga! pic.twitter.com/VL6ih1EHNV
— ANI UP/Uttarakhand (@ANINewsUP) November 22, 2019