ಲಕ್ನೋ: ಸಮಾಜವಾದಿ ಪಕ್ಷದ (Samajwadi Party) ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಅವರು 2024 ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಕನೌಜ್‌ನಿಂದ ಸ್ಪರ್ಧಿಸಲಿದ್ದಾರೆ.
ಯಾದವ್ ಅವರನ್ನು ಮೂರು ಬಾರಿ ಸಂಸತ್ತಿಗೆ ಕಳುಹಿಸಿದ ಕ್ಷೇತ್ರ ಮತ್ತು ಅವರ ಪತ್ನಿ ಡಿಂಪಲ್ ಯಾದವ್ ಹಾಗೂ ಎಸ್‌ಪಿ ದಿವಂಗತ ಮುಲಾಯಂ ಸಿಂಗ್ ಯಾದವ್‌ಗೆ ಮತ ಹಾಕಿ ಗೆಲ್ಲಿಸಿದ್ದ ಕ್ಷೇತ್ರವಿದು. ಇದನ್ನೂ ಓದಿ: ಸಂಪತ್ತು ಸಮೀಕ್ಷೆಯ ಮೂಲಕ ಅನ್ಯಾಯದ ಪ್ರಮಾಣವನ್ನು ಕಂಡುಹಿಡಿಯಲು ಬಯಸುತ್ತೇನೆ: ರಾಗಾ
Advertisement
Advertisement
ಯುಪಿ ಮಾಜಿ ಮುಖ್ಯಮಂತ್ರಿ ಯಾದವ್ ಅವರು ನಾಳೆ ಮಧ್ಯಾಹ್ನ ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ ಪಕ್ಷವು ತಿಳಿಸಿದೆ. ಅವರು 2019 ರಲ್ಲಿ ಅಜಂಗಢ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಆದರೆ ಅವರು 2022 ರಲ್ಲಿ ಕರ್ಹಾಲ್‌ನಿಂದ ಯುಪಿ ವಿಧಾನಸಭೆಗೆ ಆಯ್ಕೆಯಾದ ನಂತರ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
Advertisement
ಕನೌಜ್ ಕ್ಷೇತ್ರ ಸಮಾಜವಾದಿ ಪಕ್ಷದ ಭದ್ರಕೋಟೆಯಾಗಿತ್ತು. ಆದರೆ 2019 ರಲ್ಲಿ ಸುಬ್ರತ್ ಪಾಠಕ್ ಅವರು 14,000 ಕ್ಕಿಂತ ಕಡಿಮೆ ಮತಗಳಿಂದ ಗೆಲ್ಲುವ ಮೂಲಕ ಕ್ಷೇತ್ರವನ್ನು ಬಿಜೆಪಿ ವಶಕ್ಕೆ ಪಡೆಯಿತು. 2012 ರಲ್ಲಿ ನಡೆದ ಉಪಚುನಾವಣೆಯಲ್ಲಿ ಅಖಿಲೇಶ್ ಯಾದವ್ ಅವರ ಪತ್ನಿ ಈ ಕ್ಷೇತ್ರದಲ್ಲಿ ಗೆಲುವು ದಾಖಲಿಸಿದ್ದರು. 2014 ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಮತ್ತೆ ಗೆದ್ದಿದ್ದರು. ಇದನ್ನೂ ಓದಿ: ವ್ಯಕ್ತಿಯ ಸಾವಿನ ನಂತರವೂ ಆಸ್ತಿ ಕಿತ್ತುಕೊಳ್ಳುವ ಮೂಲಕ ಕಾಂಗ್ರೆಸ್ ಲೂಟಿಗೆ ಇಳಿದಿದೆ: ನರೇಂದ್ರ ಮೋದಿ
Advertisement
ಅಖಿಲೇಶ್ ಯಾದವ್ ಅವರು 2000 ರ ಉಪಚುನಾವಣೆಯಲ್ಲಿ ಕನೌಜ್‌ನಲ್ಲಿ ಗೆದ್ದಿದ್ದರು. 2004 ಮತ್ತು 2009 ರ ಸಾರ್ವತ್ರಿಕ ಚುನಾವಣೆಗಳಲ್ಲೂ ಗೆದ್ದು ಭದ್ರಬುನಾದಿ ಹಾಕಿದ್ದರು. ಈ ಚುನಾವಣೆಗಳಲ್ಲಿ ಕ್ರಮವಾಗಿ 3 ಲಕ್ಷ ಮತ್ತು 2.5 ಲಕ್ಷ ಮತಗಳಿಂದ ಗೆಲುವು ಸಾಧಿಸಿದ್ದರು.