ಲಕ್ನೋ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಮಾಜವಾದಿ ಪಕ್ಷದ ಶಾಸಕ ಇಸ್ಲಾಂ ಅನ್ಸಾರಿ ಅವರ ಒಡೆತನದ ಬರೇಲಿಯಲ್ಲಿರುವ ಪೆಟ್ರೋಲ್ ಬಂಕ್‍ನ್ನು ಬುಲ್ಡೋಜರ್‍ನಿಂದ ಧ್ವಂಸಗೊಳಿಸಿದ ಘಟನೆ ನಡೆದಿದೆ.
ಉತ್ತರ ಪ್ರದೇಶದ ಬರೇಲಿಯ ದೆಹಲಿ-ರಾಮ್‍ಪುರ ಹೆದ್ದಾರಿಯಲ್ಲಿರುವ ಶಾಸಕ ಶಾಜಿಲ್ ಇಸ್ಲಾಂ ಅನ್ಸಾರಿ ಒಡೆತನದ ಪೆಟ್ರೋಲ್ ಪಂಪ್ ಅನ್ನು ಅಗತ್ಯ ಪರವಾನಿಗೆ ಇಲ್ಲದೆ ನಿರ್ಮಿಸಿದ್ದಾರೆ ಎಂದು ಆರೋಪಿಸಿ ಜಿಲ್ಲಾಧಿಕಾರಿಗಳು ಗುರುವಾರ ಧ್ವಂಸಗೊಳಿಸಿದ್ದಾರೆ. ಈ ಹಿಂದೆ ಶಾಜಿಲ್ ಇಸ್ಲಾಂ ಅವರು ಯೋಗಿ ಆದಿತ್ಯನಾಥ್‍ಗೆ ಬೆದರಿಕೆ ಹಾಕುತ್ತಿರುವ ವೀಡಿಯೋ ಕ್ಲಿಪ್‍ವೊಂದು ಬಿಡುಗಡೆ ಆಗಿತ್ತು. ಇದು ಸಾಕಷ್ಟು ವಿವಾದವನ್ನು ಉಂಟು ಮಾಡಿತ್ತು.
Advertisement
Advertisement
ಬರೇಲಿಯಲ್ಲಿ ಎಸ್‍ಪಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ್ದ ಶಾಸಕ, ಯೋಗಿ ನಮ್ಮ ವಿರುದ್ಧ ಏನಾದರೂ ಹೇಳಿದರೆ, ನಮ್ಮ ಬಂದೂಕುಗಳು ಹೊಗೆಯನ್ನು ಹೊರಸೂಸುವುದಿಲ್ಲ. ಆದರೆ ಗುಂಡುಗಳನ್ನು ಹಾರಿಸುತ್ತವೆ ಎಂದು ಹೇಳಿದ್ದರು. ಇದನ್ನೂ ಓದಿ: ಬಿಜೆಪಿ ಸರ್ಕಾರ ಜನರ ಗಮನ ಕೋಮುಸಂಘರ್ಷದತ್ತ ಸೆಳೆದು ಬೆಲೆ ಏರಿಕೆ ಮಾಡುತ್ತಿದೆ: AAP
Advertisement
ಮುಖ್ಯಮಂತ್ರಿ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಶಾಜಿಲ್ ಇಸ್ಲಾಂ ಮತ್ತು ಪಕ್ಷದ ಇತರ ಕೆಲವು ನಾಯಕರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿತ್ತು. ಇದನ್ನೂ ಓದಿ: ಧಾರ್ಮಿಕ ಭಾವೈಕ್ಯತೆಗೆ ಧಕ್ಕೆ ತರುವ ಕೆಲಸ ಮಾಡಿಲ್ಲ, ಇದು ಎಲ್ಲರ ಸರ್ಕಾರ: ಡಾ.ಕೆ ಸುಧಾಕರ್