ವಾಷಿಂಗ್ಟನ್: ಟೆಕ್ಸಾಸ್‍ನ ಪ್ರಾಥಮಿಕ ಶಾಲೆಯೊಂದರಲ್ಲಿ ಗುಂಡು ಹಾರಿಸಿ 21 ಮಂದಿಯನ್ನು ಹತ್ಯೆಗೈದಿದ್ದ ಆರೋಪಿ ಸಾಲ್ವಡಾರ್ ರಾಮೋಸ್(18) ಕೆಲವೇ ದಿನಗಳ ಮೊದಲು ಗನ್‍ಗಳ ಚಿತ್ರಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದ ಎನ್ನುವ ವಿಷಯ ಇದೀಗ ಬೆಳಕಿಗೆ ಬಂದಿದೆ.
ಟೆಕ್ಸಾಸ್‍ನ ಮೆಕ್ಸಿಕನ್ ಗಡಿಯ ಸಮೀಪವಿರುವ ಸಣ್ಣ ಸಮುದಾಯವಾದ ಉವಾಲ್ಡೆಯಲ್ಲಿರುವ ರಾಬ್ ಎಲಿಮೆಂಟರಿ ಸ್ಕೂಲ್‍ನಲ್ಲಿ ತರಗತಿಯಿಂದ ತರಗತಿಗೆ ಹೋಗುವಾಗ ಸಾಲ್ವಡಾರ್ ರಾಮೋಸ್ ಗುಂಡಿನ ದಾಳಿ ನಡೆಸಿದ್ದ. ಈ ಸಂದರ್ಭದಲ್ಲಿ ಒಬ್ಬರು ಶಿಕ್ಷಕ ಹಾಗೂ 18 ಮಕ್ಕಳು ಮತ್ತು ಇಬ್ಬರು ವಯಸ್ಕರು ಸೇರಿ 21 ಮಂದಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಅಮೆರಿಕಾದ ಶಾಲೆಯಲ್ಲಿ ಶೂಟೌಟ್-18 ವಿದ್ಯಾರ್ಥಿಗಳು ಸೇರಿ 21 ಮಂದಿ ದುರ್ಮರಣ
Advertisement
18-year-old Salvador Ramos, identified as the gunman who killed at least 14 students and a teacher at Robb Elementary School in Uvalde, Texas, posted photos of rifles and a gun magazine on Instagram before shooting: https://t.co/XdVGjERwld pic.twitter.com/1Dqcq6ITCt
— Heavy.com (@HeavySan) May 24, 2022
ಆದರೆ ಈ ದಾಳಿಯ ಮೊದಲು ರಾಮೋಸ್ ತನ್ನ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ರೈಫಲ್‍ಗಳು ಮತ್ತು ಮದ್ದುಗುಂಡುಗಳ ಫೋಟೋಗಳನ್ನು ಹಂಚಿಕೊಂಡಿದ್ದ. ನಂತರ ಅದನ್ನು ತೆಗೆದುಹಾಕಿದ್ದಾನೆ. ಇನ್‍ಸ್ಟಾಗ್ರಾಮ್‍ನ, ರಾಮೋಸ್‍ನನ್ನು ಶೂಟರ್ ಎಂದು ಗುರುತಿಸಿದ ನಂತರ ಅವರ ಖಾತೆಯನ್ನು ಅಳಿಸಲಾಗಿದೆ ಎಂದು ತಿಳಿಸಿದೆ. ಭದ್ರತಾ ಸಿಬ್ಬಂದಿ ನಡೆಸಿದ್ದ ಪ್ರತಿದಾಳಿಯಲ್ಲಿ ಸಾಲ್ವಡಾರ್ ರಾಮೋಸ್ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿ ಇಂದಿಗೆ 3 ತಿಂಗಳು – ಪುಟ್ಟ ರಾಷ್ಟ್ರ ವಶಕ್ಕೆ ತಿಣುಕಾಟ