ಬ್ರಸೆಲ್ಸ್: ವಿಶ್ವದ ಅತಿ ದೊಡ್ಡ ಚಾಕೊಲೇಟ್ ಫ್ಯಾಕ್ಟರಿಯಲ್ಲಿ ಸಲ್ಮೊನೆಲ್ಲಾ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಸದ್ಯ ಚಾಕೊಲೇಟ್ ಫ್ಯಾಕ್ಟರಿಯಲ್ಲಿ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ.
ಬೆಲ್ಜಿಯಂನ ವೈಜ್ ನಗರದಲ್ಲಿರುವ ಸ್ವಿಸ್ ದೈತ್ಯ ಬ್ಯಾರಿ ಕ್ಯಾಲೆಬಾಟ್ ನಡೆಸುತ್ತಿರುವ ಚಾಕೊಲೇಟ್ ಫ್ಯಾಕ್ಟರಿ ವಿಶ್ವದಲ್ಲೇ ಅತ್ಯಂತ ದೊಡ್ಡ ಫ್ಯಾಕ್ಟರಿಯಾಗಿದೆ. ಅದರಲ್ಲಿ ಸಲ್ಮೊನೆಲ್ಲಾ ಬ್ಯಾಕ್ಟೀರಿಯಾ ಪತ್ತೆಯಾಗಿರುವುದು ಚಾಕೊಲೇಟ್ ಪ್ರಿಯರಿಗೆ ಆಘಾತ ತಂದಿದೆ. ಸದ್ಯ ಕಾರ್ಖಾನೆಯಲ್ಲಿ ಉತ್ಪಾದನೆಯನ್ನು ಸ್ಥಗಿತಗೊಳಿಸಿಲಾಗಿದೆ ಎಂದು ಕಂಪನಿ ತಿಳಿಸಿದೆ. ಇದನ್ನೂ ಓದಿ: ಪ್ರವಾಹದಿಂದ ರಕ್ಷಿಸಿಕೊಳ್ಳಲು ತೇಲುವ ಮನೆ ನಿರ್ಮಿಸಿದ ಜಪಾನ್ – ಏನಿದರ ವಿಶೇಷತೆ?
Advertisement
Advertisement
ಈ ಬಗ್ಗೆ ಮಾಹಿತಿ ನೀಡಿರುವ ಕಂಪನಿ ವಕ್ತಾರ ಕಾರ್ನೀಲ್ ವಾರ್ಲೋಪ್, ಪರೀಕ್ಷೆಯ ಬಳಿಕ ತಯಾರಿಸಲಾದ ಎಲ್ಲಾ ಉತ್ಪನ್ನಗಳನ್ನು ನಿರ್ಬಂಧಿಸಲಾಗಿದೆ. ಬ್ಯಾಕ್ಟೀರಿಯಾ ಕಂಡುಬಂದಂತೆ ಉತ್ಪನ್ನಗಳನ್ನು ಪಡೆದಿರುವ ಎಲ್ಲಾ ಗ್ರಾಹಕರನ್ನು ಸಂಪರ್ಕಿಸಲಾಗುತ್ತಿದೆ. ಮುಂದಿನ ಸೂಚನೆ ಬರುವವರೆಗೂ ಚಾಕೊಲೇಟ್ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
Advertisement
ಬ್ಯಾಕ್ಟೀರಿಯಾ ಪತ್ತೆಯಾದ ಬಳಿಕದ ಹೆಚ್ಚಿನ ಉತ್ಪನ್ನಗಳು ಮಾರಾಟವಾಗಿಲ್ಲ. ಆದರೂ ಗ್ರಾಹಕರನ್ನು ಸಂಪರ್ಕಿಸಲಾಗುತ್ತಿದೆ. ಜೂನ್ 25ರಿಂದ ತಯಾರಿಸಲಾದ ಉತ್ಪನ್ನಗಳನ್ನು ರವಾನಿಸದಂತೆ ಕೇಳಿಕೊಂಡಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿಂಗರ್ ಕೆಲ್ಲಿಗೆ 30 ವರ್ಷ ಜೈಲು ಶಿಕ್ಷೆ: 9 ಆರೋಪ ಸಾಬೀತು
Advertisement
ವಿಶ್ವದ ನಂ.1 ಚಾಕೊಲೇಟ್ ತಯಾರಿಕಾ ಕಂಪನಿ ಇದಾಗಿದ್ದು, 2020-2021 ಹಣಕಾಸು ವರ್ಷದಲ್ಲಿ 2 ಕೋಟಿ ಟನ್‌ಗಳಷ್ಟು ಉತ್ಪನ್ನಗಳು ಮಾರಾಟವಾಗಿವೆ. ಕಂಪನಿಯಲ್ಲಿ 13,000ಕ್ಕೂ ಹೆಚ್ಚು ಉದ್ಯೋಗಿಗಳಿದ್ದು, ಪ್ರಪಂಚದಾದ್ಯಂತ 60ಕ್ಕೂ ಹೆಚ್ಚು ಉತ್ಪಾದನಾ ಘಟಕಗಳಿವೆ.