‘ಸಿಕಂದರ್’ (Sikandar) ಸೋಲಿನಿಂದ ಸಲ್ಮಾನ್ ಖಾನ್ (Salman Khan) ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಸ್ಕ್ರಿಪ್ಟ್ ಆಯ್ಕೆಯಲ್ಲಿ ಮತ್ತಷ್ಟು ಚ್ಯೂಸಿಯಾಗಿದ್ದಾರೆ. ಹೀಗಿರುವಾಗ ಆರ್ಮಿ ಆಫೀಸರ್ ಪಾತ್ರದಲ್ಲಿ ನಟಿಸಲು ಸಲ್ಮಾನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ. ಇದನ್ನೂ ಓದಿ:ರಶ್ಮಿಕಾರಲ್ಲಿ ದೇವರಕೊಂಡಗೆ ಪತ್ನಿಯಾಗುವ ಗುಣವಿದ್ಯಾ?- ನಟ ಹೇಳೋದೇನು?

‘ಇಂಡಿಯಾಸ್ ಮೋಸ್ಟ್ ಫಿಯರ್‌ಲೆಸ್ 3’ ಕಾದಂಬರಿಯನ್ನು ಆಧರಿಸಿ ಸಿನಿಮಾ ಮಾಡಲು ನಿರ್ದೇಶಕ ತಯಾರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಚಿತ್ರತಂಡವೇ ಅಧಿಕೃತ ಮಾಹಿತಿ ತಿಳಿಸಬೇಕಿದೆ.
ಈಗಾಗಲೇ ನಿರ್ದೇಶಕ ರಾಜ್ ಶಾಂಡಿಲ್ಯ, ರಾಜ್‌ಕುಮಾರ್ ಪೆರಿಸ್ವಾಮಿ ಸೇರಿದಂತೆ ಕೆಲವರೊಂದಿಗೆ ಹೊಸ ಸಿನಿಮಾ ಸ್ಕ್ರಿಪ್ಟ್‌ಗಳ ಮಾತುಕತೆ ನಡೆದಿದೆ. ಇವರೊಂದಿಗೂ ಸಿನಿಮಾ ಮಾಡ್ತಾರಾ? ಸಲ್ಮಾನ್ ಕಥೆ ಇಷ್ಟವಾಗಿದ್ಯಾ ಎಂಬುದು ಖಾತ್ರಿಯಾಗಿಲ್ಲ. ನಟನ ಕಡೆಯಿಂದ ಗುಡ್ ನ್ಯೂಸ್‌ಗಾಗಿ ಕಾಯ್ತಿದ್ದಾರೆ.



