ಮುಂಬೈ: ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಹಾಲಿವುಡ್ ಸ್ಟಾರ್ ನಟನಿಗೆ ‘ನನ್ನ ಹೆಸರು ಸಲ್ಮಾನ್ ಖಾನ್’ ಎಂದು ಪರಿಚಯ ಮಾಡಿಕೊಂಡಿದ್ದಾರೆ.
Megastars #salmankhan and John Travolta @jhontravoltta pic.twitter.com/yiPHOwXpaD
— Ifty khan (@Iftykhan15) January 28, 2022
Advertisement
ಸೌದಿ ಅರೇಬಿಯಾದಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ನಟ ಸಲ್ಮಾನ್ ಖಾನ್, ಹಾಲಿವುಡ್ ಸ್ಟಾರ್ ಜಾನ್ ಟ್ರಾವೋಲ್ಟಾ ಅವರನ್ನು ಭೇಟಿ ಮಾಡಿ ‘ನನ್ನ ಹೆಸರು ಸಲ್ಮಾನ್ ಖಾನ್’ ಎಂದು ಹೇಳುತ್ತಿರುವ ವಿಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ಜಾನ್ವಿ, ನನ್ನ ಮಧ್ಯೆ ಹಲವು ಅಂಶ ಒಂದೇ ರೀತಿ ಇದ್ದರೂ, ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಅಲ್ಲ: ಸಾರಾ
Advertisement
Best PERSONALITY OF THE YEAR Award #SalmanKhan in saudi arabia pride of India #JoyAwards @BeingSalmanKhan ????✌ pic.twitter.com/onyp3EcKGW
— ..Rocking..ßHAI..???????????? (@JunejaRoja) January 28, 2022
Advertisement
ಸಲ್ಮಾನ್ ವೀಡಿಯೊದಲ್ಲಿ, ಟ್ರಾವೋಲ್ಟಾ ಅವರ ಅದ್ಭುತ ನಟನೆ ಬಗ್ಗೆ ಹೊಗಳಿದ್ದಾರೆ. ನಾನು ಭಾರತೀಯ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನ ಹೆಸರು ಸಲ್ಮಾನ್ ಖಾನ್ ಎಂದು ಹೇಳಿದ್ದಾರೆ. ಈ ವೀಡಿಯೋ ನೋಡಿ ಸಲ್ಲು ಅಭಿಮಾನಿಗಳು ಅವರ ಸರಳತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Advertisement
ಸಲ್ಮಾನ್ ಮತ್ತು ಟ್ರಾವೋಲ್ಟಾ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಗಿರೀಶ್ ಜೋಹರ್ ಹಂಚಿಕೊಂಡಿದ್ದು, ಇಬ್ಬರು ಸ್ಟಾರ್ ನಟರು ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಫೋಟೋ ನೋಡಿದ ಅಭಿಮಾನಿಗಳು ‘ಭಾರತದ ದೊಡ್ಡ ಮೆಗಾಸ್ಟಾರ್’ ಎಂದು ಕಮೆಂಟ್ ಮಾಡಿದ್ದಾರೆ. ಸಲ್ಮಾನ್ ಅವರ ಫ್ಯಾನ್ ಕ್ಲಬ್ ನಲ್ಲಿ, ಸಲ್ಲು ಪ್ರಶಸ್ತಿ ಸ್ವೀಕರಿಸುತ್ತಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
#SalmanKhan in #JoyAwards Love you pic.twitter.com/MaBIOZeDCY
— Putra_pawan (@Putrapawan3) January 27, 2022
ಸಲ್ಲು ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ‘ಟೈಗರ್-3’ ಸಿನಿಮಾ ರಿಲೀಸ್‍ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಸಿನಿಮಾದಲ್ಲಿ ಕತ್ರಿನಾ ಕೈಫ್ ಮತ್ತು ಇಮ್ರಾನ್ ಹಶ್ಮಿ ಸಹ ಕಾಣಿಸಿಕೊಳ್ಳಲಿದ್ದಾರೆ. ಸಲ್ಲು ‘ಭಜರಂಗಿ ಭಾಯಿಜಾನ್’ ಸಿನಿಮಾದ ಸೀಕ್ವೆಲ್ ಮಾಡುವುದಾಗಿ ಮಾಧ್ಯಮಗಳ ಮೂಲಕ ಖಚಿತಪಡಿಸಿದ್ದಾರೆ. ಇದನ್ನೂ ಓದಿ: ಕರಿಷ್ಮಾ ಫಿಟ್ನೆಸ್ ಹೊಗಳಿದ ಮಲೈಕಾ ಅರೋರಾ
https://twitter.com/iBadasSalmaniac/status/1486782253279502344
ಸಲ್ಲು ಇತ್ತೀಚೆಗೆ ಆಸ್ತಿ ವಿವಾದದಲ್ಲಿ ಹೆಚ್ಚು ಸುದ್ದಿಯಾಗುತ್ತಿದ್ದು, ಈ ಕುರಿತು ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಅಸಮಾಧಾನವನ್ನು ಹೊರಹಾಕಿದ್ದರು. ಈ ವೇಳೆ ಸಲ್ಲು, ಆಸ್ತಿ ವಿವಾದ ತೆಗೆದು ನನ್ನ ಪ್ರತಿಷ್ಠೆಗೆ ಧಕ್ಕೆಯನ್ನುಂಟು ಮಾಡಲಾಗುತ್ತಿದೆ. ಈ ವಿಚಾರದಲ್ಲಿ ನನ್ನ ಧರ್ಮವನ್ನು ಎಳೆದು ತರುತ್ತಿರುವುದು ಏಕೆ ಎಂದು ಪ್ರಶ್ನಿಸಿದ್ದರು. ನನ್ನ ತಾಯಿ ಹಿಂದೂ, ನನ್ನ ತಂದೆ ಮುಸ್ಲಿಂ, ನನ್ನ ಸಹೋದರರು ಹಿಂದೂಗಳನ್ನು ಮದುವೆಯಾಗಿದ್ದಾರೆ. ಹಾಗಾಗಿ ನಾವು ನಮ್ಮ ಮನೆಯಲ್ಲಿ ಎಲ್ಲ ಹಬ್ಬಗಳನ್ನು ಆಚರಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.