ಮುಂಬೈ: ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸ್ಕ್ರೀನ್ ಗಳಲ್ಲಿ ತೆರೆ ಕಾಣುವ ಮೂಲಕ ರಾಜಮೌಳಿ ನಿರ್ದೇಶನದ ಬಾಹುಬಲಿ ಹೊಸ ದಾಖಲೆ ಬರೆದಿತ್ತು. ಆದರೆ ಸಲ್ಮಾನ್ ಅಭಿನಯದ ಟ್ಯೂಬ್‍ಲೈಟ್ ಈ ದಾಖಲೆಯನ್ನು ಬ್ರೇಕ್ ಮಾಡಿದೆ.
ಏಪ್ರಿಲ್ 28ಕ್ಕೆ ರಿಲೀಸ್ ಆಗಿದ್ದ ಬಾಹುಬಲಿ-2 ಒಟ್ಟು 9 ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಿತ್ತು. ಆದರೆ ಟ್ಯೂಬ್‍ಲೈಟ್ 10 ಸಾವಿರಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಸಿನಿ ಮಾರುಕಟ್ಟೆ ವಿಶ್ಲೇಷಕ ರಮೇಶ್ ಬಾಲ ಟ್ವೀಟ್ ಮಾಡಿದ್ದಾರೆ.
Advertisement
ಅಂತಾರಷ್ಟ್ರೀಯ ಮಾರುಕಟ್ಟೆಯಲ್ಲಿ 50ಕ್ಕೂ ಹೆಚ್ಚು ದೇಶಗಳಲ್ಲಿ ಟ್ಯೂಬ್‍ಲೈಟ್ ಬಿಡುಗಡೆಯಾದರೆ, ಅಮೆರಿಕದಲ್ಲಿ 330ಕ್ಕೂ ಅಧಿಕ ಸ್ಕ್ರೀನ್, ಇಂಗ್ಲೆಂಡಿನಲ್ಲಿ 205ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಲಿದೆ ಎಂದು ರಮೇಶ್ ಬಾಲ ತಿಳಿಸಿದ್ದಾರೆ.
Advertisement
1962ರ ಭಾರತ ಚೀನಾ ಯುದ್ಧದ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಲಕ್ಷ್ಮಣ್ ಸಿಂಗ್ ಪಾತ್ರವನ್ನು ನಿರ್ವಹಿಸಿದ್ದಾರೆ. ಕಬೀರ್ ಖಾನ್ ನಿರ್ದೇಶನದ ಸಲ್ಮಾನ್ ಖಾನ್ ನಿರ್ಮಾಣದ ಟ್ಯೂಬ್‍ಲೈಟ್ ಜೂನ್ 23ರಂದು ಬಿಡುಗಡೆಯಾಗಲಿದೆ.
Advertisement
Advertisement
https://twitter.com/rameshlaus/status/875539191270064128
#Tubelight will release in 50+ Countries in International Market.. In #US – it will release in 330+ and in #UK 215+ Screens..
— Ramesh Bala (@rameshlaus) June 16, 2017
. @BeingSalmanKhan 's #Tubelight is expected to take ₹ 100+ Cr Opening for the 1st weekend and Lifetime Biz of ₹ 350+ Cr Nett in #India..
— Ramesh Bala (@rameshlaus) June 16, 2017
Multiplex Chain @INOXMovies will allocate 90% of it's 468 Screens to #Tubelight in #India.. A Widest release possible is being planned..
— Ramesh Bala (@rameshlaus) June 16, 2017