ಮುಂಬೈ: ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್, ಖ್ಯಾತ ಹಾಸ್ಯನಟ ಸುನಿಲ್ ಗ್ರೋವರ್ ಆರೋಗ್ಯ ಸ್ಥಿತಿ ವಿಚಾರಿಸಿಕೊಳ್ಳಲು ತನ್ನ ವೈದ್ಯ ತಂಡಕ್ಕೆ ಸೂಚಿಸಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.
ಸಲ್ಮಾನ್ ತಮ್ಮ ಆಪ್ತರ ಆರೋಗ್ಯ ವಿಚಾರಿಸಿಕೊಳ್ಳಲು ಯಾವಾಗಲು ಸಿದ್ಧರಿರುತ್ತಾರೆ. ತಮ್ಮ ಸುತ್ತಮುತ್ತಲಿನವರಿಗೆ ಏನಾದರೂ ತೊಂದರೆ ಎಂದರೆ ಅವರನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಈ ನಟ ವಹಿಸಿಕೊಳ್ಳುತ್ತಾರೆ. ಅದೇ ರೀತಿ ಸುನಿಲ್ ಗ್ರೋವರ್ ಅವರಿಗೆ ಇತ್ತೀಚೆಗೆ ಹೃದಯ ಶಸ್ತ್ರಚಿಕಿತ್ಸೆ ನಡೆದಿದ್ದು, ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ. ಪರಿಣಾಮ ಸಲ್ಲು ತನ್ನ ವೈದ್ಯ ತಂಡಕ್ಕೆ ಸುನಿಲ್ ಆರೋಗ್ಯವನ್ನು ನೋಡಿಕೊಳ್ಳುವಂತೆ ಸೂಚಿಸಿದ್ದಾರೆ ಎಂದು ವರದಿ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ‘ಮರಳಿ ಬರುತ್ತಿದ್ದೇನೆ’ – 56ರ ಹರೆಯದಲ್ಲೂ ಜಿಮ್‍ನಲ್ಲಿ ಬೆವರಿಳಿಸುತ್ತಿದ್ದಾರೆ ಸಲ್ಲು
ಸುನಿಲ್ ಗ್ರೋವರ್ ಅವರು ಇತ್ತೀಚೆಗೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಎಲ್ಲೆಡೆ ಸುದ್ದಿಯಲ್ಲಿದ್ದರು. ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಮುಂಬೈನ ಏಷ್ಯನ್ ಹಾರ್ಟ್ ಇನ್‍ಸ್ಟಿಟ್ಯೂಟ್‍ಗೆ ದಾಖಲಿಸಲಾಗಿತ್ತು. ಪರೀಕ್ಷೆಗಳ ನಂತರ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬುದು ತಿಳಿದುಬಂದಿದೆ. ಅಲ್ಲದೆ ಅವರಿಗೆ ಕೋವಿಡ್-19 ಪಾಸಿಟಿವ್ ಸಹ ಬಂದಿತ್ತು. ಈ ಹಿನ್ನೆಲೆ ವೈದ್ಯರು ಸುನಿಲ್ ಅವರ ಆರೋಗ್ಯ ಸ್ಥಿತಿ ಹದಗಟ್ಟಿದ್ದು, ಹೃದಯ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ಸೂಚಿಸಿದ್ದಾರೆ.
ವಿಷಯ ತಿಳಿದ ಸುನಿಲ್ ಆತ್ಮೀಯ ಸ್ನೇಹಿತ, ಸಲ್ಮಾನ್ ಖಾನ್ ತಮ್ಮ ವೈದ್ಯರ ತಂಡವನ್ನು ಅವರ ಆರೋಗ್ಯ ಪರೀಕ್ಷಿಸಲು ಕೇಳಿದ್ದಾರೆ. ಚಿಕಿತ್ಸೆ ನಂತರವೂ ಸಲ್ಲು ವೈದ್ಯಕೀಯ ಸಿಬ್ಬಂದಿ ತಂಡವು ಸುನಿಲ್ ಅವರನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಪ್ರಸ್ತುತ ಸುನಿಲ್ ಅವರು ಆಸ್ಪತ್ರೆಯಿದ್ದ ಡಿಸ್ಚಾರ್ಜ್ ಆಗಿದ್ದು, ಅವರ ಆರೋಗ್ಯದ ಮೇಲೆ ನಿಗಾ ಇಡಲು ಸಲ್ಲು ವೈದ್ಯರ ತಂಡಕ್ಕೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ತಂಗಿ ಆರೋಗ್ಯ ಸರಿಯಿಲ್ಲವೆಂದು ಕ್ಯಾಬ್ ದರೋಡೆ ಮಾಡಿದ ಸಹೋದರರು..!
2019 ರಲ್ಲಿ ತೆರೆಕಂಡ ಬ್ಲಾಕ್ಬಸ್ಟರ್ ಹಿಟ್ ಸಿನಿಮಾ ‘ಭಾರತ್’ ನಲ್ಲಿ ಸಲ್ಲು ಮತ್ತು ಸುನೀಲ್ ಒಟ್ಟಿಗೆ ಕೆಲಸ ಮಾಡಿದ್ದರು. ಇತ್ತೀಚೆಗೆ ಸುನಿಲ್ ತಮ್ಮ ಮುಂಬರುವ ವೆಬ್ ಸರಣಿಯ ಚಿತ್ರೀಕರಣದ ವೇಳೆ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಅನೇಕ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಅವರು ಶೀಘ್ರವಾಗಿ ಚೇತರಿಸಿಕೊಳ್ಳಲು ಹಾರೈಸಿದ್ದರು.