ಮುಂಬೈ: ಯುವತಿಯೊಬ್ಬಳು ಸಲ್ಮಾನ್ ಖಾನ್ ವಾಸವಿರುವ ಅಪಾರ್ಟ್ಮೆಂಟ್ನ ಟೆರೇಸಿಗೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿರುವ ವಿಚಿತ್ರ ಘಟನೆ ಮುಂಬೈನ ಗ್ಯಾಲಕ್ಸಿ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ.
ವರದಿಗಳ ಪ್ರಕಾರ ಕೆಲವು ದಿನಗಳ ಹಿಂದೆ ಸಲ್ಮಾನ್ ಖಾನ್ ನೆಲೆಸಿರುವ ಮುಂಬೈನ ಗ್ಯಾಲಕ್ಸಿ ಅಪಾರ್ಟ್ಮೆಂಟ್ಗೆ ಯುವತಿಯೊಬ್ಬಳು ಕಬ್ಬಿಣದ ಸಲಾಕೆಯನ್ನು ಹಿಡಿದು ಮನೆಯೊಳಗೆ ಪ್ರವೇಶಿಸಲು ಪ್ರಯತ್ನಿಸಿದ್ದಾಳೆ.
Advertisement
ಈ ಸಮಯದಲ್ಲಿ ಮನೆಯ ಕಾವಲುಗಾರರು ಊಟಕ್ಕೆ ಹೋಗಿದ್ದರು. ಆಗ ಯುವತಿ ನೋಡ ನೋಡುತ್ತಿದ್ದಂತೆ ಗೇಟ್ನಿಂದ ಒಳ ಪ್ರವೇಶಿಸಿದ್ದಾಳೆ. ಅಲ್ಲಿದ್ದ ಇನ್ನಿಬ್ಬರು ಕಾವಲುಗಾರರು ಯುವತಿಯನ್ನು ತಡೆಯುವ ಮೊದಲೇ ಆ ಯುವತಿ ಸಲ್ಮಾನ್ ಖಾನ್ ಇರುವ ಫ್ಲಾಟ್ನ ಬಾಗಿಲನ್ನು ಬಡಿದಿದ್ದಾಳೆ. ನಂತರ ಜೋರಾಗಿ,”ಸಲ್ಮಾನ್ ಖಾನ್ ನನ್ನ ಗಂಡ” ಎಂದು ಕಿರುಚಾಡಿದ್ದಾಳೆ.
Advertisement
Advertisement
ಯುವತಿಯ ಕಿರುಚಾಟವನ್ನು ಕೇಳಿ ಮನೆಯೊಳಗೆ ಅಡುಗೆ ಮಾಡುತ್ತಿದ್ದ ಅಡುಗೆಯವರು ಹೊರಗೆ ಏನಾಗುತ್ತಿದೆ ಎಂದು ನೋಡಲು ಬಂದಿದ್ದಾರೆ. ಆದರೆ ಅಷ್ಟರಲ್ಲೇ ಆ ಯುವತಿ ಟೆರೇಸ್ ಮೇಲೆ ಹೋಗಿ, ಕೈಯಲ್ಲಿದ್ದ ನಾಲ್ಕು ಕಬ್ಬಿಣದ ಸಲಾಕೆಯನ್ನು ಹಿಡಿದು ಆತ್ಮಹತ್ಯೆ ಮಾಡಿಕೊಳ್ಳೊತ್ತೇನೆ ಎಂದು ಬೆದರಿಕೆ ಹಾಕಿದ್ದಾಳೆ ಎಂದು ವರದಿಯಾಗಿದೆ.
Advertisement
ಈ ಸಂದರ್ಭದಲ್ಲಿ ಕಾವಲುಗಾರರು ಅಗ್ನಿಶಾಮಕ ದಳದವರನ್ನು ಕರೆಸಿ ಯುವತಿಯ ಮನವೊಲಿಸಿ ಆಕೆಯನ್ನು ಕೆಳಗಿಳಿಸಿದ್ದಾರೆ. ಮತ್ತೆ ಇಂತಹ ಘಟನೆ ಮರುಕಳಿಸದಂತೆ ನೋಡಿಕೊಂಡಿದ್ದಾರೆ.
ಸದ್ಯ ಸಲ್ಮಾನ್ ಖಾನ್ ಈಗ `ರೇಸ್-3′ ಚಿತ್ರದ ಚಿತ್ರೀಕರಣವನ್ನು ಮುಗಿಸಿದ್ದು, ತಮ್ಮ ಮುಂದಿನ ಸಿನಿಮಾ `ಭಾರತ್’ ಚಿತ್ರಕ್ಕೆ ಎಲ್ಲಾ ತಯಾರಿ ನಡೆಸುತ್ತಿದ್ದಾರೆ.