ಮುಂಬೈ: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಎಕ್ಸ್ ಗರ್ಲ್ ಫ್ರೆಂಡ್ ಸಂಗೀತಾ ಬಿಜಲಾನಿ ಕೆಲವು ದಿನಗಳಿಂದ ಕಾಣಿಸಿಕೊಳ್ಳುತ್ತಿಲ್ಲ.
ಕ್ರಿಕೆಟಿಗ ಅಜರುದ್ಧೀನ್ ಅವರಿಂದ ವಿಚ್ಛೇಧನ ಪಡೆದ ಬಳಿಕ ಮತ್ತೊಮ್ಮೆ ತನ್ನ ಮಾಜಿ ಗೆಳಯ ಸಲ್ಮಾನ್ ಖಾನ್ ಜೊತೆ ಕಾಣಿಸಿಕೊಳ್ಳತೊಡಗಿದ್ದರು. ಸಲ್ಮಾನ್ ಮನೆಯ ಪ್ರತಿಯೊಂದು ಕಾರ್ಯಕ್ರಮ ಮತ್ತು ಪೂಜೆ ಸಮಾರಂಭಗಳಲ್ಲಿ ವಿಶೇಷ ಅತಿಥಿಯಾಗಿ ಆಗಮಿಸುತ್ತಿದ್ದರು.
ಆದರೆ ಕೆಲವು ದಿನಗಳಿಂದ ಸಲ್ಮಾನ್ ಜೊತೆ ಕಾಣಿಸಿಕೊಳ್ಳದ ಸಂಗೀತಾ ಮತ್ತೆ ಸಲ್ಲು ಖಾಸಗಿ ಜೀವನದಿಂದ ಹೊರ ನಡೆದರಾ ಎನ್ನುವ ಪ್ರಶ್ನೆ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.
ಸಲ್ಮಾನ್ ಸಹೋದರಿ ಅರ್ಪಿತಾ ಖಾನ್ ಮನೆಯಲ್ಲಿ ನಡೆದ ಗಣಪತಿ ಹಬ್ಬದಲ್ಲಿಯೂ ಸಂಗೀತಾ ಭಾಗಿಯಾಗಿರಲಿಲ್ಲ. ಇನ್ನೂ ಸಲ್ಮಾನ್ ನಟನೆಯ ಟ್ಯೂಬ್ ಲೈಟ್ ಸಿನಿಮಾದ ಎಲ್ಲ ಕಾರ್ಯಕ್ರಮಗಳಿಂದಲೂ ಸಂಗೀತಾ ದೂರ ಉಳಿದಿದ್ದರು.
ಕಾರಣ ಏನು?: ಇಬ್ಬರೂ ಚೆನ್ನಾಗಿಯೇ ಇದ್ದ ದಿಢೀರ್ ಅಂತಾ ಬದಲಾವಣೆಯಾಗಲು ಸಲ್ಮಾನ್ ಖಾನ್ ಅವರ ಸದ್ಯದ ಗೆಳತಿ ಲುಲಿಯಾ ವಂಟೂರ್ ಎಂದು ಹೇಳಲಾಗುತ್ತಿದೆ. ಈ ಹಿಂದೆ ಹಲವು ಕಾರ್ಯಕ್ರಮಗಳಲ್ಲಿ ಲೂಲಿಯಾ ಮತ್ತು ಸಂಗೀತಾ ಮುಖಾಮುಖಿ ಆಗಿದ್ದಾರೆ. ಆದರೂ ಈ ವಿಷಯವನ್ನು ಮಾತ್ರ ಇಬ್ಬರೂ ಎಲ್ಲಿಯೂ ಸಾರ್ವಜನಿಕವಾಗಿ ಇದೂವರೆಗೂ ಹೇಳಿಕೊಂಡಿಲ್ಲ.
ಇದನ್ನೂ ಓದಿ: 2-3 ವರ್ಷಗಳಲ್ಲಿ ನಾನು ತಂದೆಯಾಗಲಿದ್ದೇನೆ: ಸಲ್ಮಾನ್ ಖಾನ್
ಒಂದು ಕಾಲವಿತ್ತು ಸಂಗೀತಾ ಯಾವಾಗಲೂ ಸಲ್ಮಾನ್ ಮನೆಗೆ ವಿಶೇಷ ಆಹ್ವಾನಿತರಾಗಿರುತ್ತಿದ್ರು. ಸಲ್ಮಾನ್ ಸಹೋದರಿ ಅರ್ಪಿತಾ ಸೀಮಂತಕ್ಕೆ ಆಗಮಿಸಿದ್ದ ಸಂಗೀತಾರನ್ನು ಸಲ್ಮಾನ್ ಖುದ್ದಾಗಿ ತಾವೇ ಹೊರಗಡೆವರೆಗೂ ಬಂದು ಬೀಳ್ಕೊಟ್ಟಿದ್ದರು. ಕಳೆದ ವರ್ಷ ಈದ್ ವೇಳೆ ಬಾಬಾ ಸಿದ್ಧೀಕಿ ಅವರ ಇಫ್ತಾರ್ ಕೂಟದಲ್ಲಿಯೂ ಜೊತೆಯಾಗಿ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ: ಸಲ್ಮಾನ್ ಖಾನ್ ತನ್ನ 20 ಬಾಡಿಗಾರ್ಡ್‍ಗಳನ್ನ ಒಮ್ಮೆಲೆ ಕೆಲಸದಿಂದ ತೆಗೆದಿದ್ದರ ಹಿಂದಿನ ಕಾರಣ ಇಲ್ಲಿದೆ