ಸಲ್ಮಾನ್ ಖಾನ್ ಮಾಜಿ ಭದ್ರತಾ ಸಿಬ್ಬಂದಿಯನ್ನು ಹಗ್ಗದಿಂದ ಕಟ್ಟಿ ಎಳೆದೊಯ್ದ ಪೊಲೀಸರು

Public TV
1 Min Read
Salman Boduguard f

ಮುಂಬೈ: ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಮಾಜಿ ಬಾಡಿಗಾರ್ಡ್ ಓರ್ವನನ್ನು ಹಗ್ಗದಿಂದ ಕಟ್ಟಿ ಪೊಲೀಸರು ಕರೆದುಕೊಂಡು ಹೋಗಿದ್ದಾರೆ.

ಉತ್ತರ ಪ್ರದೇಶದ ಮುರದಾಬಾದ್ ಪೊಲೀಸರು ಅನಸ್ ಕುರೇಶಿಯನ್ನು ಬಂಧಿಸಿದ್ದಾರೆ. ಬಂಧಿತ ಅನಸ್ ಈ ಹಿಂದೆ ಸಲ್ಮಾನ್ ಖಾನ್ ಬಾಡಿಗಾರ್ಡ್ ಆಗಿ ಕೆಲಸ ಮಾಡುತ್ತಿದ್ದನು. ಸ್ಟೆರಾಯ್ಡ್ ನಶೆಯಲ್ಲಿದ್ದ ಅನಸ್ ರಸ್ತೆಯಲ್ಲಿ ಗಲಾಟೆ ಮಾಡುತ್ತಿದ್ದನು. ಓವರ್ ಡೋಸ್ ಸ್ಟೆರಾಯ್ಡ್ ಸೇವನೆಯಿಂದ ತನ್ನ ಸ್ಥಿಮಿತ ಕಳೆದುಕೊಂಡಿದ್ದ ಅನಸ್ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದನು.

salman bodyguard 1

ನಶೆಯಲ್ಲಿ ಸಾರ್ವಜನಿಕರ ಮೇಲೆ ಹಲ್ಲೆ ನಡೆಸುತ್ತಿದ್ದನು. ಹಾಗೆ ರಾಡ್ ನಿಂದ ವಾಹನಗಳನ್ನು ಜಖಂಗೊಳಿಸುತ್ತಿದ್ದನು. ಎದುರಿಗೆ ಬರುತ್ತಿದ್ದ ಎಲ್ಲ ವಾಹನಗಳನ್ನು ಜಖಂಗೊಳಿಸುತ್ತಿದ್ದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಬಲಿಷ್ಠನಾಗಿದ್ದ ಅನಸ್ ಯಾರ ನಿಯಂತ್ರಣಕ್ಕೂ ಸಿಗುತ್ತಿರಲಿಲ್ಲ. ಕೊನೆಗೆ ಪೊಲೀಸರು ಸ್ಥಳೀಯರ ಸಹಾಯದೊಂದಿಗೆ ಹಗ್ಗದಿಂದ ಆತನ ಕೈ, ಕಾಲುಗಳನ್ನು ಕಟ್ಟಿ ಬಂಧಿಸಿದ್ದಾರೆ. ಓವರ್ ಡೋಸ್ ಸ್ಟೆರಾಯ್ಡ್ ನಿಂದಾಗಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ಅನಸ್ ನನ್ನು ಪೊಲೀಸರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮೆಂಟಲ್ ಆಸ್ಪತ್ರೆಗೆ ರವಾನಿಸಲಾಗಿದೆ.

salman khan

ಅನಸ್ ಹತ್ತು ದಿನಗಳ ಹಿಂದೆ ಮುರದಾಬಾದ್ ನಲ್ಲಿ ನಡೆದ ಪವರ್ ಲಿಫ್ಟಿಂಗ್ ಸ್ಫರ್ಧೆಗೆ ಭಾಗವಹಿಸಲು ಬಂದಿದ್ದನು. ಮಿಸ್ಟರ್ ಮುರದಾಬಾದ್ ಪಟ್ಟ ಪಡೆದುಕೊಳ್ಳಲು ಮುಂದಾಗಿದ್ದ ಅನಸ್ ಎರಡನೇ ಸ್ಥಾನ ಪಡೆದಿದ್ದನು. ಇದರಿಂದ ಕುಗ್ಗಿದ್ದ ಅನಸ್ ಓವರ್ ಡೋಸ್ ಸ್ಟೆರಾಯ್ಡ್ ತೆಗೆದುಕೊಂಡಿದ್ದನು. ಈ ಹಿಂದೆ ಎರಡು ವರ್ಷಗಳ ಕಾಲ ಸಲ್ಮಾನ್ ಖಾನ್ ಬಾಡಿಗಾರ್ಡ್ ಆಗಿ ಕೆಲಸ ಮಾಡಿದ್ದ ಅನಸ್, ಸದ್ಯ ಮಹಾರಾಷ್ಟ್ರದ ಸಚಿವರ ಬಾಡಿಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *