ಬಾಲಿವುಡ್ ಬಾಯಿಜಾನ್ ಸಲ್ಮಾನ್ ಖಾನ್ (Salman Khan) ಅಭಿನಯದ ಬ್ಯಾಟಲ್ ಆಫ್ ಗಲ್ವಾನ್ ಸಿನಿಮಾ ರಿಲೀಸ್‌ಗೆ ರೆಡಿಯಾಗಿ ನಿಂತಿದೆ. ಅಂದುಕೊಂಡಂತೆ ಆಗಿದ್ರೆ ಇದೇ ಮಾರ್ಚ್ 19ರಂದು ಸಿನಿಮಾ ರಿಲೀಸ್ ಆಗ್ಬೇಕಿತ್ತು. ಆ ದಿನ ದುರಂಧರ್-2 ಹಾಗೂ ಟಾಕ್ಸಿಕ್ ಸಿನಿಮಾ ರಿಲೀಸ್ ಆಗ್ತಿರುವ ಕಾರಣದಿಂದ ತಮ್ಮ ಸಿನಿಮಾವನ್ನ ಪೋಸ್ಟ್‌ಪೋನ್ ಮಾಡಿಕೊಂಡಿದ್ದಾರೆ. ಇದೀಗ ತಮ್ಮ ಅಭಿಮಾನಿಗಳಿಗೆ ಮತ್ತೊಂದು ಗುಡ್‌ನ್ಯೂಸ್ ಕೊಟ್ಟಿದ್ದಾರೆ ಸಲ್ಲುಮಿಯಾ.
ಹೌದು, ಫ್ಯಾಮಿಲಿ ಮ್ಯಾನ್, ಸಿಟಡೆಲ್ ಹನಿಬನಿ ವೆಬ್ ಸರಣಿಗಳನ್ನ ನಿರ್ದೇಶನ ಮಾಡಿದ್ದ ರಾಜ್ & ಡಿಕೆ ಜೋಡಿಯ ಜೊತೆ ಕೈಗೂಡಿಸುತ್ತಿದ್ದಾರೆ ಸಲ್ಮಾನ್ ಖಾನ್. ಇತ್ತೀಚೆಗೆ ನಟಿ ಸಮಂತಾ ರುತ್‌ಪ್ರಭು ಕೈ ಹಿಡಿದಿರುವ ರಾಜ್ ನಿಧಿಮೋರು (Raj Nidimoru) ಜೊತೆ ಬ್ಯಾಡ್‌ಬಾಯ್ ತಮ್ಮ ಮುಂದಿನ ಸಿನಿಮಾದ ಚರ್ಚೆ ನಡೆಸಿದ್ದಾರಂತೆ.ಇದನ್ನೂ ಓದಿ: ಕದ್ದುಮುಚ್ಚಿ ರೋಮ್‌ಗೆ ಹೋಗಿದ್ದ ರಶ್ಮಿಕಾ, ವಿಜಯ್ ಬರುವಾಗ ಸಿಕ್ಕಿಬಿದ್ರು
ಸಲ್ಮಾನ್ ಖಾನ್ ನಟನೆಯ ಬ್ಯಾಟಲ್ ಆಫ್ ಗಲ್ವಾನ್ ಸಿನಿಮಾ ಪೋಸ್ಟ್ ಪೋನ್ ಆದ ಈ ಗ್ಯಾಪ್‌ನಲ್ಲಿ ಸಿನಿಮಾದ ತಯಾರಿಯನ್ನ ಮಾಡಿಕೊಳ್ಳುತ್ತಿದ್ದಾರೆ. ಆ್ಯಕ್ಷನ್-ಕಾಮಿಡಿ ಜಾನರ್‌ನ ಸಿನಿಮಾ ಮಾಡಲು ಈ ಜೋಡಿಗಳು ಒಂದಾಗಲಿದ್ದು, ಬಾಲಿವುಡ್‌ನಲ್ಲಿ ಸಾಕಷ್ಟು ಕ್ಯೂರಿಯಾಸಿಟಿ ಹೆಚ್ಚಿಸಿದೆ.


